twitter
    For Quick Alerts
    ALLOW NOTIFICATIONS  
    For Daily Alerts

    'ಜೋಗಿ' ಹೆಸರಿನಲ್ಲಿದೆ ಯಾರೂ ಅಳಿಸಲಾಗದ ಸಾರ್ವಕಾಲಿಕ ದಾಖಲೆ

    |

    ಜೋಗಿ ಅಂದಾಕ್ಷಣ.....ತಾಯಿ-ಮಗನ ಮಮತೆ, ರೌಡಿಸಂ, ಸೂಪರ್ ಹಿಟ್ ಗೀತೆಗಳು..ಜೋಗಿ ಅಲಿಯಾಸ್ ಮಾದೇಶ, ಬಿಡ್ಡ, ಪಟ್ರೆ, ಕೋಟೆ ಸಿದ್ದ, ಪುಂಗ ಪಾತ್ರಗಳು ಥಟ್ ಅಂತ ನೆನಪಾಗುತ್ತೆ.

    ಸಿನಿಮಾ ರಿಲೀಸ್ ಆದ್ಮೇಲೆ ಗಾಂಧಿನಗರದಲ್ಲಿ ಉಂಟಾದ ಸಂಭ್ರಮ, ಅಣ್ಣಾವ್ರು ಸಿನಿಮಾ ನೋಡಿ ಅತ್ತಿದ್ದು, ರಜನಿಕಾಂತ್ ನನಗೆ ಈ ಚಿತ್ರ ಮಾಡಿ ಎಂದು ಕೇಳಿದ್ದು, ಕಲೆಕ್ಷನ್‌ನಲ್ಲಿ ಜೋಗಿ ಹೆಚ್ಚು ಲಾಭ ಮಾಡಿದ್ದು...ಇದೆಲ್ಲವೂ ಈಗ ಹಳೆಯ ನೆನಪು. ಈ ಸಂಭ್ರಮ, ಈ ನೆನಪುಗಳಿಗೆ ಈಗ ಹದಿನೈದು ವರ್ಷ ತುಂಬಿದೆ. ಆಗಸ್ಟ್ 19ಕ್ಕೆ ಜೋಗಿ ಸಿನಿಮಾ ತೆರೆಕಂಡು 15 ವರ್ಷ ಆಗಿದೆ.

    'ಜೋಗಿ' ಸಂಭ್ರಮಕ್ಕೆ 15 ವರ್ಷ: ಶಿವರಾಜ್ ಕುಮಾರ್ ಕಾಮನ್ ಡಿಪಿ ವೈರಲ್'ಜೋಗಿ' ಸಂಭ್ರಮಕ್ಕೆ 15 ವರ್ಷ: ಶಿವರಾಜ್ ಕುಮಾರ್ ಕಾಮನ್ ಡಿಪಿ ವೈರಲ್

    ಈ ವಿಶೇಷವಾಗಿ ಶಿವಣ್ಣನ ಅಭಿಮಾನಿಗಳು ಜೋಗಿ ಜಾತ್ರೆ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೋಗಿ ಸಂಭ್ರಮ ಜೋರಾಗಿದೆ. ಇಂಡಸ್ಟ್ರಿಯಲ್ಲಿ ಇಷ್ಟೆಲ್ಲಾ ಅಬ್ಬರ ಮಾಡಿದ್ದ ಜೋಗಿ ಹೆಸರಿನಲ್ಲಿ ಹತ್ತು ಹಲವು ದಾಖಲೆಗಳವೆ. ಬಹುಶಃ ಈ ದಾಖಲೆಗಳನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಏನದು? ದಾಖಲೆಗಳು? ಮುಂದೆ ಓದಿ....

    ಜೋಗಿ ಮಾಡಿದ ಕಲೆಕ್ಷನ್ ಎಷ್ಟು?

    ಜೋಗಿ ಮಾಡಿದ ಕಲೆಕ್ಷನ್ ಎಷ್ಟು?

    15 ವರ್ಷಗಳ ಹಿಂದೆ ತೆರೆಕಂಡಿದ್ದ ಜೋಗಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಹಿಟ್ ಆಗಿತ್ತು. ಸ್ವತಃ ನಿರ್ದೇಶಕ ಪ್ರೇಮ್ ಹೇಳುವಂತೆ ಆಗಿನ ಸಮಯದಲ್ಲಿ 22 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅಂದ್ರೆ, ಇಂದಿನ ಸಮಯಕ್ಕೆ ಅದನ್ನು ಲೆಕ್ಕ ಹಾಕಿದರೆ ಸುಮಾರು 300 ಕೋಟಿಗೆ ಸಮ. ಇಂದಿನ ಚಿತ್ರಗಳು ಮಾಡದ ದಾಖಲೆಯನ್ನು ಜೋಗಿ ಆಗಲೇ ಮಾಡಿದೆ.

    ಬೆಂಗಳೂರಿನ 16 ಕೇಂದ್ರಗಳಲ್ಲಿ ಸೆಂಚುರಿ

    ಬೆಂಗಳೂರಿನ 16 ಕೇಂದ್ರಗಳಲ್ಲಿ ಸೆಂಚುರಿ

    ಬೆಂಗಳೂರಿನ 16 ಚಿತ್ರಮಂದಿರಗಳಲ್ಲಿ ಜೋಗಿ ಸಿನಿಮಾ ಶತದಿನ ಆಚರಿಸಿಕೊಂಡಿತ್ತು. ಇದು ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ. ಜೋಗಿ ಸಿನಿಮಾ ಬಿಟ್ಟರೆ ಬೇರೆ ಯಾವ ಚಿತ್ರವೂ ಸಿಲಿಕಾನ್ ಸಿಟಿಯಲ್ಲಿ 16 ಕೇಂದ್ರದಲ್ಲಿ ಶತದಿನ ಪೂರೈಸಿಲ್ಲ.

    'ಜೋಗಿ' ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟ ಮೈಕೋ ನಾಗರಾಜ್'ಜೋಗಿ' ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟ ಮೈಕೋ ನಾಗರಾಜ್

    61ಕ್ಕೂ ಹೆಚ್ಚು ಚಿತ್ರಮಂದಿರಗಳು

    61ಕ್ಕೂ ಹೆಚ್ಚು ಚಿತ್ರಮಂದಿರಗಳು

    72 ಕೇಂದ್ರಗಳಲ್ಲಿ 25 ದಿನ ಪೂರೈಸಿ, 63 ಕೇಂದ್ರಗಳಲ್ಲಿ 50 ದಿನ ಪೂರೈಸಿ, 54 ಕೇಂದ್ರಗಳಲ್ಲಿ 75 ದಿನ ಪ್ರದರ್ಶನ ಕಂಡು, 45 ಕೇಂದ್ರಗಳಲ್ಲಿ (61ಕ್ಕೂ ಹೆಚ್ಚು ಚಿತ್ರಮಂದಿರ) 100 ದಿನ ಪೂರೈಸಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ವೀರೇಶ್ ಚಿತ್ರಮಂದಿರದಲ್ಲಿ 50 ದಿನದವರೆಗೂ ಹೌಸ್‌ಪುಲ್ ಪ್ರದರ್ಶನ ಕಂಡಿತ್ತು ಎನ್ನುವುದು ವಿಶೇಷ.

    ಆಡಿಯೋ ಕಂಪನಿ 4 ಕೋಟಿ ದುಡ್ಡು ಮಾಡಿದೆ

    ಆಡಿಯೋ ಕಂಪನಿ 4 ಕೋಟಿ ದುಡ್ಡು ಮಾಡಿದೆ

    ಜೋಗಿ ಚಿತ್ರಕ್ಕೆ ಗುರು ಕಿರಣ್ ಸಂಗೀತ ನೀಡಿದ್ದರು. ಅಶ್ವಿನಿ ಆಡಿಯೋ ಕಂಪನಿ ಅವರು ಜೋಗಿ ಚಿತ್ರದ ಹಾಡುಗಳಿಂದ ಸುಮಾರು 4 ಕೋಟಿ ದುಡ್ಡು ಮಾಡಿದರು. ಬಹುಶಃ ಆಗಿನ ಸಮಯಕ್ಕೆ ಆಡಿಯೋ ಕಂಪನಿಯೊಂದು 4 ಕೋಟಿ ಗಳಿಸಿದ್ದು ಅಂದ್ರೆ ಅದು ಜೋಗಿ ಮೂಲಕ ಎಂದು ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದಾರೆ.

    English summary
    Jogi Movie Completes 15 Years: Here are the unbeaten records of the shivaraj kumar movie.
    Wednesday, August 19, 2020, 14:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X