For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಭರವಸೆಯ ಖಳನಟ

  By Pavithra
  |

  ಸಿನಿಮಾರಂಗಕ್ಕೆ ದಿನ ಬೆಳಗಾದರೆ ಹೊಸ ಕಲಾವಿದರು ಬರ್ತಾನೆ ಇರ್ತಾರೆ. ಕೆಲವರು ತಮ್ಮ ಅಭಿನಯ ಸಾಮರ್ಥ್ಯದಿಂದ ಇಲ್ಲೇ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಾರೆ. ಇನ್ನು ಕೆಲವು ಉತ್ತಮ ಅವಕಾಶಗಳಿಲ್ಲದೆ ಒಳ್ಳೆಯ ಸಮಯಕ್ಕಾಗಿ ಕಾಯುತ್ತಲೇ ಇರುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಖಳನಾಯಕರ ಅವಶ್ಯಕತೆ ಇದೆ.

  'ಮಾಸ್ತಿಗುಡಿ' ದುರಂತ ಆದ ನಂತರ ಕನ್ನಡ ಸಿನಿಮಾರಂಗದ ಬಹುತೇಕರ ಬಾಯಲ್ಲಿ ಬಂದ ಮಾತು ಇನ್ನು ಮುಂದೆ ಯಾರಪ್ಪ ನಮ್ಮ ಚಿತ್ರಗಳಿಗೆ ಖಳನಾಯಕರು ಎನ್ನುವುದು. ಅನಿಲ್ ಹಾಗೂ ಉದಯ್ ನಂತರ ಇಲ್ಲಿಯ ವರೆಗೂ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಖಳನಟ ಯಾರು ಇಲ್ಲ. ಆದರೆ ಇಲ್ಲೊಬ್ಬ ನಟ ಮೊದಲ ನೋಟದಲ್ಲಿ ಭರವಸೆ ಮೂಡಿಸುತ್ತಿದ್ದಾನೆ.

  ಜನ್ಮದಿನದಂದು ನಟ ಸೃಜನ್ ಲೋಕೇಶ್ ಮಾಡಿದ ಮಹತ್ವದ ಕಾರ್ಯ 'ಇದು'.!ಜನ್ಮದಿನದಂದು ನಟ ಸೃಜನ್ ಲೋಕೇಶ್ ಮಾಡಿದ ಮಹತ್ವದ ಕಾರ್ಯ 'ಇದು'.!

  ಚಿತ್ರರಂಗಕ್ಕೆ ಬಂದ ಮೂರೇ ವರ್ಷದಲ್ಲಿ 16ಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿರುವ ನಟ ಯಶವಂತ್ ಶೆಟ್ಟಿ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಖತರ್ನಾಕ್ ಖಳನಾಯಕನಾಗಿ ಉಳಿದುಕೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಹಾಗಾದರೆ ಯಾರು ಈ ಯಶವಂತ್ ಶೆಟ್ಟಿ? ಈತ ಅಭಿನಯಿಸಿದ ಸಿನಿಮಾಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ.

  ಕನ್ನಡಕ್ಕೆ ಸಿಕ್ಕ ಭರವಸೆಯ ಖಳನಟ

  ಕನ್ನಡಕ್ಕೆ ಸಿಕ್ಕ ಭರವಸೆಯ ಖಳನಟ

  ಯಶವಂತ್ ಶೆಟ್ಟಿ ಕರಾವಳಿ ಮೂಲಕ ಕಲಾವಿದ. ಕನ್ನಡ ಸಿನಿಮಾರಂಗದಲ್ಲಿ ನಟನಾಗಿ ಗುರುತಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ 'ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ' (ದೆಹಲಿ)ಯಲ್ಲಿ ಮೂರು ವರ್ಷದ ಅಭಿನಯ ಕೋರ್ಸ್ ಮುಗಿಸಿಕೊಂಡು ಬಂದಿರುವ ಕಲಾವಿದ.

  ನೀನಾಸಂ ನಲ್ಲಿ ತರಬೇತಿ

  ನೀನಾಸಂ ನಲ್ಲಿ ತರಬೇತಿ

  'ಎನ್ ಎಸ್ ಡಿ' ನಲ್ಲಿ ತರಬೇತಿ ಮಾತ್ರವಲ್ಲದೆ 'ನೀನಾಸಂ' ನಲ್ಲಿಯೂ ಯಶವಂತ್ ಅಭಿನಯದ ಬಗ್ಗೆ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ಅದರ ಜೊತೆಯಲ್ಲಿ ಮುಂಬೈನ ಅಭಿನಯ ತರಬೇತಿ ಕೇಂದ್ರದಲ್ಲಿ ವರ್ಷಗಳ ಕಾಲ ಅಭಿನಯದ ತರಬೇತಿಯನ್ನೂ ನೀಡಿದ್ದಾರೆ.

  'ಜ್ವಲಂತಂ' ಯಶವಂತ್ ಮೊದಲ ಚಿತ್ರ

  'ಜ್ವಲಂತಂ' ಯಶವಂತ್ ಮೊದಲ ಚಿತ್ರ

  'ಜ್ವಲಂತಂ' ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ವೃತ್ತಿ ಆರಂಭಿಸಿದ ಯಶವಂತ್ ಶೆಟ್ಟಿ ಸದ್ಯ 'ಚೌಕ', 'ರೈಲ್ವೇ ಚಿಲ್ಡ್ರನ್', 'ನೂರೊಂದು ನೆನಪು', 'ಜಾನ್ ಜಾನಿ ಜನಾರ್ಧನ್', 'ಅಥರ್ವ', 'ಅಭಿಸಾರಿಕೆ', 'ಯಜಮಾನ', 'ಹಿಕೋರ', 'ಲಿಫ್ಟ್' ಹೀಗೆ 16 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ.

  ದೊಡ್ಡ ಬ್ಯಾನರ್ ನಲ್ಲಿ ಅಭಿನಯ

  ದೊಡ್ಡ ಬ್ಯಾನರ್ ನಲ್ಲಿ ಅಭಿನಯ

  ಚಿತ್ರರಂಗಕ್ಕೆ ಬಂದ ಮೂರೇ ವರ್ಷದಲ್ಲಿ ಉತ್ತಮ ಕಲಾವಿದ ಎನ್ನಿಸಿಕೊಂಡಿರುವ ಯಶವಂತ್ ಶೆಟ್ಟಿ ಸ್ಟಾರ್ ನಟರ ಚಿತ್ರದಲ್ಲಿಯೂ ಅಭಿನಯ ಮಾಡಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ಸ್ ನಲ್ಲಿ ರಾಧಿಕಾ ಪಂಡಿತ್ ಅಭಿನಯದ ಚಿತ್ರದಲ್ಲಿ, ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಹಾಗೂ ಹರಿಪ್ರಿಯಾ ಆಕ್ಟ್ ಮಾಡಿರುವ 'ಸೂಜಿದಾರ' ಚಿತ್ರದಲ್ಲಿಯೂ ಯಶವಂತ್ ಅಭಿನಯವಿದೆ.

  ನಿರೀಕ್ಷಿತ ಚಿತ್ರ ಅಥರ್ವ

  ನಿರೀಕ್ಷಿತ ಚಿತ್ರ ಅಥರ್ವ

  ಯಶವಂತ್ ಶೆಟ್ಟಿ ಅಥರ್ವ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯ ಮಾಡಿದ್ದಾರೆ. ಟ್ರೇಲರ್ ಮತ್ತು ಟೀಸರ್ ನಲ್ಲಿ ಯಶವಂತ್ ಅಭಿನಯ ನೋಡಿ ಉದಯ್ ಜಾಗ ತುಂಬುವ ನಟ ಇವರೇ ಎನ್ನುವ ಮಾತು ಕೇಳಿ ಬರುತ್ತಿದೆ.

  ಕರಿಚಿರತೆ ಜೊತೆ ಯಶವಂತ್ ಅಭಿನಯ

  ಕರಿಚಿರತೆ ಜೊತೆ ಯಶವಂತ್ ಅಭಿನಯ

  ಕರಿಚಿರತೆ ದುನಿಯಾ ವಿಜಿ ಅಭಿನಯದ 'ಕುಸ್ತಿ' ಚಿತ್ರದಲ್ಲಿ ಯಶವಂತ್ ಅಭಿನಯಿಸುವ ಸಾಧ್ಯತೆಗಳಿವೆ. ಅದಷ್ಟೇ ಅಲ್ಲದೆ ಯಶವಂತ್ ಅಭಿನಯ ನೋಡಿ ಒಳ್ಳೆ ಒಳ್ಳೆ ಆಫರ್ ಗಳು ಬರುತ್ತಿವೆ.

  English summary
  Kannada actor Yashwant Shetty has acted in more than 16 films in the three-year film industry. Here is full information about Yashwant Shetty, who is a promising actor in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X