twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್ ಸೋತಿದ್ದು ಯಾಕೆ? ಇಲ್ಲಿದೆ ಐದು ಮುಖ್ಯ ಕಾರಣಗಳು

    By Pavithra
    |

    ನವರಸ ನಾಯಕ ಜಗ್ಗೇಶ್ ಸಿನಿಮಾರಂಗದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ನಾಯಕ ನಟ ಹಾಗೂ ನಿರ್ದೇಶಕ. ಯಾವುದೇ ಪಾತ್ರವನ್ನಾಗಲಿ ನೀರು ಕುಡಿದಂತೆ ಸರಾಗವಾಗಿ ಮಾಡುವ ಜಗ್ಗೇಶ್ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ.

    ಸೋತೆ ಎಂದು ಬೇಸರ ಮಾಡಿಕೊಳ್ಳದ ಜಗ್ಗೇಶ್ ತಮ್ಮ ಪಕ್ಷ ಬಹುಮತ ಗಳಿಸಿರುವುದಕ್ಕೆ ಸಂತಸವನ್ನು ವ್ಯಕ್ತ ಪಡಿಸಿದ್ದರು. ಆದರೆ ಜಗ್ಗೇಶ್ ಚುನಾವಣೆಯಲ್ಲಿ ಹಿನ್ನಡೆ ಪಡೆದುಕೊಂಡಿರುವುದರ ನೇರ ಹೊಣೆಯನ್ನ ಪಕ್ಷವೇ ಹೊತ್ತುಕೊಳ್ಳಬೇಕಾಗಿದೆ.

    ಸೋಲಿಗೆ ನಿಜವಾದ ಕಾರಣ ಬಹಿರಂಗ ಪಡಿಸಿದ ನಟ ಜಗ್ಗೇಶ್ಸೋಲಿಗೆ ನಿಜವಾದ ಕಾರಣ ಬಹಿರಂಗ ಪಡಿಸಿದ ನಟ ಜಗ್ಗೇಶ್

    ಅದೇ ಬಹುಮತ ಗಳಿಸಿದ್ದರೆ ಅದರ ಹೊಣೆ ಜಗ್ಗೇಶ್ ತೆಗೆದುಕೊಳ್ಳುತ್ತಿದ್ದರು. ಸದ್ಯ ಜಗ್ಗೇಶ್ ಸ್ಪರ್ಧೆ ಮಾಡಿದ್ದ ಕ್ಷೇತ್ರದಲ್ಲಿ ಅವರ ಸೋಲಿಗೆ ಮುಖ್ಯ ಕಾರಣಗಳು ಏನು ಎನ್ನುವುದನ್ನಜನರೇ ತಿಳಿಸಿದ್ದಾರೆ. ಹಾಗಾದರೆ ನವರಸ ನಾಯಕನ ಸೋಲಿಗೆ ಕಾರಣವಾದ ಮುಖ್ಯ ಐದು ಅಂಶಗಳು ಇಲ್ಲಿವೆ ಮುಂದೆ ಓದಿ..

    ತುಂಬಾ ದೊಡ್ಡ ಕ್ಷೇತ್ರ

    ತುಂಬಾ ದೊಡ್ಡ ಕ್ಷೇತ್ರ

    ಯಶವಂತಪುರ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ಯಶವಂತಪುರದಿಂದ ಆರಂಭವಾಗಿ ಹೆಮ್ಮಿಗೆಪುರ, ದೊಡ್ಡ ಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ವರೆಗೂ ಕ್ಷೇತ್ರ ವಿಸ್ತಾರವಾಗಿದೆ.

    ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆ

    ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆ

    ಕ್ಷೇತ್ರ ದೊಡ್ಡದಾಗಿರುವುದರಂದ ಪ್ರಚಾರಕ್ಕಾಗಿ ಸಾಕಷ್ಟು ದಿನಗಳು ಬೇಕಾಗುತ್ತೆ ಆದರೆ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಬಿಜೆಪಿ ಪಕ್ಷ ತುಂಬಾ ನಿಧಾನ ಮಾಡಿದ್ದು ಕೂಡ ಜಗ್ಗೇಶ್ ಅವರ ಸೋಲಿಗೆ ಕಾರಣವಾಯ್ತು. ಹಾಗಾಗಿ ಸಾಕಷ್ಟು ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನ ತಿಳಿದುಕೊಳ್ಳಲು ನವರಸನಾಯಕನಿಗೆ ಸಮಯ ಸಿಗಲಿಲ್ಲ.

    ಬಿಜೆಪಿ ಅವರ ಸುಳಿವಿಲ್ಲ

    ಬಿಜೆಪಿ ಅವರ ಸುಳಿವಿಲ್ಲ

    ಶೋಭಾ ಕರಂದ್ಲಾಜೆ ನಂತರ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಯಾವುದೇ ಅಭ್ಯರ್ಥಿ ಆಗಲಿ ಅಥವಾ ಮುಖಂಡರಾಗಲಿ ಭೇಟಿ ನೀಡಿಲ್ಲ. ಹಾಗಾಗಿ ಅಲ್ಲಿಯ ಜನರು ಬಿಜೆಪಿ ಪಕ್ಷದವರನ್ನು ಮರೆತೇ ಬಿಟ್ಟಿದ್ದಾರೆ.

    ಕಾರ್ಯಕರ್ತರ ಅಭಾವ

    ಕಾರ್ಯಕರ್ತರ ಅಭಾವ

    ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಗೌಡ ವಿಜಯ ಸಾಧಿಸಿದ್ದರು ಹಾಗಾಗಿ ಸುಮಾರು ಐದಕ್ಕೂ ಹೆಚ್ಚು ವರ್ಷ ಬಿಜೆಪಿ ಪಕ್ಷದವರ ಪರಿಚಯ ಜನರಿಗೆ ಕಳೆದು ಹೋಗಿತ್ತು. ಅದಷ್ಟೇ ಅಲ್ಲದೆ ಪಕ್ಷದ ಪರವಾಗಿ ಮುನ್ನಡೆಸುವವರು ಯಾರು ಇಲ್ಲದ ಕಾರಣ ಕಾರ್ಯಕರ್ತರು ಕಣ್ಮರೆ ಆದರು.

    ಜಗ್ಗೇಶ್ ಅವರಿಗೆ ಹೊಸ ಕ್ಷೇತ್ರ

    ಜಗ್ಗೇಶ್ ಅವರಿಗೆ ಹೊಸ ಕ್ಷೇತ್ರ

    ನಟ ಜಗ್ಗೇಶ್ ಅವರಿಗೆ ಯಶವಂತಪುರ ಹೊಸ ಕ್ಷೇತ್ರ. ಕ್ಷೇತ್ರ ಪರಿಚಯ ಮಾಡಿಕೊಂಡು ಅಲ್ಲಿಯ ಜನರ ಕಷ್ಟ ಸುಖಗಳನ್ನ ಅರಿತುಕೊಳ್ಳು ಸಮಯ ಬೇಕಿತ್ತು. ನವರಸ ನಾಯಕನಿಗೆ ಕ್ಷೇತ್ರ ಮಾತ್ರ ಹೊಸತು ರಾಜಕೀಯ ಅಲ್ಲ ಎನ್ನುವುದನ್ನ ಅವರು ತೆಗೆದುಕೊಂಡಿರುವ ಮತಗಳಲ್ಲಿಯೇ ಸಾಬೀತು ಮಾಡಿದ್ದಾರೆ. ಎನ್ನುವುದು ಆ ಕ್ಷೇತ್ರದ ಜನರ ಅಭಿಪ್ರಾಯ.

    English summary
    There are five reasons why Kannada actor Jaggesh will be back in the Assembly polls
    Wednesday, May 16, 2018, 11:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X