ಹೇಮಶ್ರೀ ನಿಗೂಢ ಸಾವು ಬೂದಿಮುಚ್ಚಿದ ಕೆಂಡ
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಕಳುಹಿಸಿರುವ ಮರಣೋತ್ತರ ಪರೀಕ್ಷೆಯಲ್ಲೂ ಹೇಮಶ್ರೀ ಸಾವಿಗೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಏತನ್ಮಧ್ಯೆ ಬರಬೇಕಾಗಿದ್ದ ವಿಧಿ ವಿಜ್ಞಾನ ಪ್ರಯೋಗ ಇಲಾಖೆಯ ವರದಿ ಇನ್ನೂ ಪೊಲೀಸರ ಕೈಸೇರಿಲ್ಲ. ಅದು ಬರುವುದು ಮತ್ತಷ್ಟು ತಡವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಆ ವರದಿ ಪೊಲೀಸರ ಕೈಸೇರಿದರೆ ಈ ಹೇಮಶ್ರೀ ಸಾವಿನ ಹಿಂದಿನ ರಹಸ್ಯ ಬಯಲಾಗಬಹುದು. ಈಗಾಗಲೆ ಹೇಮಶ್ರೀ ಪತಿ ಸುರೇಂದ್ರ ಬಾಬು, ಆಕೆಯ ಸಂಬಂಧಿಕರು, ಸ್ನೇಹಿತರಿಂದ ಹಲವು ಮಾಹಿತಿ ಲಭ್ಯವಾಗಿದೆ. ಹೇಮಶ್ರೀ ಸಾವಿಗೆ ನಿಖರವಾದ ಕಾರಣವೂ ಗೊತ್ತಾಗಿದೆಯಂತೆ.
ಆದರೆ ವಿಧಿ ವಿಜ್ಞಾನ ಪ್ರಯೋಗಾಲದ ವರದಿ ಬಂದ ಬಳಿಕವಷ್ಟೇ ಪೊಲೀಸರು ಸಾವಿನ ರಹಸ್ಯವನ್ನು ಬಹಿರಂಗಪಡಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಈ ಪ್ರಕರಣದ ಪ್ರಮುಖ ಸಾಕ್ಷಿ ಸುರೇಂದ್ರ ಬಾಬು ಅವರ ಕಾರಿನ ಚಾಲಕ ಸತೀಶ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.
ಈ ಮಧ್ಯೆ ಹೇಮಶ್ರೀ ಗೆಳೆಯ ಎನ್ನಲಾಗಿರುವ ಮಂಜುನಾಥನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದಿಷ್ಟೇ ಅಲ್ಲದೆ ಅನಂತಪುರಂ ಫಾರಂ ಹೌಸ್ ಮಾಲೀಕ ಮುರಳಿ ಹಾಗೂ ಸುರೇಂದ್ರ ಬಾಬು ಸ್ನೇಹಿತ ಕೃಷ್ಣ ಎಂಬುವವರಿಂದಲೂ ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. (ಏಜೆನ್ಸೀಸ್)


Click it and Unblock the Notifications












