ಟ್ರೋಲ್ ಸಾಂಗ್‌ನಲ್ಲಿ ಉಪ್ಪಿ ಬಳಸದೇ ಬಿಟ್ಟ ಮತ್ತಷ್ಟು ಜನಪ್ರಿಯ ಟ್ರೋಲ್ಸ್ ಯಾವುವು?
'ಯುಐ' ಚಿತ್ರದ ಟ್ರೋಲ್ ಸಾಂಗ್ ಸಖತ್ ವೈರಲ್ ಆಗುತ್ತಿದೆ. ಸಿನಿರಸಿಕರು ಪದೇ ಪದೆ ಕೇಳಿ ಎಂಜಾಯ್ ಮಾಡುತ್ತಿದ್ದಾರೆ. ವಿಭಿನ್ನ ಸಾಂಗ್ಸ್‌ನಿಂದ ಗಮನ ಸೆಳೆಯುವ ಉಪ್ಪಿ ಸ್ಟೈಲ್‌ಗೆ ಬಹುಪರಾಕ್ ಹೇಳುತ್ತಿದ್ದಾರೆ. ಯಾವುದೇ ವಿವಾದಕ್ಕೆ ಆಸ್ಪದ ಕೊಡದದೇ ಟ್ರೋಲ್, ಮೀಮ್ಸ್ ಪದಗಳನ್ನು ಹಾಡಿನಲ್ಲಿ ಬೇಕಾದಂತೆ ಬಳಸಿಕೊಂಡು ತಂಡ ಗಮನ ಸೆಳೆದಿದೆ.
ತಗಡು, ಜೋಡೆತ್ತು ಇಂದ ಹಿಡಿದು ಹೆಂಗ್ ಪುಂಗ್ಲಿವರೆಗೂ ಭಾರೀ ವೈರಲ್ ಆಗಿದ್ದ ಟ್ರೋಲ್ ಪದಗಳನ್ನು ಸಾಹಿತ್ಯದಲ್ಲಿ ಸೇರಿಸಲಾಗಿದೆ. ಆದರೂ ಕೂಡ ಒಂದಷ್ಟು ಟ್ರೋಲ್ ಪದಗಳು ಮಿಸ್ ಆಗಿದೆ. ಅದು ಯಾವುದು ಎಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ. ಮೊನ್ನೆವರೆಗೂ ಕೂಡ ಸಾಂಗ್ ಅನ್ನು ತಿದ್ದಿ ತೀಡಿದ್ದಾಗಿ ಚಿತ್ರತಂಡ ಹೇಳಿದೆ.

ಟ್ರೋಲ್ ಸಾಂಗ್‌ನಲ್ಲಿ ಸ್ವತಃ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಮ್ಮನ್ನು ತಾವು ಟ್ರೋಲ್ ಮಾಡಿಕೊಂಡಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಆ ಚಿತ್ರ "ಯಾರಿವನು ಮುದ್ದಾನ ಮನ್ಮಥನು" ಹಾಡಿನಲ್ಲಿ 'ಶಾಂತಿ ಕ್ರಾಂತಿ' ಚಿತ್ರದ 'ಮಧ್ಯರಾತ್ರೀಲಿ' ಹಾಡಿನ ಟ್ಯೂನ್ ಬಳಸಿಕೊಳ್ಳಲಾಗಿತ್ತು. ಈ ಸಿನಿಮಾ ಆಡಿಯೋ ರೈಟ್ಸ್ ಲಹರಿ ಸಂಸ್ಥೆ ಬಳಿಯಿದೆ. ಹಾಗಾಗಿ ಲಹರಿ ವೇಲು ಕೋರ್ಟ್ ಮೆಟ್ಟಿಲೇರಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಸಂಧಾನದ ಮೂಲಕ ವಿವಾದ ಬಗೆಹರಿದಿತ್ತು. "ಇದು ಹಂಸಲೇಖ ಟ್ಯೂನು ಕಣೆ, ನಿನ್ ಮೇಲೆ ಕೇಸ್ ಹಾಕ್ತಾರೆ ಕಣೆ" ಎಂದು ಟ್ರೋಲ್ ಹಾಡಿನಲ್ಲಿ ಇದನ್ನು ನೆನಪಿಸಲಾಗಿದೆ.
ಇತ್ತೀಚೆಗಿನ ಕೆಲ ಬೆಳವಣಿಗೆಯಲ್ಲಿ ಹುಟ್ಟಿಕೊಂಡ ಟ್ರೋಲ್ ಪದಗಳು ಸಾಂಗ್‌ನಲ್ಲಿವೆ. ಹಾಗಿದ್ದರೆ ಮೊದಲು ಮಾಡಿದ್ದ ಸಾಂಗ್‌ನಲ್ಲಿ ಇನ್ನು ಬೇರೆ ಬೇರೆ ಪದಗಳು ಇತ್ತಾ? ಅದನ್ನೆಲ್ಲಾ ಬದಲಿಸಿ ಹೊಸ ಪದಗಳನ್ನು ಸೇರಿಸಿದ್ರಾ? ಎನ್ನುವ ಚರ್ಚೆ ಕೂಡ ನಡೀತಿದೆ.
ರಕ್ಷಕ್ ಬುಲೆಟ್ ಹೇಳಿದ್ದ ಇನ್ನೊಂದ್ 10 ಮಾಸ್ ಡೈಲಾಗ್ ಬಿಟ್ರೆ ಕರ್ನಾಟಕನೇ ನಮ್ದು, ಸಂಗೀತ ಶೃಂಗೇರಿ ಅವರ ಹೌದಾ, ಅದೇ ರೀತಿ 'ಹೌದು ಹುಲಿಯಾ' ಇನ್ನು ಬೆಳಗಾವಿ ಜಿಲ್ಲೆ ಐನಾಪುರದ ಪೀರಪ್ಪ ಕಟ್ಟೀಮನಿ ಹೇಳಿದ ಹೌದು ಹುಲಿಯಾ ಹೀಗೆ ಸಾಕಷ್ಟು ಪದಗಳು ಹಾಡಿನಲ್ಲಿ ಇಲ್ಲ. ಹಾಗಿದ್ದರೆ ಟ್ರೋಲ್ ಸಾಂಗ್‌ನಲ್ಲಿ ಬಳಸದೇ ಬಿಟ್ಟ ಮತ್ತಷ್ಟು ಜನಪ್ರಿಯ ಟ್ರೋಲ್ ಡೈಲಾಗ್ಸ್ ಯಾವುವು ಮುಂದೆ ಓದಿ.

* ಇದು..ಇದು..ಆಕ್ಚುಲಿ ಚೆನ್ನಾಗಿರೋದು
* ಬರೀ ಇಂಥವೆಯಾ
* ಯಾವೋ ಇವೆಲ್ಲಾ
* ಏಯ್ ಸೂರ್ಯ ನಿಂಗೆ ಒಳ್ಳೆದಾಯ್ತದಾ?
* ಎಲ್ಲೋ ಗೊಜಪ್ಪ ನಿನ್ನ ಅರಮನೆ
* ನನ್ ಮೇಲೆ ಆಣೆ ಇಟ್ಟು ಹೇಳು
* ಇಷ್ಟು ಹೇಳೋಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್
* ಮಹಾಪ್ರಭುಗಳೇ ನೀವೇನು ಇಲ್ಲಿ
* ಈ ತರ ಹಿಂಸೆ ಕೊಟ್ಟರೆ ಯಾರು ಬದುಕುತ್ತಾರೆ


Click it and Unblock the Notifications











