For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ಆದ ನಂತರ ರಾಧಿಕಾ ಲೈಫ್ ಸ್ಟೈಲ್ ಹೀಗಿದೆ

  By Pavithra
  |
  ಬದಲಾಯ್ತು ರಾಧಿಕಾ ಪಂಡಿತ್ ಜೀವನ ಶೈಲಿ..! | Filmibeat Kannada

  ಸ್ಯಾಂಡಲ್ ವುಡ್ ನ ಕ್ಯೂಟ್ ಅಂಡ್ ಬ್ಯೂಟಿಫುಲ್ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್. ಸ್ಯಾಂಡಲ್ ವುಡ್ ನ ಸಿಂಡ್ರೆಲಾ ಗರ್ಭಿಣಿ ಎನ್ನುವ ವಿಚಾರ ಈಗಾಗಲೇ ತಿಳಿದಿದೆ. ಖಾಸಗಿ ಕಾರ್ಯಕ್ರಮದಲ್ಲಿ ಎಲ್ಲೂ ಕಾಣಿಸಿಕೊಳ್ಳದ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಮಾತ್ರ ಆಗಾಗ ಅಭಿಮಾನಿಗಳಿಗೆ ತಮ್ಮ ಬಗ್ಗೆ ಅಪ್ಡೇಟ್ ಕೊಡುತ್ತಿದ್ದಾರೆ.

  ರಾಧಿಕಾ ಮೊದಲಿನಿಂದಲೂ ತುಂಬಾ ಫಿಟ್ ಆಗಿದ್ದ ನಾಯಕಿ. ಹಾಗಂತ ರಾಧಿಕಾ ವರ್ಕ್ ಔಟ್ ಮಾಡುತ್ತಾರೆ ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ಸುಳ್ಳು. ಹೌದು ರಾಧಿಕಾ ಯಾವುದೇ ರೀತಿಯ ವರ್ಕ್ ಔಟ್, ಡಯೆಟ್, ಯೋಗ ಮಾಡದೇ ಸ್ವಾಭಾವಿಕವಾಗಿಯೇ ಫಿಟ್ ಆಗಿದ್ದರು. ಈಗಲೂ ಕೂಡ ರಾಧಿಕಾ ಯಾವುದೇ ಡಯೆಟ್ ಮಾಡುತಿಲ್ಲ ಎನ್ನುವುದು ಅವರು ಅಪ್ಲೋಡ್ ಮಾಡಿರುವ ಫೋಟೋ ನೋಡಿಯೇ ತಿಳಿಯುತ್ತಿದೆ.

  ದಶಕದ ಸಂಭ್ರಮದಲ್ಲಿ ಯಶ್ - ರಾಧಿಕಾ ಪಂಡಿತ್ ಜೋಡಿ ದಶಕದ ಸಂಭ್ರಮದಲ್ಲಿ ಯಶ್ - ರಾಧಿಕಾ ಪಂಡಿತ್ ಜೋಡಿ

  ಹಾಗಾದರೆ ರಾಧಿಕಾ ಮೊದಲಿಗೂ, ಗರ್ಭಿಣಿ ಆದ ನಂತರ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ? ಏನೆಲ್ಲಾ ಆಹಾರ ಸೇವಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇವೆಲ್ಲ ವಿಚಾರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

  ಹೇಗಿದ್ದಾರೆ ಈಗ ರಾಧಿಕಾ ಪಂಡಿತ್

  ಹೇಗಿದ್ದಾರೆ ಈಗ ರಾಧಿಕಾ ಪಂಡಿತ್

  ಗರ್ಭಿಣಿ ಆಗಿರುವ ನಟಿ ರಾಧಿಕಾ ಪಂಡಿತ್ ಸಖತ್ ಫಿಟ್ ಆಗಿದ್ದಾರೆ. ಮುಂಚಿಗಿಂತಲೂ ಕೊಂಚ ದಪ್ಪ ಆಗಿರುವ ಸಿಂಡ್ರೆಲಾ ಖುಷಿ ಖುಷಿಯಿಂದ ಮನೆಯವರ ಜೊತೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

  ಒಳ್ಳೆ ಕುಕ್ ರಾಧಿಕಾ ಪಂಡಿತ್

  ಒಳ್ಳೆ ಕುಕ್ ರಾಧಿಕಾ ಪಂಡಿತ್

  ರಾಧಿಕಾ ಪಂಡಿತ್ ಆಹಾರ ಪ್ರಿಯೆ ತಮಗಿಷ್ಟವಾದ ಆಹಾರವನ್ನು ಖುಷಿಯಿಂದ ತಿನ್ನುತ್ತಾರೆ. ಸ್ವತಃ ರಾಧಿಕಾ ಅವರೇ ಒಳ್ಳೆ ರುಚಿಯಾದ ಅಡುಗೆ ಮಾಡುತ್ತಾರೆ. ಮೊದಲೆಲ್ಲಾ ಕೇಕ್, ಬಿಸ್ಕೆಟ್ ಗಳನ್ನು ಮಾಡುತ್ತಿದ್ದ ರಾಧಿಕಾ ಇತ್ತೀಚಿಗೆ ಪಕ್ಕಾ ಸೌತ್ ಇಂಡಿಯನ್ ಫುಡ್ ಮಾಡೋದನ್ನು ಕಲಿತಿದ್ದಾರೆ.

  ಮುದ್ದಾಗಿ ಕಾಣಿಸುತ್ತಾರೆ ರಾಧಿಕಾ

  ಮುದ್ದಾಗಿ ಕಾಣಿಸುತ್ತಾರೆ ರಾಧಿಕಾ

  ಗರ್ಭಿಣಿ ಆದ ನಂತರ ಕೊಂಚ ದಪ್ಪ ಆಗಿರುವ ರಾಧಿಕಾ ಇಂದಿಗೂ ಮುದ್ದಾಗಿ ಕಾಣಿಸುತ್ತಿದ್ದಾರೆ. ಇತ್ತೀಚಿಗಷ್ಟೆ ವೈಟ್ ಡ್ರಸ್ ನಲ್ಲಿರುವ ಪೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದರು. ಫೋಟೋ ನೋಡಿದ ಅಭಿಮಾನಿಗಳು ಕಮೆಂಟ್ ಮೂಲಕವೇ ದೃಷ್ಟಿ ತೆಗೆದಿದ್ದರು.

  ಅಭಿಮಾನಿಗಳಿಂದ ಕಮೆಂಟ್ ಮೂಲಕ ಊಟದ ಟಿಪ್ಸ್

  ಅಭಿಮಾನಿಗಳಿಂದ ಕಮೆಂಟ್ ಮೂಲಕ ಊಟದ ಟಿಪ್ಸ್

  ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ನಲ್ಲಿ ಊಟ ಮಾಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದನ್ನು ಕಂಡ ಅಭಿಮಾನಿಗಳು ರಾಧಿಕಾ ಅವರಿಗೆ ಗರ್ಭಿಣಿ ಸಮಯದಲ್ಲಿ ಯಾವ ಯಾವ ಆಹಾರವನ್ನು ಸೇವನೆ ಮಾಡಬೇಕು ಎನ್ನುವ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ.

  English summary
  Kannada actress Radhika Pandit, who is pregnant with complete information about the lifestyle here. Radhika Pandit informs fans through Instagram about them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X