For Quick Alerts
  ALLOW NOTIFICATIONS  
  For Daily Alerts

  ಚಿರು-ಮೇಘನಾ ಕಲ್ಯಾಣಕ್ಕೆ ಬರುವ ಅತಿಥಿಗಳು ಇವರೇ

  By Pavithra
  |
  ಚಿರು-ಮೇಘನಾ ಮದುವೆಲಿ ಗಣ್ಯರೇ ದಂಡೇ ಇರಲಿದೆ | Filmibeat Kannada

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕಲ್ಯಾಣಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಇಂದಿನಿಂದ ಮೇಘನಾ ರಾಜ್ ಅವರ ಮನೆಯಲ್ಲಿ ಶಾಸ್ತ್ರಗಳು ಆರಂಭ ಆಗಿದ್ದು ಚಪ್ಪರ ಪೂಜೆಯಿಂದ ಮದುವೆ ಸಮಾರಂಭಕ್ಕೆ ಅಧಿಕೃತ ಚಾಲನೆ ಸಿಗಲಿದೆ.

  ಇಬ್ಬರೂ ಕಲಾವಿದರ ಕುಟುಂಬದಿಂದ ಬಂದವರು ಆದ್ದರಿಂದ ಕನ್ನಡ ಸಿನಿಮಾರಂಗ ಮಾತ್ರವಲ್ಲದೆ ಅಕ್ಕ ಪಕ್ಕ ಚಿತ್ರೋದ್ಯಮದ ಗಣ್ಯರು ಕೂಡ ಮದುವೆ ಸಂಭ್ರಮದಲ್ಲಿ ಭಾಗಿ ಆಗಲಿದ್ದಾರೆ. ಈಗಾಗಲೇ ಎಲ್ಲಾ ಕಲಾವಿದರಿಗೆ ಮದುವೆಯ ಆಹ್ವಾನ ಸಿಕ್ಕಿದೆ. ನಾಲ್ಕು ಭಾಷೆಯಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಮೇಘನಾ ರಾಜ್ ಕುಟುಂಬದಿಂದ ತಮಿಳು, ಮಲೆಯಾಳಂ, ತೆಲುಗು ಸ್ಟಾರ್ ಕಲಾವಿದರಿಗೆ ಆಮಂತ್ರಣ ನೀಡಲಾಗಿದೆ.

  ಮಗಳ ಮದುವೆ ಆಹ್ವಾನದ ಜೊತೆ ಮಾಹಿತಿ ನೀಡಿದ ಸುಂದರ್ ರಾಜ್ ದಂಪತಿಮಗಳ ಮದುವೆ ಆಹ್ವಾನದ ಜೊತೆ ಮಾಹಿತಿ ನೀಡಿದ ಸುಂದರ್ ರಾಜ್ ದಂಪತಿ

  ಇನ್ನು ಚಿರಂಜೀವಿ ಸರ್ಜಾ ಕುಟುಂಬದಲ್ಲಿ ಅರ್ಜುನ್ ಸರ್ಜಾ, ಕಿಶೋರ್ ಸರ್ಜಾ, ಶಕ್ತಿ ಪ್ರಸಾದ್ ಇಡೀ ಕುಟುಂಬವೇ ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು ಆದ್ದರಿಂದ ಅರ್ಜುನ್ ಸರ್ಜಾ ಕಡೆಯಿಂದಲೂ ಸಾಕಷ್ಟು ಜನರಿಗೆ ಆಹ್ವಾನ ತಲುಪಿದೆ ಹಾಗಾದರೆ ಯಾರೆಲ್ಲಾ ಮದುವೆಯಲ್ಲಿ ಭಾಗಿ ಆಗುತ್ತಾರೆ ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಮದುವೆಗೆ ಬರಲಿದ್ದಾರೆ ಕಮಲ್ ಹಾಸನ್

  ಮದುವೆಗೆ ಬರಲಿದ್ದಾರೆ ಕಮಲ್ ಹಾಸನ್

  ನಟ ಸುಂದರ್ ರಾಜ್ ಸಾಕಷ್ಟು ವರ್ಷದಿಂದ ಸಿನಿಮಾರಂಗದಲ್ಲಿ ತಮ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ನಟ ಕಮಲ್ ಹಾಸನ್ ಅವರ ಪರಿಚಯ ತುಂಬಾ ಚೆನ್ನಾಗಿಯೇ ಇದ್ದು ಇತ್ತೀಚಿಗಷ್ಟೆ ಕಮಲ್ ಅವರನ್ನ ಭೇಟಿ ಮಾಡಿ ಮಗಳ ಆಹ್ವಾನ ಪತ್ರಿಕೆ ನೀಡಿದ್ದಾರೆ. ಕಮಲ್ ಹಾಸನ್ ಬೆಂಗಳೂರಿಗೆ ಬಂದು ಮೇಘನಾ-ಚಿರು ಇಬ್ಬರಿಗೂ ಶುಭ ಕೋರಲಿದ್ದಾರೆ.

  ಮದುವೆ ಮನೆಯಲ್ಲಿ ಅಣ್ಣಾವ್ರ ಕುಟುಂಬ

  ಮದುವೆ ಮನೆಯಲ್ಲಿ ಅಣ್ಣಾವ್ರ ಕುಟುಂಬ

  ಕನ್ನಡ ಸಿನಿಮಾರಂಗದ ದೊಡ್ಮನೆ ಅಂತಾನೇ ಫೇಮಸ್ ಆಗಿರುವ ಡಾ ರಾಜ್ ಕುಟುಂಬದವರಿಗೂ ಈಗಾಗಲೇ ಮದುವೆ ಆಮಂತ್ರಣವನ್ನ ನೀಡಲಾಗಿದೆ. ರಾಘವೇಂದ್ರ ರಾಜ್ ಕುಮಾರ್, ರಾಮ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸೇರಿದಂತೆ ಎಲ್ಲರೂ ಮದುವೆಗೆ ಬರಲಿದ್ದಾರೆ.

  ಮದುವೆಯಲ್ಲಿ ಉಪ್ಪಿ-ಪ್ರಿಯಾಂಕ

  ಮದುವೆಯಲ್ಲಿ ಉಪ್ಪಿ-ಪ್ರಿಯಾಂಕ

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರಿಗೂ ಆಹ್ವಾನ ತಲುಪಿದ್ದು ಮೇಘನಾ ಮತ್ತು ಚಿರು ಇಬ್ಬರು ಎಲ್ಲರಿಗೂ ಪರಿಚಯ ಇರುವುದರಿಂದ ಮದುವೆಯಲ್ಲಿ ಬಹುತೇಕ ಎಲ್ಲಾ ಕಲಾವಿದರು ಭಾಗಿ ಆಗಲಿದ್ದಾರೆ.

  ಕೆ ಬಾಲಚಂದರ್ ಶಿಷ್ಯರು ಮದುವೆಯಲ್ಲಿ

  ಕೆ ಬಾಲಚಂದರ್ ಶಿಷ್ಯರು ಮದುವೆಯಲ್ಲಿ

  ಹೆಸರಾಂತ ನಿರ್ದೇಶಕ ಕೆ ಬಾಲಚಂದರ್ ಅವರ ಗರಡಿಯಲ್ಲಿ ಬೆಳೆದ ಎಲ್ಲಾ ಸೂಪರ್ ಸ್ಟಾರ್ ಗಳು ಮೇಘನಾ ಮದುವೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲೆಯಾಳಂ ನ ಬಹುತೇಕ ಸ್ಟಾರ್ ಗಳು ವಿವಾಹ ಮಹೋತ್ಸವದಲ್ಲಿ ಭಾಗಿ ಆಗಲಿದ್ದಾರೆ.

  ಮದುವೆಯಲ್ಲಿ ಕನ್ನಡದ ಸ್ಟಾರ್ ಗಳು

  ಮದುವೆಯಲ್ಲಿ ಕನ್ನಡದ ಸ್ಟಾರ್ ಗಳು

  ಕನ್ನಡ ಸಿನಿಮಾರಂಗದಲ್ಲಿಯೂ ಎರಡು ಕುಟುಂಬದವರು ಎಲ್ಲರಿಗೂ ಪರಿಚಯದವರು. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಇಬ್ಬರಿಗೂ ಆಪ್ತರು ಇನ್ನು ರೆಬೆಲ್ ಸ್ಟಾರ್ ಹಾಗೂ ವಿಷ್ಣುವರ್ಧನ್ ಫ್ಯಾಮಿಲಿ ಸೇರಿದಂತೆ ಎಲ್ಲರ ಹಾಜರಾತಿ ಮದುವೆ ಮನೆಯಲ್ಲಿ ಇರಲಿದೆ.

  English summary
  Kannada actress Meghana Raj and Chiranjeevi Sarja will be married on May 2. Kamal Haasan, Ram Kumar, Raghavendra Rajkumar and Nasser have been invited to Chiranjeevi sarja and Meghana raj wedding

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X