ಈ ಕಾರಣಕ್ಕಾಗಿ ರಶ್ಮಿಕಾ ಚಿತ್ರರಂಗಕ್ಕೆ ಬರುವುದು ಬೇಡ ಎಂದಿದ್ದರಂತೆ ತಂದೆ-ತಾಯಿ
Recommended Video
ಸ್ಮೈಲಿಂಗ್ ಕ್ವೀನ್ ರಶ್ಮಿಕಾ ಮಂದಣ್ಣ ಅವರಿಗೆ ನಗವೇ ಅಂದ ಚೆಂದ. ಅವರ ಸೌಂದರ್ಯಕ್ಕೆ ಹೇಳಿ ಮಾಡಿಸಿದ ನಗು ಅವರದ್ದು. ಆ ಸ್ಮೈಲ್ ನೋಡಿಯೇ ಅದೇಷ್ಟೋ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂತಹ ನಗುಮುಖದ ಕೊಡಗಿನ ಚೆಲುವೆ ಭಾವುಕರಾಗಿದ್ದು ಬಹಳ ಅಪರೂಪ. ಬಹುಶಃ ಭಾವುಕರಾಗಿ, ಅಳುಮುಂಜಿ ರಶ್ಮಿಕಾ ಅವರನ್ನ ನೋಡಿದ್ದು ಕಮ್ಮಿ.
ಇಂತಹ ರಶ್ಮಿಕಾ ಡಿಯರ್ ಕಾಮ್ರೇಡ್ ಚಿತ್ರದ ಪ್ರಚಾರದ ವೇಳೆ ಭಾವುಕರಾದ ಘಟನೆ ನಡೆದಿದೆ. 'ಪ್ರತಿ ಬಾರಿಯೂ ನಾನು ಫೈಟ್ ಮಾಡುತ್ತಲೇ ಬರುತ್ತಿದ್ದೇನೆ, ಮನೆಯವರೇ ಬೇಡ ಎಂದರೂ ಅವರನ್ನ ಒಪ್ಪಿಸಿ ಮುಂದೆ ಸಾಗುತ್ತಿದ್ದೇನೆ'' ಎಂದು ಎಮೋಷನ್ ಗೆ ಒಳಗಾದರು.
ಇದೇ ವೇಳೆ ಸಿನಿಮಾ ಇಂಡಸ್ಟ್ರಿಗೆ ಹೋಗಬೇಡ, ಅದು ನಿನಗೆ ಬೇಡ ಎಂದು ಮನೆಯವರು ನಿರಾಕರಿಸಿದ್ದರಂತೆ. ಅದಕ್ಕೆ ಕಾರಣ ಕೂಡ ಹೇಳಿದ್ದರಂತೆ. ಆದರೂ ಇಂಡಸ್ಟ್ರಿಗೆ ಬಂದ ರಶ್ಮಿಕಾ ಈಗಲೂ ಫೈಟ್ ಮಾಡುತ್ತಲೇ ಇದ್ದಾರಂತೆ. ಅಷ್ಟಕ್ಕೂ, ರಶ್ಮಿಕಾ ಭಾವುಕಾರಾಗಿದ್ದು ಯಾಕೆ? ಮನೆಯವರು ಯಾಕೆ ರಶ್ಮಿಕಾ ಇಂಡಸ್ಟ್ರಿಗೆ ಬರುವುದನ್ನ ನಿರಾಕರಿಸಿದ್ದರು? ಮುಂದೆ ಓದಿ...

ಅಮ್ಮ-ಅಪ್ಪನ ಜೊತೆ ಫೈಟ್ ಮಾಡಿ ಬಂದಿದ್ದು
''ನಾನು ಸಿನಿಮಾ ಇಂಡಸ್ಟ್ರಿಗೆ ಬರಬೇಕಾದರೆ, ಅಮ್ಮ-ಅಪ್ಪ ಕುಟುಂಬ, ಸ್ನೇಹಿತರು ಎಲ್ಲರ ಬಳಿಯೂ ಫೈಟ್ ಮಾಡಿ ಬಂದಿದ್ದು. ಯಾಕಂದ್ರೆ, ಯಾರಿಗೂ ನಾನು ಸಿನಿಮಾ ಲೋಕಕ್ಕೆ ಬರುವುದು ಇಷ್ಟವಿರಲಿಲ್ಲ. ಆದರೂ ಅವರನ್ನೆಲ್ಲ ಒಪ್ಪಿಸಿ, ಸಮಾಧಾನ ಮಾಡಿ ನಾನು ಇಂಡಸ್ಟ್ರಿಗೆ ಬಂದೆ''
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ರಶ್ಮಿಕಾಗೆ ಜಗ್ಗೇಶ್ ಎಚ್ಚರಿಕೆ

ಸಿನಿಮಾ ಇಂಡಸ್ಟ್ರಿ ಸರಿಯಿಲ್ಲ
''ಸಿನಿಮಾ ಇಂಡಸ್ಟ್ರಿ ತುಂಬಾ ಕೆಟ್ಟದ್ದು, ಅಲ್ಲಿ ಹುಡುಗಿಯರಿಗೆ ರಕ್ಷಣೆ ಇಲ್ಲ ಎಂದು ಎಲ್ಲರೂ ಬುದ್ದಿ ಹೇಳಿದರು. ಆದರೂ ನಾನು ಬಂದೆ. ಚಿತ್ರರಂಗದ ಕುಟುಂಬ ಹಿನ್ನೆಲೆ ಇಲ್ಲ. ಆದರೂ ನಾನು ಬಂದೆ, ಈಗ ಇಲ್ಲಿ ಇದ್ದೀನಿ'' ಎಂದು ಮನಬಿಚ್ಚಿ ಮಾತನಾಡಿದರು. ದಿಢೀರ್ ಅಂತಹ ರಶ್ಮಿಕಾ ಮನಸ್ಸಲ್ಲಿ ಇದನ್ನೆಲ್ಲಾ ಯಾಕೆ ಹೇಳ್ಬೇಕು ಅನಿಸುತ್ತೋ ಗೊತ್ತಿಲ್ಲ.
'ಡಿಯರ್ ಕಾಮ್ರೇಡ್ ಮಾಡಿದ್ದು ದೇವರಕೊಂಡಗೋಸ್ಕರ ಅಲ್ಲ': ರಶ್ಮಿಕಾ

ಮಗಳ ಬಗ್ಗೆ ಮುಂದಾಲೋಚನೆ.!
ಸಿನಿಮಾ ಇಂಡಸ್ಟ್ರಿ ಅಂದ್ಮೇಲೆ ಗಾಸಿಪ್, ಸಂಬಂಧಗಳು, ಲವ್ವ, ರಿಲೇಷನ್ ಷಿಪ್ ಇದೆಲ್ಲವೂ ಇರುತ್ತೆ ಎಂಬುದನ್ನ ಮೊದಲೇ ಅರಿತಿದ್ದ ರಶ್ಮಿಕಾ ಪೋಷಕರು, ಬಣ್ಣದ ಜಗತ್ತು ಬೇಡ ಎಂದು ಮೊದಲೇ ನಿರಾಕರಿಸಿದ್ದರು. ಆದರೆ, ರಶ್ಮಿಕಾ ಜೀವನದಲ್ಲಿ ಅಂತಹದ್ದೇ ಬೆಳವಣಿಗೆ ನಡೆಯಿತು. ಸಿನಿಮಾ ನಟನ ಜೊತೆ ಲವ್ವು, ನಿಶ್ಚಿತಾರ್ಥವೂ ಆಯಿತು. ಆಮೇಲೆ ಬ್ರೇಕ್ ಅಪ್ ಆಯಿತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ದಿ ಬೆಸ್ಟ್ ಎಂಬ ಅಭಿಪ್ರಾಯ ಬಂತು.

ಬಹುಬೇಡಿಕೆಯ ನಟಿ ರಶ್ಮಿಕಾ
ಹಾಗ್ನೋಡಿದ್ರೆ, ರಶ್ಮಿಕಾ ಖಾಸಗಿ ಜೀವನಕ್ಕಿಂತ ವೃತ್ತಿ ಬಹಳ ಚೆನ್ನಾಗಿ ಹೋಗ್ತಿದೆ. ದರ್ಶನ್, ಗಣೇಶ್, ಪುನೀತ್ ಅಂತಹ ಕನ್ನಡದ ನಟರ ಜೊತೆ ನಟಿಸಿದರು. ತೆಲುಗಿನಲ್ಲಿ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು, ತಮಿಳಿನಲ್ಲಿ ಕಾರ್ತಿ ಜೊತೆಯೂ ನಟಿಸುತ್ತಿದ್ದಾರೆ. ಸದ್ಯ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ.


Click it and Unblock the Notifications











