twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ಆಂಕರ್ ಚಂದನ್ ನಿಧನ : ಅಣ್ಣಾವ್ರ ಅಭಿಮಾನಿಯ ಕಥೆ-ವ್ಯಥೆ

    By Pavithra
    |

    Recommended Video

    ನಿರೂಪಕ ದಿವಂಗತ ಚಂದನ್ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿಗಳು | Oneindia Kannada

    ಸುಮಾರು ಹತ್ತು ವರ್ಷದ ಹಿಂದೆ ಬೆಳಗ್ಗೆ ಹನ್ನೊಂದು ಗಂಟೆ ಯಾವಾಗ ಆಗುತ್ತೆ ಅಂತ ಅದೆಷ್ಟೋ ಅಭಿಮಾನಿಗಳು ಟಿವಿ ಮುಂದೆ ಕಾಯುತ್ತಿದ್ದರು. ಕಾರಣ U2 ಚಾನೆಲ್ ನಲ್ಲಿ ನಿರೂಪಕ ಚಂದನ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಹಾಗೂ ಆ ನಿರೂಪಕನ ಮೇಲೆ ಕನ್ನಡಿಗರಿಗಿದ್ದ ಪ್ರೀತಿ.

    ಈಗ ಸಾಕಷ್ಟು ಚಾನೆಲ್ ಗಳಿವೆ, ಹಲವಾರು ನಿರೂಪಕರಿದ್ದಾರೆ. ಆದರೆ ಅವರು ಯಾರು ಕೂಡ ನೆನಪಿನಲ್ಲಿ ಉಳಿದುಕೊಳ್ಳುವುದೇ ಇಲ್ಲ. ಆದರೆ ಚಂದನ್ ಮಾತ್ರ ಇವತ್ತಿಗೂ ಇವರೆಲ್ಲರ ಮಧ್ಯೆ ವಿಶಿಷ್ಟವಾಗಿ ನಿಲ್ಲುತ್ತಾರೆ. ನೂರಾರು ಆಂಕರ್ ಗಳ ಮಧ್ಯೆ ವಿಭಿನ್ನ ಎನ್ನಿಸಿಕೊಳ್ಳುತ್ತಿದ್ದರು.

    ಅಪಘಾತದಲ್ಲಿ ಖ್ಯಾತ ನಿರೂಪಕ ಚಂದನ್ ಸಾವು ಅಪಘಾತದಲ್ಲಿ ಖ್ಯಾತ ನಿರೂಪಕ ಚಂದನ್ ಸಾವು

    ಸಾವಿರಾರು ಅಭಿಮಾನಿಗಳನ್ನು ಅವರ ಮಾತಿನಿಂದಲೇ ಪಡೆದುಕೊಂಡಿದ್ದರು. ಚಂದನ್ ಈಗ ನಮ್ಮ ಮಧ್ಯೆ ಇಲ್ಲವಾದರೂ, ಆತ ನಡೆಸಿಕೊಟ್ಟ ಕಾರ್ಯಕ್ರಮಗಳು, ಅವರ ಮಾತು, ಗಳಿಸಿದ್ದ ಹೆಸರು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಸಾಕಷ್ಟು ಜನರ ಮಧ್ಯೆ ಚಂದನ್ ವಿಭಿನ್ನವಾಗಿ ನಿಂತಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

    ಕನ್ನಡದ ಕುವರ ಚಂದನ್

    ಕನ್ನಡದ ಕುವರ ಚಂದನ್

    ಚಂದನ್ ಎಂದರೆ ಕನ್ನಡ ಎನ್ನುವಷ್ಟರ ಮಟ್ಟಿಗೆ ಸ್ನೇಹಿತರ ವಲಯದಲ್ಲಿ ಹಾಗೂ ಮಾಧ್ಯಮ ಲೋಕದಲ್ಲಿ ಗುರುತಿಸಿಕೊಂಡವರು. ಸಂಪೂರ್ಣವಾಗಿ ಕನ್ನಡದಲ್ಲಿಯೇ ಕಾರ್ಯಕ್ರಮ ನಡೆಸಿಕೊಡುವುದೇ ಅವರ ಸ್ಪೆಷಾಲಿಟಿ ಆಗಿತ್ತು.

    ಚಿಕ್ಕಬಳ್ಳಾಪುರದ ಚಂದನ್

    ಚಿಕ್ಕಬಳ್ಳಾಪುರದ ಚಂದನ್

    ಚಂದನ್ ಚಿಕ್ಕಬಳ್ಳಾಪುರ ಮೂಲದವರು. ಆಕಸ್ಮಿಕವಾಗಿ ಮಾಧ್ಯಮ ಲೋಕಕ್ಕೆ ಕಾಲಿಟ್ಟು ನಿರೂಪಕರಾದರು. ಮೊದಲಿಗೆ ಈಟಿವಿ ಕನ್ನಡದಲ್ಲಿ 'ನಮ್ ಊರ್ನ್ಯಾಗೆ' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು ಅಲ್ಲಿಂದ ಮಾಧ್ಯಮ ಲೋಕದಲ್ಲಿ ಚಂದನ್ ಪಯಣ ಆರಂಭವಾಯ್ತು.

    ಕನ್ನಡದ ಮೇಲೆ ಅಪಾರ ಪ್ರೀತಿ

    ಕನ್ನಡದ ಮೇಲೆ ಅಪಾರ ಪ್ರೀತಿ

    ದಿನದ 24 ಗಂಟೆಯಲ್ಲಿ ಒಂದು ಗಂಟೆಯಾದರೂ ಕನ್ನಡದಲ್ಲಿ ಮಾತನಾಡೋಣ ಎನ್ನುವುದು ಚಂದನ್ ಸದಾ ಸ್ನೇಹಿತರಿಗೆ ಹೇಳುತ್ತಿದ್ದ ಮಾತು. ಆದ್ದರಿಂದ ಕಾರ್ಯಕ್ರಮದಲ್ಲಿ ಹಾಗೂ ನಿತ್ಯ ಜೀವನದಲ್ಲಿ ಮಾತನಾಡಲು ಕನ್ನಡವನ್ನೇ ಬಳಕೆ ಮಾಡುತ್ತಿದ್ದರು. ಆದ್ದರಿಂದ ಕನ್ನಡ ಕುವರ ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದರು.

    ಚಿತ್ರರಂಗದ ನೆಚ್ಚಿನ ನಿರೂಪಕ

    ಚಿತ್ರರಂಗದ ನೆಚ್ಚಿನ ನಿರೂಪಕ

    ಉದಯ ವಾಹಿನಿಯಲ್ಲಿ ಚಂದನ್ ಸಾಕಷ್ಟು ವರ್ಷಗಳು ನಿರೂಪಕರಾಗಿ ಕೆಲಸ ಮಾಡಿದ್ದರು. ಕನ್ನಡದ ಬಹುತೇಕ ಎಲ್ಲಾ ಕಲಾವಿದರ ಸಂದರ್ಶನ ಮಾಡುವ ಮೂಲಕ ಎಲ್ಲರನ್ನೂ ಭೇಟಿ ಮಾಡಿದ್ದರು. ಸ್ಟಾರ್ ಕಲಾವಿದರಿಗೆ ನೆಚ್ಚಿನ ಆಂಕರ್ ಆಗಿದ್ದರು.

    ಅಣ್ಣಾವ್ರ ಅಪ್ಪಟ ಅಭಿಮಾನಿ

    ಅಣ್ಣಾವ್ರ ಅಪ್ಪಟ ಅಭಿಮಾನಿ

    ಚಂದನ್ ಕನ್ನಡವನ್ನು ಎಷ್ಟು ಪ್ರೀತಿ ಮಾಡುತ್ತಿದ್ದರೋ ಅಷ್ಟೇ ಪ್ರೀತಿ ಡಾ ರಾಜ್ ಕುಮಾರ ಅವರ ಮೇಲಿತ್ತು. ಡಾ ರಾಜ್ ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಯಕ್ರಮಗಳನ್ನು ನೆಡೆಸಿಕೊಡುತ್ತಿದ್ದರು.

    English summary
    In a tragic incident and famous kannada tv anchor Chandan pass away .here complete details about Chandan carrier journey
    Thursday, May 24, 2018, 10:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X