»   » ಜೆ.ಕೆ, ಸಂಯುಕ್ತ ಅವರನ್ನು ಪತ್ತೆ ಹಚ್ಚಿ ಸೂಕ್ತ ಬಹುಮಾನ ಗೆಲ್ಲಿ

ಜೆ.ಕೆ, ಸಂಯುಕ್ತ ಅವರನ್ನು ಪತ್ತೆ ಹಚ್ಚಿ ಸೂಕ್ತ ಬಹುಮಾನ ಗೆಲ್ಲಿ

Posted By:
Subscribe to Filmibeat Kannada

ಹಿರಿತೆರೆ ಮತ್ತು ಕಿರುತೆರೆಯಲ್ಲಿ ಜನಪ್ರಿಯರಾಗಿರುವ ನಟ ಜೆ.ಕೆ ನಟ ವಿಜಯ್ ಸೂರ್ಯ, ನಟಿ ಸಂಯುಕ್ತಾ ಬೆಳವಾಡಿ ಇದೀಗ ವಾಂಟೆಡ್ ಲಿಸ್ಟ್ ನಲ್ಲಿದ್ದಾರೆ. ನಿಮಗೆ ಎಲ್ಲಾದರೂ ಇವರು ಕಂಡುಬಂದಲ್ಲಿ ತಕ್ಷಣ ನಮಗೆ ತಿಳಿಸಿ ಅಂತ ಕರ್ನಾಟಕ ಪೊಲೀಸ್ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಹೀಗಂತ ಸುಮಾರು ಪೋಸ್ಟರ್ ಗಳು ಇಡೀ ಬೆಂಗಳೂರು ನಗರಾದ್ಯಂತ ಹಲವಾರು ಕಡೆ ರಾರಾಜಿಸುತ್ತಿದೆ. ಏನಪ್ಪಾ ಇದು? ಜೆಕೆ ಏನು ಮಾಡಿದ್ದಾರೆ ಅಂತ ಅಭಿಮಾನಿಗಳು ಗಾಬರಿ ಬಿದ್ರೆ, ಇನ್ನು ಕೆಲವರು ಆಶ್ಚರ್ಯದಿಂದ ಹುಬ್ಬು ಮೇಲಕ್ಕೇರಿಸಿದ್ದಾರೆ.['ಮತ್ತೊಮ್ಮೆ ಶ್' ಅನ್ನುತ್ತಿದ್ದ ಹೇಮಂತ್ ಈಗ 'ಸ' ಅನ್ನುತ್ತಿದ್ದಾರೆ..!]

Hemanth Hegde's 'Sa' Movie team create the news for publicity

ಅಂದಹಾಗೆ ಏನಾಯ್ತಪ್ಪಾ ಅಂತ ನೀವು ತಲೆಯಲ್ಲಿ ಹುಳ ಬಿಟ್ಟುಕೊಳ್ಳಬೇಡಿ. ಅಷ್ಟಕ್ಕೂ ವಿಷ್ಯಾ ಏನಪ್ಪಾ ಅಂದ್ರೆ ಇದು 'ಸ' ಚಿತ್ರತಂಡದವರು ಪ್ರಚಾರಕ್ಕಾಗಿ ಮಾಡಿರುವ ಹೊಸ ಗಿಮಿಕ್ ಅಷ್ಟೇ.

ನಿಂಬೆಹುಳಿ ನಿರ್ದೇಶಕ ಹೇಮಂತ್ ಹೆಗ್ಡೆ ಅವರು 'ಸ' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಮಾಹಿತಿಯನ್ನು ಜಗತ್ತಿಗೆ ತಿಳಿಸುವ ಮುನ್ನ ಈ ರೀತಿ ಗಿಮಿಕ್ ಗಳನ್ನು ಮಾಡಿ ಚಿತ್ರದ ಬಗ್ಗೆ ಹೈಪ್ ಕ್ರಿಯೇಟ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋಕೆ ಚಿತ್ರತಂಡ ಹೊಸ ತಂತ್ರ ಮಾಡಿದೆ.[ಹೇಮಂತ್ ಹೆಗಡೆ ಆಕ್ಷನ್ ಕಟ್ ನಲ್ಲಿ 'ಮತ್ತೊಮ್ಮೆ ಶ್' ]

ಚಿತ್ರದಲ್ಲಿ 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟ ಜೆ.ಕೆ, 'ಅಗ್ನಿಸಾಕ್ಷಿ' ಖ್ಯಾತಿಯ ನಟ ವಿಜಯ್ ಸೂರ್ಯ ಮತ್ತು ನಟಿ ಸಂಯುಕ್ತ ಬೆಳವಾಡಿ ಅವರು ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಆದ್ದರಿಂದ ಸದ್ಯಕ್ಕೆ ಈ ಮೂರು ಜನರ ಜೊತೆ ನಿರ್ದೇಶಕ ಹೇಮಂತ್ ಅವರು ಕೂಡ ಎಲ್ಲರ ದೃಷ್ಟಿಯಲ್ಲಿ ವಾಂಟೆಡ್ ಲಿಸ್ಟ್ ನಲ್ಲಿದ್ದಾರೆ.

-
-
-
-
-
-
English summary
After 'Nimbehuli' actor cum director Hemanth Hegde back to action. This time he picked horror thiriller subject for his upcoming movie. The movie titled as 'Sa'. Kannada Actor Karthik Jayaram (JK), Kannada Actor Vijay Surya, Kannada Actress Samyuktha Belawadi in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada