ಆನ್ ಲೈನ್ ಸಾಮ್ರಾಜ್ಯದ ರಾಣಿ ಆದ ಈ ಪೋರಿ ಯಾರು?
Recommended Video

ಕಳೆದ ಎರಡು ವಾರಗಳಲ್ಲಿ ಆನ್ ಲೈನ್ ದುನಿಯಾದಲ್ಲಿ ಇವಳದ್ದೇ ಕಾರು ಬಾರು. ಯಾರದ್ದೇ ವಾಟ್ಸ್ ಆಪ್, ಫೇಸ್ ಬುಕ್ ಸ್ಟೇಟಸ್ ನೋಡಿದ್ರು ಈಕೆಯೇ ಕಾಣುತ್ತಾಳೆ. ಅಷ್ಟಕ್ಕೂ ಈಕೆ ಮಾಡಿರುವ ಮೋಡಿ ಏನು? ಅಂತ ಕೇಳುವ ಹಾಗೆಯೇ ಇಲ್ಲ. ಯಾಕಂದ್ರೆ ಇವಳು ನಿಮಗೂ ಪರಿಚಿತಳು.
ಹೌದು. ದೊಡ್ಡವರ, ಸಿನಿಮಾ ಸ್ಟಾರ್ ಗಳ ಡಬ್ ಸ್ಮ್ಯಾಶ್ ನೋಡಿ ಬೇಜಾರಾದವರಿಗೆ ಈ ಪುಟ್ಟ ಪೋರಿಯ ಹೊಸ ರೀತಿಯ ಡಬ್ ಸ್ಮ್ಯಾಶ್ ಕಂಡ ತಕ್ಷಣ ಅರೆ ಎಷ್ಟು ಚೆನ್ನಾಗಿದೆ ಅನ್ನಿಸಿ ತಾವು ನೋಡಿ, ತಮ್ಮ ಸ್ನೇಹಿತರು ಇರುವ ಗ್ರೂಪ್ ಗಳಿಗೂ ಶೇರ್ ಮಾಡುತ್ತಿದ್ದಾರೆ.
ಅದೆಷ್ಟೋ ಜನರು ಯಾರಿವಳು? ಅಂತ ತಲೆ ಕೆಡಿಸಿಕೊಂಡು ಹುಡುಕಲು ಆರಂಭ ಮಾಡಿದ್ದಾರೆ. ಆದರೆ ಇನ್ನು ಮುಂದೆ ಅಂತ ಗೋಜಿಗೆ ನೀವು ಹೋಗಬೇಕಿಲ್ಲ. ಯಾಕಂದ್ರೆ ಫಿಲ್ಮೀ ಬೀಟ್ ಮೂಲಕ ಆನ್ ಲೈನ್ ದುನಿಯಾದಲ್ಲಿ ಹವಾ ಕ್ರಿಯೆಟ್ ಮಾಡಿರುವ ಪುಟ್ಟ ಪೋರಿಯ ಎಕ್ಸ್‌ಕ್ಲೂಸಿವ್ ಮಾಹಿತಿ ನಿಮಗಾಗಿ ಕೊಡುತ್ತಿದ್ದೇವೆ ಮುಂದೆ ಓದಿ.

ಸಖತ್ ಸದ್ದು ಮಾಡುತ್ತಿದ್ದಾಳೆ ಪುಟ್ಟ ಪೋರಿ
ಕನ್ನಡ ಸಿನಿಮಾ ಡೈಲಾಗ್ ಡಬ್ ಸ್ಮ್ಯಾಶ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೆಟ್ ಮಾಡಿರುವ ಈಕೆ ಹೆಸರು ಪ್ರಶ್ವಿತಾ. ಏಳು ವರ್ಷದ ಪ್ರಶ್ವಿತಾ ತಾನೇ ಮಾಡಿರುವ ಡಬ್ ಸ್ಮ್ಯಾಶ್ ಗಳಿಂದ ಸಖತ್ ಫೇಮಸ್ ಆಗುತ್ತಿದ್ದಾರೆ.

ಆರು ತಿಂಗಳಿನ ಪರಿಶ್ರಮ
ಪ್ರಶ್ವಿತಾ ಇಷ್ಟು ಅದ್ಬುತವಾಗಿ ಡಬ್ ಸ್ಮ್ಯಾಶ್ ಮಾಡುವುದಕ್ಕೆ ಕಾರಣ ಆಕೆಯ ಸಹೋದರಿ ಭೂಮಿಕಾ. ಕಳೆದ ಆರು ತಿಂಗಳಿಂದ ಡಬ್ ಸ್ಮ್ಯಾಶ್ ಮಾಡುವುದಕ್ಕೆ ಶುರು ಮಾಡಿದ್ದು ಇತ್ತೀಚಿಗಷ್ಟೇ ಇನ್‌ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡುವುದಕ್ಕೆ ಆರಂಭಿಸಿದ್ದಾರೆ.

ಡಬ್ ಸ್ಮ್ಯಾಶ್ ವಿತ್ ಎಮೋಷನ್
ಸಾಮಾನ್ಯವಾಗಿ ಪ್ರತಿ ನಿತ್ಯ ಸಾಕಷ್ಟು ಜನರು ಡಬ್ ಸ್ಮ್ಯಾಶ್ ಮಾಡುತ್ತಲೇ ಇರುತ್ತಾರೆ. ಆದರೆ ಪ್ರಶ್ವಿತಾ ಮಾಡಿರುವ ಡಬ್ ಸ್ಮ್ಯಾಶ್ ಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಕಾರಣ ಪ್ರಶ್ವಿತಾ ಅವರ ಪ್ರತಿ ವಿಡಿಯೋದಲ್ಲಿ ಭಾವನೆಗಳಿರುತ್ತೆ.

ಬೆಂಗಳೂರಿನ ಹುಡುಗಿ
ಪ್ರಶ್ವಿತಾ ಮೂಲತಃ ಬೆಂಗಳೂರಿನ ನಾಗರಬಾವಿಯ ನಿವಾಸಿ ಹರಿಕೃಷ್ಣ ಹಾಗೂ ಜೀವಿತಾ ಅವರ ಪುತ್ರಿ. ಸದ್ಯ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕ್ಟಿಂಗ್ ನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ.

ಅವಕಾಶಗಳ ಉಪಯೋಗ
ಸದ್ಯ ಸೋಷಿಯಲ್ ನೆಟ್ವರ್ಕ್ ನಲ್ಲಿ ಹವಾ ಎಬ್ಬಿಸಿರುವ ಪ್ರಶ್ವಿತಾ ಅಭಿನಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲದೇ ನೋಡಲು ತುಂಬಾ ಮುಂದಾಗಿ ಕಾಣುತ್ತಾರೆ. ಆದ್ದರಿಂದಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಸ್ಟಾರ್ ಗಳ ಮೆಚ್ಚುಗೆ
ಪ್ರಶ್ವಿತಾ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಕೂಡ ಇದ್ದು ಅದರಲ್ಲಿ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅದಷ್ಟೇ ಅಲ್ಲದೆ ನಟಿ ಮಾನ್ವಿತಾ ಹರೀಶ್ ಹಾಗೂ ರಶ್ಮಿಕಾ ಮಂದಣ್ಣ ಪಶ್ವಿತಾ ಅವರ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.


Click it and Unblock the Notifications











