twitter
    For Quick Alerts
    ALLOW NOTIFICATIONS  
    For Daily Alerts

    ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜಯಂತಿ ಇನ್ಮುಂದೆ 'ನಿರ್ದೇಶಕ ದಿನ': ಫಿಲ್ಮ್ ಚೇಂಬರ್ ನಿರ್ಧಾರ

    |

    ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇಂದು (ಡಿಸೆಂಬರ್ 1) ಕನ್ನಡದ ಅದ್ವಿತೀಯ ನಿರ್ದೇಶಕರ ಜನ್ಮದಿನ. ಈ ಅಂಗವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುಟ್ಟಣ್ಣ ಕಣಗಲ್ ಜಯಂತಿಯನ್ನು ಆಚರಣೆ ಮಾಡಿದೆ. ಈ ಸಂದರ್ಭದಲ್ಲಿ ದಿವಂಗತ ಪುಟ್ಟಣ್ಣ ಕಣಗಲ್ ಜನ್ಮದಿನವನ್ನು 'ನಿರ್ದೇಶಕರ ದಿನ' ಎಂದು ಆಚರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.

    ಕರ್ನಾಟಕ ಫಿಲ್ಮ್ ಚೇಂ‍ಬರ್ ಅಧ್ಯಕ್ಷ ಭಾ.ಮ ಹರೀಶ್ ಈ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಇನ್ನುಂದೆ ಪುಟ್ಟಣ್ಣ ಕಣಗಾಲ್ ದಿನವನ್ನು ನಿರ್ದೇಶಕ ದಿನವೆಂದು ಆಚರಣೆ ಮಾಡಲಾಗುತ್ತೆ. " ತೆಲುಗು ಚಿತ್ರರಂಗದಲ್ಲೂ 'ನಿರ್ದೇಶಕರ ದಿನ' ಎಂದಿದೆ. ಹೀಗಾಗಿ ನಮ್ಮಲ್ಲೂ ಪ್ರತಿ ವರ್ಷ ಡಿಸೆಂಬರ್ 1ರಂದು ಪುಟ್ಟಣ್ಣ ಕಣಗಲ್ ಜನ್ಮದಿನವನ್ನು 'ನಿರ್ದೇಶಕರ ದಿನ'ವನ್ನಾಗಿ ಆಚರಣೆ ಮಾಡೋಣ ಎಂದು ಪದಾಧಿಕಾರಿಗಳೆಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿಕೊಂಡಿದ್ದೇವೆ. ಇಂದಿನ ನಿರ್ದೇಶಕರ ಜೊತೆಗೆ ಮುಂದಿನ ಪೀಳಿಗೆಗೂ ಪುಟ್ಟಣ್ಣ ಅವರ ಸಿನಿಮಾಗಳ ಬಗ್ಗೆ, ನಿರ್ದೇಶನದ ಬಗ್ಗೆ ತಿಳಿಸಿಕೊಡುವ ಕೆಲಸ ಆಗಬೇಕು. ಆ ದೃಷ್ಟಿಯಿಂದ ಅವರ ಜನ್ಮದಿನವಾದ ಡಿಸೆಂಬರ್ 1ನ್ನು 'ನಿರ್ದೇಶಕರ ದಿನ'ವನ್ನಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ." ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

    ಪುಟ್ಟಣ್ಣ ಕಣಗಾಲ್ ಮನೆ ಸ್ಮಾರಕ ಮಾಡುವುದಾಗಿ ಭರವಸೆ ನೀಡಿದ ಸಿಎಂಪುಟ್ಟಣ್ಣ ಕಣಗಾಲ್ ಮನೆ ಸ್ಮಾರಕ ಮಾಡುವುದಾಗಿ ಭರವಸೆ ನೀಡಿದ ಸಿಎಂ

    ಪುಟ್ಟಣ್ಣ ಕಣಗಾಲ್ ಜನ್ಮದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ ಮಾಡುತ್ತಿರುವುದಕ್ಕೆ ಚಿತ್ರರಂಗದ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡರು, "ವಾಣಿಜ್ಯ ಮಂಡಳಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೆ. ಈ ತರಹದ ಬೆಳವಣಿಗೆ ಆಗಬೇಕು. ಪುಟ್ಟಣ್ಣ ಕಣಗಲ್ ಜಯಂತಿಯನ್ನು ನಿರ್ದೇಶಕರ ದಿನ ಎಂದು ಆಚರಣೆ ಮಾಡಲು ನಿರ್ಧಾರ ಮಾಡಿದ್ದು ಬಹಳ ಒಳ್ಳೆಯ ಕೆಲಸ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

    Here After Karnataka Film Chamber Celebrate Puttanna Kanagal Birthday As Directors Day

    ನಿರ್ದೇಶಕರ ಸಂಘದ ಅಧ್ಯಕ್ಷ ಎನ್‌ ಆರ್ ನಂಜುಂಡೇಗೌಡ ಕೂಡ ನಿರ್ದೇಶಕರ ದಿನವ್ನಾಗಿ ಆಚರಣೆ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. " ಪುಟ್ಟಣ್ಣ ಕಣಗಲ್ ಜನ್ಮದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಘೋಷಣೆ ಆಗಿದ್ದು ಬಹಳ ಖುಷಿಯ ಸಂಗತಿ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

    Here After Karnataka Film Chamber Celebrate Puttanna Kanagal Birthday As Directors Day

    ಪುಟ್ಟಣ್ಣ ಕಣಗಾಲ್ ಇಂದಿಗೂ ಸಿನಿಮಾದ ಕನಸು ಕಾಣುತ್ತಿರುವವರಿಗೆ ಮಾದರಿ. ಅಂದಿನ ಕಾಲಕ್ಕೆ ಗಂಭೀರ ವಿಷಯಗಳನ್ನು ಆರಿಸಿಕೊಂಡು ಸಿನಿಮಾ ಮಾಡುತ್ತಿದ್ದ ಧೈರ್ಯ ಗಮನಾರ್ಹ. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಮೊದಲ ಸಿನಿಮಾ 'ಸ್ಕೂಲ್ ಮಾಸ್ಟರ್'. ಇದು ಮಲಯಾಳಂ ಭಾಷೆಯ ಸಿನಿಮಾ ಆಗಿತ್ತು. ಆ ಬಳಿಕ ನಿರ್ದೇಶಿಸಿದ 'ಬೆಳ್ಳಿಮೋಡ', 'ಗೆಜ್ಜೆಪೂಜೆ', 'ಶರಪಂಜರ', 'ನಾಗರಹಾವು', 'ಸಾಕ್ಷಾತ್ಕಾರ', 'ಎಡಕಲ್ಲ ಗುಡ್ಡದ ಮೇಲೆ', 'ಮಾನಸ ಸರೋವರ' ಅಂತಹ ಎವರ್‌ಗ್ರೀನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

    English summary
    Here After Karnataka Film Chamber Celebrate Puttanna Kanagal Birthday As Directors Day, Know More.
    Thursday, December 1, 2022, 22:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X