ನಟಿ ಅಮೂಲ್ಯ ಸೀಮಂತದ ಅದ್ಧೂರಿ ವಿಡಿಯೋ ರಿಲೀಸ್

ನಟಿ ಅಮೂಲ್ಯ ಅವರ ಸೀಮಂತ ಕಾರ್ಯ ಅದ್ದೂರಿಯಾಗಿ ನೆರವೇರಿದೆ. ಕಾರ್ಯಕ್ರಮದ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ಈ ವಿಡಿಯೋ ತುಣುಕನ್ನು ನಟಿ ಅಮೂಲ್ಯ ಕೂಡ ಹಂಚಿಕೊಂಡಿದ್ದಾರೆ. ಜೊತೆಗೆ ಯುಟ್ಯೂಬ್‌ನಲ್ಲೂ ರಿಲೀಸ್‌ ಮಾಡಲಾಗಿದೆ.

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅಮೂಲ್ಯ ಫೋಟೊಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಸಂತಸ ಸುದ್ದಿಯನ್ನು ಹಂಚಿಕೊಂಡಿದ್ದರು. ಈಗ ಅಮೂಲ್ಯ ಅವರಿಗೆ ಕುಟುಂಬಸ್ಥರು ಸೀಮಂತ ಶಾಸ್ತ್ರವನ್ನು ನೆರೆವೇರಿಸಿದ್ದಾರೆ.

ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅಮೂಲ್ಯ ವಿವಾಹದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಅವರು ಸದಾ ಆಕ್ಟೀವ್ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರುತ್ತಾರೆ. ಹಾಗಾಗಿ ಅವರ ಸಂತಸದ ಕ್ಷಣಗಳನ್ನು ಅಭಿಮಾನಿಗಳು ಕೂಡ ಸಂಭ್ರಮಿಸುತ್ತಾರೆ.

ಅದ್ಧೂರಿಯಾಗಿ ನೆರವೇರಿದ ಅಮೂಲ್ಯ ಅವರ ಸೀಮಂತ ಕಾರ್ಯ!

ಅದ್ಧೂರಿಯಾಗಿ ನೆರವೇರಿದ ಅಮೂಲ್ಯ ಅವರ ಸೀಮಂತ ಕಾರ್ಯ!

ಅಮೂಲ್ಯ ಈಗ 7 ತಿಂಗಳ ಗರ್ಭಿಣಿ. ಹೀಗಾಗಿ ಅಮೂಲ್ಯ ಅವರ ಸೀಮಂತ ಶಾಸ್ತ್ರವನ್ನು ಕುಟುಂಬಸ್ಥರು ನೆರೆವೇರಿಸಿದ್ದಾರೆ. ನಟಿ ಅಮೂಲ್ಯ ಅವರು ಕೆಂಪು ಮತ್ತು ಗೋಲ್ಡನ್ ಬಣ್ಣದ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದಾರೆ. ​ಈ ಸೀಮಂತ ಶಾಸ್ತ್ರದಲ್ಲಿ ಅಮೂಲ್ಯ ಮನೆಯವರು ಹಾಗೂ ಗಂಡನ ಮನೆಯವರು ಸೇರಿದಂತೆ ಆಪ್ತರು, ಸ್ನೇಹಿತರು ಭಾಗಿ ಆಗಿದ್ದರು. ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರ ಸಮ್ಮುಖದಲ್ಲಿ ಸೀಮಂತ ಕಾರ್ಯ ಸುಸೂತ್ರವಾಗಿ ನೆರವೇರಿದೆ.

ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿದ್ದರು ಅಮೂಲ್ಯ!

ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿದ್ದರು ಅಮೂಲ್ಯ!

ಅಮೂಲ್ಯ ಕೆಲವು ದಿನಗಳ ಹಿಂದಷ್ಟೇ ತುಂಬು ಗರ್ಭಿಣಿಯಾಗಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೊಟೋಗಳನ್ನು ಕೂಡ ಅಮೂಲ್ಯ ಅವರು ಹಂಚಿಕೊಂಡಿದ್ದರು. ಇನ್ನು ಅಮೂಲ್ಯ ಅವರ ಪತಿ ಜಗದೀಶ್ ಅವರ ಮನೆಯಲ್ಲೇ ಸೀಮಂತ ನಡೆದಿದೆ. ಅದ್ದೂರಿಯಾದ ವೇದಿಕೆಯನ್ನು ಹೂವಿನ ಅಲಂಕಾರದಿಂದ ನಿರ್ಮಾಣ ಮಾಡಲಾಗಿತ್ತು. ಹೂವುಗಳು ಹಾಗೂ ಹಸಿರು ತೊರಣಗಳಿಂದ ಸಿಂಗಾರ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಅಮೂಲ್ಯ ಸೀಮಂತ ಶಾಸ್ತ್ರ ನೆರೆವೇರಿದೆ.

ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಅಮೂಲ್ಯ ಪತಿ ಜಗದೀಶ್!

ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಅಮೂಲ್ಯ ಪತಿ ಜಗದೀಶ್!

ಇನ್ನು ಮಗು ಎಂದ ಮೇಲೆ ಅಪ್ಪ, ಅಮ್ಮ ಆಗುವವರಿಗೆ ಒಂದಷ್ಟು ನಿರೀಕ್ಷೆಗಳು ಇರುತ್ತವೆ. ಅಂತೆಯೇ ಅಮೂಲ್ಯ ಅವರ ಪತಿ ಜಗದೀಶ್ ಅವರಿಗೂ ಮಗುನಿನ ಬಗ್ಗೆ ತುಂಬಾ ಆಸೆ ಇದೆಯಂತೆ. ಜಗದೀಶ್ ಅವರಿಗೆ ಹೆಣ್ಣು ಆಗಬೇಕು ಎನ್ನುವ ಬಯಕೆಯಂತೆ. ಅಮೂಲ್ಯ ಅವರಿಗೆ ಯಾವ ಮಗು ಆದರೂ ಓಕೆ ಅಂತೆ. ಈ ವಿಚಾರವನ್ನೂ ಅವರೇ ಈ ಹಿಂದೆ ಹೇಳಿಕೊಂಡಿದ್ದರು.

ಅಮೂಲ್ಯ ಅವರ ಬಗೆಗಿನ ಕ್ರೇಜ್ ಕಡಿಮೆ ಆಗಿಲ್ಲ!

ಅಮೂಲ್ಯ ಅವರ ಬಗೆಗಿನ ಕ್ರೇಜ್ ಕಡಿಮೆ ಆಗಿಲ್ಲ!

ನಟಿ ಅಮೂಲ್ಯ ಅವರು ಸಿನಿಮಾಗಳಲ್ಲಿ ನಟನೆ ಮಾಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ. ಆದರೂ ಕೂಡ ಅವರು ಅಭಿಮಾನಿಗಳ ಮನಸ್ಸಿಂದ, ಜನರ ಮನಸ್ಸಿಂದ ದೂರ ಆಗಿಲ್ಲ. ಸಿನಿಮಾ ರಂಗದಲ್ಲಿ ಬೇರೆ ನಟಿಯರೂ ಇದ್ದಾರೆ. ಆದರೆ ಅವರೆಲ್ಲರಿಗೂ ಮೀರಿದ ಕ್ರೇಜ್ ಇನ್ನೂ ಅಮೂಲ್ಯ ಅವರ ಬಗ್ಗೆ ಇದೆ. ಅವರ ಮದುವೆ, ನಿಶ್ಚಿತಾರ್ಥ, ಈಗ ಮಗು. ಯಾವುದೇ ವಿಚಾರ ಆದರೂ ಅಮೂಲ್ಯ ಅವರ ಸಂಭ್ರಮವನ್ನು ಅಭಿಮಾನಿಗಳು ಸಂಭ್ರಮಿಸುತ್ತಾರೆ ಎನ್ನುವುದು ವಿಶೇಷ.

More from Filmibeat

English summary
Actress Amulya Baby Shower Video Going Viral In Socia Media,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X