For Quick Alerts
  ALLOW NOTIFICATIONS  
  For Daily Alerts

  ಶರಣ್ ಕಾಮಿಡಿಗೆ ಮನಸೋತ ವಿಮರ್ಶಕರು

  By Pavithra
  |

  ತಂತ್ರಜ್ಞರೇ ಸೇರಿ ನಿರ್ಮಾಣ ಮಾಡಿರುವ Rambo 2 ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಅಷ್ಟೇ ಅಲ್ಲದೇ ರಿಲೀಸ್ ಆದ ಮೊದಲ ದಿನವೇ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

  ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ Rambo 2 ಚಿತ್ರದಲ್ಲಿ ಕಲಾವಿದರೇ ದಂಡೇ ಇದೆ. ಶರಣ್ , ಆಶಿಕಾ ರಂಗನಾಥ್, ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್ ಹೀಗೆ ಹಲವಾರು ಕಲಾವಿದರು ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

  Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿRambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ

  ಹಾಗಾದ್ರೆ, 'Rambo 2 ' ಚಿತ್ರ ವಿಮರ್ಶಕರಿಂದ ಪಡೆದುಕೊಂಡ ಅಂಕವೆಷ್ಟು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'Rambo 2' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  ಪಕ್ಕಾ ಮಾಸ್‌ ಮಸಾಲೆಯ ಚಿತ್ರ :ವಿಜಯ ಕರ್ನಾಟಕ

  ಪಕ್ಕಾ ಮಾಸ್‌ ಮಸಾಲೆಯ ಚಿತ್ರ :ವಿಜಯ ಕರ್ನಾಟಕ

  Rambo 2 ಸಿನಿಮಾ ಇಷ್ಟವಾಗುವುದು ಚಿತ್ರಕಥೆಯಿಂದಾಗಿ. ಸಿಂಪಲ್‌ ಆಗಿರುವ ಲೈನ್‌ ಒಂದನ್ನು ಕಮರ್ಷಿಯಲ್ ಆಗಿ ಎಲ್ಲರಿಗೂ ಇಷ್ಟವಾಗುವಂತೆ ಮಾಡುವುದು ಸಾಹಸದ ಕೆಲಸ. ಅದನ್ನು ನಿರ್ದೇಶಕ ಅನಿಲ್‌ ಕುಮಾರ್‌ ಬಹಳ ಚೆಂದವಾಗಿ ಮಾಡಿದ್ದಾರೆ. ಕೃಷ್ಣ (ಶರಣ್) ಎಲ್ಲದರಲ್ಲೂ ವೆರೈಟಿ ಬಯಸುವ ಹುಡುಗ. ಈ ವೆರೈಟಿ ಹುಚ್ಚು ಎಲ್ಲಿಯವರೆಗೆ ಎಂದರೆ ತಾನು ಮದುವೆಯಾಗುವ ಹುಡುಗಿಯೂ ವೆರೈಟಿಯಾಗಿರಬೇಕು ಎಂದು ಆಸೆ ಪಡುವ ಮಟ್ಟಿಗೆ. ಇವನ ಜೀವನದಲ್ಲಿ ಅಂತಹ ವೆರೈಟಿ ಹುಡುಗಿ ಬರುತ್ತಾಳಾ? ಅವಳು ಇವನಿಗೆ ಒಲಿಯುತ್ತಾಳಾ? ಹೀಗೆ ಒಲಿಸಿಕೊಳ್ಳುವಾಗ ಒಂದಷ್ಟು ಟ್ವಿಸ್ಟ್ ಗಳು ಮತ್ತು ಟರ್ನಿಂಗ್ ಗಳಿದ್ದು, ಅವಲ್ಲೆವನ್ನು ಎಂಜಾಯ್ ಮಾಡುವಂಥ ಚಿತ್ರಕಥೆ ಮಾಡಿದ್ದಾರೆ ನಿರ್ದೇಶಕರು. ಚಿಕ್ಕಣ್ಣ, ಸಾಧು ಕೋಕಿಲಾ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗಿಸುವುದರಲ್ಲಿ ಅನುಮಾನವೇ ಇಲ್ಲ.

  ಕಾಮಿಡಿ ಕಾರಿನಲ್ಲಿ ಥ್ರಿಲ್ಲಿಂಗ್ ಪಯಣ: ಉದಯವಾಣಿ

  ಕಾಮಿಡಿ ಕಾರಿನಲ್ಲಿ ಥ್ರಿಲ್ಲಿಂಗ್ ಪಯಣ: ಉದಯವಾಣಿ

  ಇಲ್ಲಿ ತನ್ನ ಗರ್ಲ್ ಫ್ರೆಂಡ್ ನೊಂದಿಗೆ ಲಾಂಗ್‌ ಡ್ರೈವ್‌ಗೆಂದು ಹೋಗುವ ನಾಯಕ, ದಾರಿಯಲ್ಲಿ ದೊಡ್ಡ ಕಾರ್‌ವೊಂದರಿಂದ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಾನೆ. ಆ ಸಮಸ್ಯೆಗಳಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಚಿತ್ರದ ಕಥೆ. ಮೊದಲೇ ಹೇಳಿದಂತೆ ಇದು "ಡ್ಯುಯಲ್‌' ತರಹದ ಚಿತ್ರವೇ ಹೊರತು, ಅದೇ ಚಿತ್ರವಲ್ಲ. ಅದೊಂದು ಪಕ್ಕಾ ಥ್ರಿಲ್ಲರ್‌ ಚಿತ್ರವಾಗಿತ್ತು. ಆದರೆ, ಇಲ್ಲಿ ಥ್ರಿಲ್ಲರ್‌ ಅಂಶಗಳೊಂದಿಗೆ ಕಾಮಿಡಿ, ಸೆಂಟಿಮೆಂಟ್ ಎಲ್ಲವನ್ನೂ ಸೇರಿಸಿ ಚಿತ್ರಕಥೆ ಮಾಡಲಾಗಿದೆ. ಮೊದಲಾರ್ಧ ಚಿತ್ರ ಕಾಮಿಡಿಯಿಂದ ಸಾಗುತ್ತದೆ. ಕ್ರಮೇಣ ಒಂದು ಹಂತದಲ್ಲಿ ಗಂಭೀರವಾಗುವುದಷ್ಟೇ ಅಲ್ಲ, ಎಮೋಷನಲ್ ಸಹ ಆಗುತ್ತದೆ. ಕೊನೆಗೆ ಒಂದು ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಚಿತ್ರದ ಒಂದು ವಿಶೇಷತೆಯೆಂದರೆ, ಎಲ್ಲೂ ಬೋರ್‌ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಎಲ್ಲೋ ಸ್ವಲ್ಪ ನಿಧಾನವಾಯಿತು ಎನ್ನುವಷ್ಟರಲ್ಲಿ ಒಂದು ಚೇಸ್, ಕಾಮಿಡಿ ದೃಶ್ಯ ಅಥವಾ ಹಾಡು ಬಂದು, ಚಿತ್ರಕ್ಕೊಂದು ವೇಗ ಕೊಡುತ್ತದೆ.

  ಹಾಸ್ಯದೊಳಗೆ ವೆರೈಟಿ ರೋಚಕತೆ! : ವಿಜಯವಾಣಿ

  ಹಾಸ್ಯದೊಳಗೆ ವೆರೈಟಿ ರೋಚಕತೆ! : ವಿಜಯವಾಣಿ

  ಆರಂಭದಿಂದ ಅಂತ್ಯದವರೆಗೂ ಬರೀ ನಗುವನ್ನೇ ನೀಡಬೇಕೆಂದು ನಿರ್ಧರಿಸಿರುವ ನಿರ್ದೇಶಕ ಅನಿಲ್​ಕುಮಾರ್ ಮತ್ತು ತಂಡ, ಯಾವುದೇ ಲಾಜಿಕ್​ಗೂ ಮೊರೆಹೋಗದೆ ಬರೀ ಕಾಮಿಡಿ ಮ್ಯಾಜಿಕ್ ಮಾಡಿದೆ. ತರಲೆ, ತುಂಟ ಸಂಭಾಷಣೆಗಳು ನಗು ತರಿಸುತ್ತವೆ. ಸ್ಪೋರ್ಟ್ಸ್ ಕಾರಿನಷ್ಟೇ ವೇಗವಾಗಿ, ಸಲೀಸಾಗಿ ಶರಣ್ ನಟಿಸಿದ್ದಾರೆ. ಆಶಿಕಾ ಈ ಬಾರಿ ಗ್ಲಾಮರ್ ಬಗ್ಗೆ ಹೆಚ್ಚು ಗಮನಕೊಟ್ಟಂತಿದೆ. ಹಾಸ್ಯದ ಚಿನಕುರಳಿಯಾಗಿ ಚಿಕ್ಕಣ್ಣ ಕಾಣಿಸಿಕೊಂಡರೆ, ಸಾಧು ಕೋಕಿಲ ಇದ್ದಷ್ಟು ಹೊತ್ತು ನಗಿಸುತ್ತಾರೆ. ಇಡೀ ಸಿನಿಮಾದ ಅಚ್ಚರಿ ರವಿಶಂಕರ್. ಅದೇನು ಎಂಬುದು ತೆರೆಮೇಲೆ ನೋಡಿದರೇನೇ ಸೂಕ್ತ! ಅರ್ಜುನ್ ಜನ್ಯ ಹಾಡುಗಳು ಗುನುಗುವಂತಿದ್ದರೆ, ಅದನ್ನು ಕೋರಿಯೋಗ್ರಫಿ ಮಾಡಿರುವ ರೀತಿಗೂ ಮೆಚ್ಚುಗೆ ಸಲ್ಲಬೇಕು. ಸುಧಾಕರ್ ಕ್ಯಾಮರಾ ಎಲ್ಲವನ್ನೂ ರಂಗುರಂಗಾಗಿ ಸೆರೆಹಿಡಿದಿದೆ.

  Raambo 2 Movie Review - Times of India

  Raambo 2 Movie Review - Times of India

  What works for Raambo 2 is that it's story is elevated by its production values. The cinematography, music, costumes and stunts are all exhilarating and ensure the viewer enjoys his or her time in the cinema hall. The dialogues are also a selling point, with Anil Kumar delivering just what people what from him. Sharan has put in a commendable performance and it needs to be lauded. Ashika looks pretty and has delivered what is required of her in a role that is more than just an eye candy. Chikkanna is seen in a different role and his comedy draws laughter and whistles. P Ravi Shankar in his surprise role is praiseworthy and is one of the best takeaways from the film. A Sharan film is seen by audiences as a getaway to enjoy themselves with some good laughter and entertainment. Raambo 2 delivers just that and the message comes as an added bonus.

  English summary
  Kannada Actor Sharan and Ashika Ranganath starrer Kannada Movie 'Rambo2' has received good response from the critics. Here is the collection of 'Rambo' reviews by Top News Papers of Karnatak Rambo 2

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X