ನಟಿ ಹೇಮಶ್ರೀ ಪತಿ ಸುರೇಂದ್ರ ಬಾಬು ಏನು ಎತ್ತ?

By ರವಿಕಿಶೋರ್

R Surendra Babu
ನಟಿ ಹೇಮಶ್ರೀ ಅವರ ಪತಿ ಆರ್ ಸುರೇಂದ್ರ ಬಾಬು ಅವರು ರಿಯಲ್ ಎಸ್ಟೇಟ್ ಉದ್ಯಮಿ. ಇವರ ವಿರುದ್ಧ ಹಲವಾರು ಆರೋಪಗಳು ಇವೆ. ಹೇಮಶ್ರೀ ಅವರ ಜೊತೆ ಸುರೇಂದ್ರ ಮದುವೆ ಜೂ.22, 2011ರಲ್ಲಿ ನಡೆದಿತ್ತು.

ಮದುವೆ ಸಂದರ್ಭದಲ್ಲಿ ಹೇಮಶ್ರೀಗೆ ಸುಮಾರು 50 ಲಕ್ಷ ರು. ಬೆಲೆಬಾಳುವ ಚಿನ್ನಾಭರಣಗಳನ್ನು ವಧುದಕ್ಷಿಣೆಯಾಗಿ ಬಾಬು ನೀಡಿದ್ದರು ಎನ್ನಲಾಗಿದೆ. ಹೇಮಶ್ರೀ ಅವರ ತಂದೆ ನಾಗರಾಜ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ವಿಷಯವನ್ನೂ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

2009ರಲ್ಲಿ ಲೋಕಸಭೆ ಚುನಾವಣೆಗೂ ಸುರೇಂದ್ರ ಬಾಬು ಸ್ಪರ್ಧಿಸಿದ್ದ. ಜೆಡಿಎಸ್ ಅಭ್ಯರ್ಥಿಯಾಗಿ 2009ರ ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈತನಿಂದ ತನಗೆ ಬಿಡುಗಡೆಗೊಳಿಸಿ ಎಂದೂ ಹೇಮಶ್ರೀ ಪೊಲೀಸರಿಗೆ ಮೊರೆ ಹೋಗಿದ್ದರಂತೆ.

ಈ ಸಂಬಂಧ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆ ಹಾಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೂ ಈಕೆಗೆ ತನ್ನ ಗಂಡನಿಂದ ಬಿಡುಗಡೆ ಸಿಕ್ಕಿರಲಿಲ್ಲ. ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡಿದ ಬಳಿಕ ಹೇಮಶ್ರೀ ಅವರನ್ನು ಬಾಬು ವರಿಸಿದ್ದಾರೆ ಎನ್ನಲಾಗಿದೆ.

More from Filmibeat

English summary
Who is R. Surendra Babu, husband of popular Kannada film and television actor H.N. Hemashree (30), in connection with her mysterious death on 10th October evening. Babu had contested in the general elections in 2009 from the JD(S) ticket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X