twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ದುಬೈ ಸಂಭ್ರಮಕ್ಕೆ ಖರ್ಚಾಗಿದೆಷ್ಟು? ಬುರ್ಜ್ ಖಲೀಫಾ ಜಾಹೀರಾತಿಗೆ ಎಷ್ಟು? ಇಲ್ಲಿದೆ ಮಾಹಿತಿ

    By ಫಿಲ್ಮ್ ಡೆಸ್ಕ್
    |

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಕಿಚ್ಚನ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ನೋಡಿ ಇಡೀ ಸ್ಯಾಂಡಲ್ ವುಡ್ ದಂಗಾಗಿದೆ.

    Recommended Video

    ಬುರ್ಜ್ ಖಲೀಫಾ ಮೇಲೆ ಸುದೀಪ್ ಕಟೌಟ್ ಬರಲು ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ..? | Filmibeat Kannada

    ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಸುದೀಪ್ 25 ವರ್ಷದ ಪಯಣದ ಝಲಕ್ ಮತ್ತು ಬಹು ನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಅನ್ನು ಅನಾವರಣ ಮಾಡಲಾಗಿದೆ. ವಿಶ್ವ ವಿಖ್ಯಾತ ಕಟ್ಟಡದಲ್ಲಿ ಕನ್ನಡ ಸಿನಿಮಾದ ಟೀಸರ್ ಮತ್ತು ಕನ್ನಡ ನಟನನ್ನು ನೋಡಿ ಕನ್ನಡಿಗರು ಸಂತಸ ಪಡುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಬುರ್ಜ್ ಖಲೀಫಾ ಮೇಲೆ ರಾರಾಜಿಸಿರುವ ಕಿಚ್ಚನ ವಿಡಿಯೋದ್ದೆ ಹವಾ. ಕಿಚ್ಚನಿಗೆ ಬುರ್ಜ್ ಖಲೀಫಾ ಸಲ್ಲಿಸಿದ ಗೌರವ ಎಂದೇ ಬಿಂಬಿಸಲಾಗುತ್ತಿದೆ. ಇಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ ಸುದೀಪ್ ಸಾಧನೆ ಗುರುತಿಸಿ ಬುರ್ಜ್ ಖಲೀಫಾ ಸಲ್ಲಿಸಿದ ಗೌರವ ಅಲ್ಲ. ಇದು ಒಂದು ರೀತಿಯ ಪ್ರಮೋಷನ್ ಅಷ್ಟೆ, ದುಬಾರಿ ಪ್ರಚಾರ. ಈ ಲೇಸರ್ ಪರದೆ ಮೇಲೆ ಮಿಂಚಲು ಲಕ್ಷಗಟ್ಟಲೆ ಹಣ ನೀಡಬೇಕು. ಕಿಚ್ಚನ ದುಬೈ ಸಂಭ್ರಮಕ್ಕೆ ಸುಮಾರು 3ಕೋಟಿ ರೂಪಾಯಿಯೂ ಹೆಚ್ಚು ಖರ್ಚಾಗಿದೆ ಎಂದು ಹೇಳಲಾಗುತ್ತಿದೆ.

    ಪ್ರಚಾರದ ಒಂದು ವಿಧಾನ

    ಪ್ರಚಾರದ ಒಂದು ವಿಧಾನ

    ಬುರ್ಜ್ ಖಲೀಫಾ ಮೇಲೆ ಮಿಂಚಲು ಖರ್ಚು ಮಾಡಿರುವ ಹಣವೆಷ್ಟು ಅಂತ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಲೇಜರ್ ಶೋಗೆ ಲಕ್ಷಗಟ್ಟಲೆ ಸುರಿದಿದ್ದಾರೆ. ಇದು ಪಕ್ಕಾ ಬ್ಯುಸಿನೆಸ್ ಅಷ್ಟೆ. ನಿಮಿಷಕ್ಕೆ ಲಕ್ಷಗಟ್ಟಲೆ ಕಟ್ಟಬೇಕು. ಇಲ್ಲಿ ಸಂತಸ ಪಡಬೇಕಾಗಿದ್ದು ಎಂದರೆ ಕನ್ನಡದ ಸಿನಿಮಾವೊಂದರ ಪ್ರಮೋಷನ್ ಇಷ್ಟು ದೊಡ್ಡ ಮಟ್ಟದಲ್ಲಿ, ಇಷ್ಟು ಎತ್ತರಕ್ಕೆ ಹೊಗಿದೆಯಲ್ಲಾ ಎನ್ನುವುದು ಅಷ್ಟೆ.

    3 ನಿಮಿಷಕ್ಕೆ 70 ರಿಂದ 80 ಲಕ್ಷ

    3 ನಿಮಿಷಕ್ಕೆ 70 ರಿಂದ 80 ಲಕ್ಷ

    ಮೂರು ನಿಮಿಷ ಅಂದರೆ 180 ಸೆಕೆಂಡುಗಳ ಈ ಲೇಸರ್ ಶೋಗೆ ಬುರ್ಜ್ ಖಲೀಫಾ 'ಓಪನ್ ಕಾಲ್' ಎನ್ನಲಾಗುತ್ತದೆ. ಇದು ಒಂದು ರೀತಿಯ ಜಾಹೀರಾತು ಅಷ್ಟೆ. ಮೂರು ನಿಮಿಷಗಳ ಈ ಜಾಹೀರಾತು ಪ್ರಕಟಿಸಲು 50 ಲಕ್ಷ ರೂಪಾಯಿ ವೆಚ್ಚ ಮಾಡಬೇಕು. ವೀಕೆಂಡ್ ನಲ್ಲಿ ಇದು 70 ರಿಂದ 80 ಲಕ್ಷವನ್ನೂ ದಾಟುತ್ತದೆ ಎನ್ನುವ ಮಾಹಿತಿ ಇದೆ.

    8ಗಂಟೆ ಮೇಲೆ ಪ್ರದರ್ಶನ

    8ಗಂಟೆ ಮೇಲೆ ಪ್ರದರ್ಶನ

    'ಅರ್ಜಿ ಸಲ್ಲಿಸಲು ನಾಲ್ಕು ವಾರಗಳ ಮುಂಚೆಯೇ ಕ್ಯೂನಲ್ಲಿ ನಿಲ್ಲಬೇಕು. ಜತೆಗೆ ಪ್ರತಿಷ್ಟಿತ ಜಾಹೀರಾತು ಏಜೆನ್ಸಿಯ ಮೂಲಕ ವೀಡಿಯೋ ಮತ್ತು ಜಾಹೀರಾತಿನ ಪೂರ್ತಿ ಹಣವನ್ನು ಮೊದಲೇ ಕಟ್ಟಬೇಕು. ನಂತರ ಆಡಳಿತ ಮಂಡಳಿ ನಿಗದಿಪಡಿಸಿದ ದಿನದಂದು ರಾತ್ರಿ 8ಗಂಟೆಯ ನಂತರ ಜಾಹೀರಾತು ಬುರ್ಜ್ ಖಲೀಫಾದ ಮೇಲೆ ಪ್ರದರ್ಶನವಾಗುತ್ತದೆ.

    ಶಾರುಖ್ ಖಾನ್ ಗೆ ಶುಭಾಶಯ ತಿಳಿಸಿದ್ದ ಬುರ್ಜ್ ಖಲೀಫಾ

    ಶಾರುಖ್ ಖಾನ್ ಗೆ ಶುಭಾಶಯ ತಿಳಿಸಿದ್ದ ಬುರ್ಜ್ ಖಲೀಫಾ

    ಈ ಮೊದಲು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹುಟ್ಟುಹಬ್ಬಕ್ಕೆ ಬುರ್ಜ್ ಖಲೀಫಾ ಮೇಲೆ ಶುಭಾಶಯ ತಿಳಿಸಲಾಗಿತ್ತು. ಲೇಸರ್ ಪರದೆಯ ಮೇಲೆ ಬಾಲಿವುಡ್ ನಟ ಶಾರೂಖ್ ಖಾನ್‌ಗೆ ಗೌರವ ಸಲ್ಲಿಸಿದೆ, ಜಗತ್ತಿನ ಎತ್ತರದ ಕಟ್ಟಡದಲ್ಲಿ ಗೌರವ ಪಡೆದ ಭಾರತದ ಮೊದಲ ನಟ ಎಂಬ ಸುದ್ದಿ ಎಲ್ಲೆಡೆ‌ ಹಬ್ಬಿಸಲಾಗಿತ್ತು. ನಂತರ ಗೊತ್ತಾಗಿದ್ದು, ಶಾರೂಖ್ ಅಭಿಮಾನಿಯೊಬ್ಬ ಸಲ್ಲಿಸಿದ ದುಬಾರಿ ಬೆಲೆಯ Paid Tribute ಎನ್ನುವುದು. ಹಣ ನೀಡಿದರೆ ಬುರ್ಜ್ ಖಲೀಫಾ ಯಾರಿಗೆ ಬೇಕಾದರೂ ಶುಭಾಶಯ ತಿಳಿಸುತ್ತೆ, ಯಾವ ಸಿನಿಮಾವನ್ನಾದರು ಪ್ರಮೋಟ್ ಮಾಡುತ್ತೆ.

    ಉಚಿತವಾಗಿ ಪ್ರದರ್ಶನ ಮಾಡಿದ ಉದಾಹರಣೆಯೂ ಇದೆ

    ಉಚಿತವಾಗಿ ಪ್ರದರ್ಶನ ಮಾಡಿದ ಉದಾಹರಣೆಯೂ ಇದೆ

    ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 151ನೇ ಜಯಂತಿಯ ಸ್ಮರಣಾರ್ಥ ಅಕ್ಟೋಬರ್‌ನಲ್ಲಿ ದುಬೈನ ಭಾರತೀಯ ರಾಯಭಾರ ಕಚೇರಿಯ ಪ್ರಯತ್ನದ ಫಲವಾಗಿ ಗಾಂಧಿ ಸಂದೇಶದೊಂದಿಗೆ ತ್ರಿವರ್ಣ ಧ್ವಜವನ್ನು ಬುರ್ಜ್ ಖಲೀಫಾ ಉಚಿತವಾಗಿ ಪ್ರದರ್ಶಿಸಿ ಗೌರವಿಸಿದೆ.

    English summary
    Actor Sudeep and team how much money spend for burj khalifa show. Here is the details about burj khalifa promotion.
    Monday, February 1, 2021, 14:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X