For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗುವಿನ ನಿರೀಕ್ಷೆಯಲ್ಲಿ 'ಅಮೇರಿಕಾ ಅಮೇರಿಕಾ' ನಾಯಕಿ

  By Pavithra
  |
  ಎರಡನೆ ಮಗುವಿನ ನಿರೀಕ್ಷೆಯಲ್ಲಿ ಅಮೆರಿಕ ಅಮೆರಿಕ ನಟಿ..!! | Filmibeat Kannada

  ಹೇಮಾ ಪಂಚಮುಖಿ.. ಕನ್ನಡದಲ್ಲಿ ಅಭಿನಯಿಸಿದ್ದು ಕೆಲವೇ ಕೆಲವು ಚಿತ್ರಗಳು ಆದರೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಶಾಶ್ವತ ನೆಲೆಯನ್ನು ಕಂಡುಕೊಂಡ ನಾಯಕಿ. ಆಯ್ದ ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡು ನಂತರ ಮದುವೆ ಆಗಿ ಚಿತ್ರರಂಗದಿಂದ ಕಾಣೆ ಆಗಿದ್ದರು.

  ನಂತರ ಹಲವಾರು ವರ್ಷಗಳು ಬಿಟ್ಟು ಮತ್ತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡ ನಟಿ ಹೇಮಾ ಇತ್ತೀಚಿಗಷ್ಟೆ ನಟ ಪ್ರಶಾಂತ್ ಗೋಪಾಲ್ ಅವರೊಂದಿಗೆ ಎರಡನೇ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ರಂಗೋಲಿ ಚಿತ್ರದ ನಾಯಕನನ್ನ ಮದುವೆಯಾದ ನಟಿ ಹೇಮಾ ಪಂಚಮುಖಿ ರಂಗೋಲಿ ಚಿತ್ರದ ನಾಯಕನನ್ನ ಮದುವೆಯಾದ ನಟಿ ಹೇಮಾ ಪಂಚಮುಖಿ

  ಸಿನಿಮಾರಂಗದವರ ಒಡನಾಟವಿದ್ದರೂ ಚಿತ್ರಗಳಲ್ಲಿ ಅಭಿನಯಿಸದೆ ತಾನು ತನ್ನ ಡ್ಯಾನ್ಸ್ ಕ್ಲಾಸ್ ಅಂತಿರುವ ನಟಿ ಹೇಮಾ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಹಾಗೂ ಸೀಮಂತ ಎರಡೆರೆಡು ಸಂಭ್ರಮವನ್ನು ಒಟ್ಟಿಗೆ ಆಚರಣೆ ಮಾಡಿಕೊಂಡಿದ್ದಾರೆ. ಹೇಗಿತ್ತು ಹೇಮಾ ಪಂಚಮುಖಿ ಹುಟ್ಟುಹಬ್ಬ ಹಾಗೂ ಸೀಮಂತದ ಸಂಭ್ರಮ. ಫೋಟೊಗಳ ಮೂಲಕ ನೋಡಿ

  ಎರಡನೇ ಮಗು ನಿರೀಕ್ಷೆಯಲ್ಲಿ ದೊರೆ ನಾಯಕಿ

  ಎರಡನೇ ಮಗು ನಿರೀಕ್ಷೆಯಲ್ಲಿ ದೊರೆ ನಾಯಕಿ

  ನಟಿ ಹೇಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಹೇಮಾ ಹಾಗೂ ನಟ ಪ್ರಶಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  ಸೀಮಂತದ ಸಂಭ್ರಮದಲ್ಲಿ ನಟಿ ಹೇಮಾ

  ಸೀಮಂತದ ಸಂಭ್ರಮದಲ್ಲಿ ನಟಿ ಹೇಮಾ

  ನಟಿ ಹೇಮಾ ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಅವರ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಸೀಮಂತದ ಫೋಟೋಗಳು ಫೇಸ್ ಬುಕ್ ನಲ್ಲಿ ವೈರಲ್ ಆಗಿವೆ.

  ಅಮ್ಮನಂತೆ ಮಗಳು ನೃತ್ಯಗಾರ್ತಿ

  ಅಮ್ಮನಂತೆ ಮಗಳು ನೃತ್ಯಗಾರ್ತಿ

  ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದು ಆಕೆ ಕೂಡ ಅಮ್ಮನಂತೆ ಭರತನಾಟ್ಯ ನೃತ್ಯಗಾರ್ತಿ. ಚಿಕ್ಕದಿನಿಂದಲೇ ಅಮ್ಮನ ಬಳಿ ಶ್ರದ್ಧೆಯಿಂದ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.

  ನಾಟ್ಯಸುಕೃತ ಮೂಲಕ ನೃತ್ಯಾಭ್ಯಾಸ

  ನಾಟ್ಯಸುಕೃತ ಮೂಲಕ ನೃತ್ಯಾಭ್ಯಾಸ

  ಹೇಮ ಹಾಗೂ ಪ್ರಶಾಂತ್ ಇಬ್ಬರು ಸೇರಿ ಈಗ ನಾಟ್ಯಸುಕೃತ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಇಬ್ಬರು ವೇದಿಕೆ ಏರಿ ಅಭಿಮಾನಿ ಹಾಗೂ ಪ್ರೇಕ್ಷಕರ ಮುಂದೆ ನೃತ್ಯವನ್ನು ಪ್ರದರ್ಶಿಸುವುರ ಜೊತೆಯಲ್ಲಿ ಅನೇಕರಿಗೆ ನೃತ್ಯವನ್ನು ಕಲಿಸುತ್ತಿದ್ದಾರೆ.

  English summary
  Kannada actress Hema Panchamukhi is expecting a second child. A couple of months ago, Hema Panchamukhi had a second marriage with Prashant.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X