Just In
Don't Miss!
- News
ಸಿಡಿ ಹೇಳಿಕೆ: ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಕುಮಾರಸ್ವಾಮಿ!
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು
ಹೊಸ ಹೊಸ ಸಿನಿಮಾಗಳು, ವಿವಾದಗಳು, ಟ್ರೋಲ್, ಪ್ಯಾನ್ ಇಂಡಿಯಾ ಸಿನಿಮಾ ವಾರ್ ಹಾಗೂ ಕೊರೊನಾ ಕಾಟದ ನಡುವೆಯೂ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಮದುವೆ ಸಂಭ್ರಮ ಕೂಡ ಜೋರಾಗಿತ್ತು. ಚಿತ್ರರಂಗದಲ್ಲಿ ಅನೇಕರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರೊನಾ ವೈರಸ್ ನಡುವೆಯೂ ಕುಟುಂಬದವರು ಮತ್ತು ತೀರ ಆಪ್ತರ ನಡುವೆ ಅನೇಕ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಈ ವರ್ಷದ ಮದುವೆ ಸಮಾರಂಭದ ಫ್ಲ್ಯಾಶ್ ಬ್ಯಾಕ್ ನೋಡಿದರೆ ಕಿರುತೆರೆ ಕಲಾವಿದರೆ ಹೆಚ್ಚಾಗಿ ಕಾಣಿಸುತ್ತಾರೆ. ಆ ದಿನಗಳು ಚೇತನ್, ನಟಿ ಭಾಮಾ, ನಿಖಿಲ್ ಕುಮಾರಸ್ವಾಮಿ ಹಾಗೂ ಕಿರುತೆರೆಯಲ್ಲೂ ಸಾಕಷ್ಟು ಜೋಡಿ ಹೊಸ ಜೀವನ ಪ್ರಾರಂಭಿಸಿದ್ದಾರೆ. ಈ ವರ್ಷ ಯಾರೆಲ್ಲಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು ಅಂತ ಒಮ್ಮೆ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬರೋಣ...

ನಟ ರಾಜ್ ದೀಪಕ್ ಶೆಟ್ಟಿ
ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಖ್ಯಾತ ನಟ ರಾಜ್ ದೀಪಕ್ ಶೆಟ್ಟಿ ಅವರು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಹಾಗೂ ಮಂಗಳೂರಿನಲ್ಲಿ ಇವೆಂಟ್ ಆರ್ಗನೈಸರ್ ಆಗಿರುವ ಸೋನಿಯಾ ರಾಡ್ರಿಗಸ್ ಜೊತೆ ಸಪ್ತಪದಿ ತುಳಿದಿದ್ದಾರೆ. ರಾಜ್ ದೀಪಕ್ ಶೆಟ್ಟಿ ಮದುವೆ ನವೆಂಬರ್ ತಿಂಗಳ ಪ್ರಾರಂಭದಲ್ಲಿ ಮಂಗಳೂರಿನ ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ನೆರವೇರಿದೆ.

ಕಿರುತೆರೆ ನಟ ಅಜಯ್ ರಾಜ್
ಕನ್ನಡ ಕಿರುತೆರೆಯ ಖ್ಯಾತ ನಟ ಅಜಯ್ ರಾಜ್ ಬಹುಕಾಲದ ಗೆಳತಿ ಪದ್ಮಿನಿ ದೇವನಹಳ್ಳಿ ಜೊತೆ ಅಕ್ಟೋಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಕ್ತ ಧಾರಾವಾಹಿಯ ನಂಜುಂಡಿ ಪಾತ್ರದ ಮೂಲಕ ಅಜಯ್ ರಾಜ್ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯ ಜಾಜಿ ಪಾತ್ರದಲ್ಲಿ ಪದ್ಮಿನಿ ನಟಿಸಿದ್ದರು. ನಟ ಅಜಯ್ ರಾಜ್ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡ ಸಿನಿಮಾ ಜೊತೆಗೆ ತಮಿಳು ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಅಜಯ್ ಕೊನೆಯದಾಗಿ ಮುಂದಿನ ನಿಲ್ದಾಣ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದು ಗೌಡ
ಕನ್ನಡ ಕಿರುತೆರೆಯ ಖ್ಯಾತ ನಟ ಚಂದು ಬಿ ಗೌಡ ಬಹುಕಾಲದ ಗೆಳತಿ ಶಾಲಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಕ್ಟೋಬರ್ 29 ನಡೆದ ಮದುವೆ ಸಮಾರಂಭದಲ್ಲಿ ನಟ ಚಂದು ಗೆಳತಿ ಶಾಲಿನಿ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಚಂದು ಮತ್ತು ಶಾಲಿನಿ ಸರಳವಾಗಿ, ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇಬ್ಬರ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ.

ನಟಿ ಮಯೂರಿ
ನಟಿ ಮಯೂರಿ ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮಯೂರಿ ಮತ್ತು ಅರುಣ್ ಮದುವೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ತೀರ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮಯೂರಿ ಮತ್ತು ಅರುಣ್ ಮನೆಯವರ ಒಪ್ಪಿಗೆ ಪಡೆದು, ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ದವಾಗಿ ಈ ವರ್ಷ ಹಸೆಮಣೆ ಏರಿದ್ದಾರೆ.
ಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿ

ಸುಮನಾ ಕಿತ್ತೂರು
ವಿಭಿನ್ನ ಕಥಾಹಂದರದ ಮತ್ತು ಕಾದಂಬರಿ ಆಧಾರಿತ ಪ್ರಯೋಗಾತ್ಮಕ ಚಿತ್ರಗಳಿಂದ ಹೆಸರು ಗಳಿಸಿರುವ ನಿರ್ದೇಶಕಿ ಸುಮನ್ ಕಿತ್ತೂರು ಲಾಕ್ ಡೌನ್ ನಡುವೆಯೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಪುದುಚೆರಿಯಲ್ಲಿ ಸರಳ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಅವರೊಂದಿಗೆ ಸುಮನ್ ಕಿತ್ತೂರು ಹೊಸ ಬದುಕನ್ನು ಆರಂಭಿಸಿದ್ದಾರೆ.
ಶಿವಮೊಗ್ಗದ ಹುಡುಗನೊಂದಿಗೆ ಪುದುಚೆರಿಯಲ್ಲಿ ಸುಮನಾ ಕಿತ್ತೂರು ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

ಕಿರುತೆರೆ ನಟಿ ಸುಪ್ರಿಯಾ
ಕೊರೊನಾ ಲಾಕ್ ಡೌನ್ ನಡುವೆಯೂ ಕಿರುತೆರೆಯ ಖ್ಯಾತ ನಟಿ ಸುಪ್ರಿಯಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಜಯ್ ಜೊತೆ ಸುಪ್ರಿಯಾ ಹಸೆಮಣೆ ಏರಿದ್ದಾರೆ. ಸುಪ್ರಿಯಾ ಎನ್ನುವುದಕ್ಕಿಂತ ಮಗಳು ಜಾನಕಿ ಧಾರಾವಾಹಿಯ ಸಂಜನಾ ಅಂದರೆ ಎಲ್ಲರಿಗೂತ್ತಾಗುತ್ತೆ. ಸಂಜನಾ ಪಾತ್ರದ ಮೂಲಕ ಸುಪ್ರಿಯಾ ಕನ್ನಡಿಗರ ಮನೆಮಾತಾಗಿದ್ದರು.
ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ಖ್ಯಾತ ನಟಿ ಸುಪ್ರಿಯಾ

ನಿರ್ದೇಶಕ ಎಪಿ ಅರ್ಜುನ್
ನಿರ್ದೇಶಕ ಎ.ಪಿ. ಅರ್ಜುನ್ ಮೇ ತಿಂಗಳಲ್ಲಿ ಸರಳವಾಗಿ ತಮ್ಮ ಮನೆಯಲ್ಲಿಯೇ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಅನ್ನಪೂರ್ಣ (ಅನು) ಅವರೊಂದಿಗೆ ಅರ್ಜುನ್ ಹೊಸ ಜೀವನಕ್ಕೆ ಪ್ರವೇಶಿಸಿದರು. ಕುಟುಂಬದ ಸದಸ್ಯರು ಹಾಗೂ ಕೆಲವೇ ಮಂದಿ ಆಪ್ತರು ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳು

ನಿಖಿಲ್ ಕುಮಾರಸ್ವಾಮಿ ಮದುವೆ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ನಿಗದಿಯಾದ ಮುಹೂರ್ತದಲ್ಲಿಯೇ ನಿಖಿಲ್-ರೇವತಿ ಪತಿ-ಪತ್ನಿಯರಾಗಿದ್ದಾರೆ. ಕುಮಾರಸ್ವಾಮಿ ಆಸೆಯಂತೆ ತಮ್ಮ ನೆಚ್ಚಿನ ಕ್ಷೇತ್ರ, ರಾಮನಗರದ ಸಮೀಪ ಕೇತಗಾನಹಳ್ಳಿ ಫಾರ್ಮ್ ಹೌಸ್ ನಲ್ಲಿ ಅಚ್ಚುಕಟ್ಟಾಗಿ, ಸರಳವಾಗಿ ಮದುವೆಯಾಗಿದ್ದಾರೆ. ಸಂಪ್ರದಾಯಬದ್ದವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬಂಸ್ಥರು ಮಾತ್ರ ಹಾಜರಿದ್ದು ವಧುವರರಿಗೆ ಆಶೀರ್ವದಿಸಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿಗೆ ಶುಭಹಾರೈಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

ನಟಿ ಶೀಲಾ ಕೌರ್
ಅಜಯ್ ರಾವ್ ಜತೆ ಕನ್ನಡದ 'ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸಿದ್ದ ಶೀಲಾ ಕೌರ್ ಮಾರ್ಚ್ ತಿಂಗಳಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಶೀಲಾ ಕೌರ್ ಉದ್ಯಮಿ ಸಂತೋಷ್ ರೆಡ್ಡಿ ಅವರೊಂದಿಗೆ ಹಸೆಮಣೆ ಏರಿದ್ದಾರೆ. 2009ರಲ್ಲಿ ಬಿಡುಗಡೆಯಾದ ಆರ್. ಚಂದ್ರ ನಿರ್ದೇಶನದ 'ಪ್ರೇಮ್ ಕಹಾನಿ' ಚಿತ್ರದಲ್ಲಿ ಅಜಯ್ ರಾವ್ ಜತೆಗೆ ಶೀಲಾ ನಟಿಸಿದ್ದರು. ಗಣೇಶ್ ವಿನಾಯಕ್ ನಿರ್ದೇಶನದ 'ಹೈಪರ್' ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಬಾಲನಟಿಯಾಗಿ ಕ್ಯಾಮೆರಾ ಎದುರಿಸಿದ್ದ ಅವರು ಕನ್ನಡದಲ್ಲಿ ಎರಡೇ ಸಿನಿಮಾಗಳಲ್ಲಿ ನಟಿಸಿದ್ದರೂ, ತಮಿಳಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶೀಲಾ ಕೌರ್ ಬದುಕಲ್ಲಿ ಹೊಸ 'ಪ್ರೇಮ್ ಕಹಾನಿ': ಸಾಂಸಾರಿಕ ಬದುಕಿಗೆ ಕಾಲಿಟ್ಟ ಚೆಲುವೆ

ಕಿರುತೆರೆ ನಟಿ ರಾಧಿಕಾ ರಾವ್
ಮಂಗಳೂರು ಮೂಲದ ನಟಿ ರಾಧಿಕಾ ರಾವ್ ಗೆಳೆಯ ಆಕರ್ಷ್ ಜೊತೆ ಹಸೆಮಣೆ ಏರಿದ್ದಾರೆ. ಮಾರ್ಚ್ 11ರಂದು ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರಾಧಿಕಾ-ಆಕರ್ಷ್ ಪತಿ-ಪತ್ನಿಯರಾಗಿದ್ದಾರೆ. 'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ರಾಧಿಕಾ ರಾವ್ ಬಹುಬೇಗ ಫೇಮಸ್ ಆದರು. 'ಮಂಗಳೂರು ಹುಡ್ಗಿ ಅಮೂಲ್ಯ' ಆಗಿಯೇ ಗುರುತಿಸಿಕೊಂಡಿರುವ ರಾಧಿಕಾ ರಾವ್, ಇಂಟರ್ ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್ ಆಕರ್ಷ್ ಜೊತೆ ಹಸೆಮಣೆ ಏರಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಖ್ಯಾತ ನಟಿ ರಾಧಿಕಾ ರಾವ್

ಚಂದನ್ ಶೆಟ್ಟಿ-ನಿವೇದಿತಾ ಗೌಡ
'ಬಿಗ್ ಬಾಸ್' ವಿನ್ನರ್, ಕನ್ನಡ ರಾಪರ್ ಚಂದನ್ ಶೆಟ್ಟಿ ಸಹ ಇದೆ ವರ್ಷ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ತಾವು ಇಷ್ಟ ಪಟ್ಟ ಹುಡುಗಿ ನಿವೇದಿತಾ ಗೌಡ ಜೊತೆಗೆ ಫೆಬ್ರವರಿಯಲ್ಲಿ ಚಂದನ್ ಶೆಟ್ಟಿ ಹೊಸ ಜೀವನ ಆರಂಭಿಸಿದ್ದಾರೆ. ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.
'ಗೊಂಬೆ' ನಿವೇದಿತಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ ಚಂದನ್ ಶೆಟ್ಟಿ

ಕಿರುತೆರೆ ನಟಿ ಅನುಷಾ ಹೆಗ್ಡೆ
ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯೊಂದರಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ನಟಿ ಅನುಷಾ ಹೆಗ್ಡೆ ಫೆಬ್ರವರಿಯಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಜೊತೆಗೆ ವೈವಾಹಿಕ ಬದುಕಿಗೆ ಅನುಷಾ ಹೆಗ್ಡೆ ನಾಂದಿ ಹಾಡಿದ್ದಾರೆ. ತೆಲುಗಿನ ಸೀರಿಯಲ್ ವೊಂದರಲ್ಲಿ ಅನುಷಾ ಹೆಗ್ಡೆ ಮತ್ತು ಪ್ರತಾಪ್ ಸಿಂಗ್ ಶಾ ಒಟ್ಟಿಗೆ ಅಭಿನಯಿಸುತ್ತಿದ್ದರು. ಸೀರಿಯಲ್ ಶೂಟಿಂಗ್ ನಡುವೆಯೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದೆ. ಇಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿ ನೀಡಿದ್ದು, ಅನುಷಾ ಹೆಗ್ಡೆ ಮತ್ತು ಪ್ರತಾಪ್ ಸಿಂಗ್ ಶಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ.

ನಟ ಶ್ರವಂತ್ ಮತ್ತು ರಾಧಿಕಾ ಮದುವೆ
ಹಲವು ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಶ್ರವಂತ್ ಫೆಬ್ರವರಿ 14ರಂದು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕಿರುತೆರೆ ನಟಿ ರಾಧಿಕಾ ಜೊತೆಗೆ ಶ್ರವಂತ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಅದೇ ಪಾತ್ರದಿಂದ ಫೇಮಸ್ ಆಗಿದ್ದರು. ನಟ ಶ್ರವಂತ್ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಮದುವೆ ಬಳಿಕ ರಾಧಿಕಾ ಧಾರವಾಹಿಯಿಂದ ದೂರ ಸರಿದಿದ್ದಾರೆ.

ಆ ದಿನಗಳು ಖ್ಯಾತಿಯ ನಟ ಚೇತನ್
'ಆ ದಿನಗಳು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದ ನಟ ಚೇತನ್ ಫೆಬ್ರವರಿ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಪ್ರೀತಿಸಿದ ಯುವತಿ ಮೇಘ ಜೊತೆ ನಟ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಚೇತನ್ ಮತ್ತು ಮೇಘ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ. ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಕಾನೂನಾತ್ಮಕವಾಗಿ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ.
ನಟ ಚೇತನ್-ಮೇಘ ಸರಳ ವಿವಾಹ: ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಮದುವೆ ನೋಂದಣಿ

ನಟಿ ಭಾಮಾ
ಕನ್ನಡ ಚಿತ್ರಗಳಲ್ಲೂ ಮಿಂಚಿರುವ ಮಲೆಯಾಳಂನ ಖ್ಯಾತ ನಟಿ ಭಾಮಾ ಜನವರಿಯಲ್ಲಿ ಅಂದರೆ 2020 ಪ್ರಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಭಾಮಾ-ಅರುಣ್ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇರಳದ ಕೊಟ್ಟಾಯಂನಲ್ಲಿ ಜನವರಿ 30ರಂದು ನಟಿ ಭಾಮಾ ಮತ್ತು ಅರುಣ್ ರವರ ಕಲ್ಯಾಣ ವಿಜೃಂಭಣೆಯಿಂದ, ಅಷ್ಟೇ ಸಾಂಪ್ರದಾಯಿಕವಾಗಿ ಜರುಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮೊದಲ ಸಲ' ನಟಿ ಭಾಮಾ

ಒಂದೇ ದಿನ ಮದುವೆಯಾದ ಕಿರುತೆರೆ ಕಲಾವಿದರು
ಕನ್ನಡ ಕಿರುತೆರೆಯ ಇಬ್ಬರು ಪ್ರತಿಭಾವಂತ ನಟರು ಒಂದೇ ದಿನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರಿಯಲ್ಲಿ ನಟ ಸೂರ್ಯ ಮತ್ತು ನಟ ತಾರಕ್ ಪೊನ್ನಪ್ಪ ಇಬ್ಬರು ಮದುವೆಯಾಗಿದ್ದಾರೆ. ರಾಧಿಕಾ ಎಂಬ ಹುಡುಗಿಯ ಜೊತೆಗೆ ನಟ ತಾರಕ್ ಪೊನ್ನಪ್ಪ ಮದುವೆ ನಡೆದಿದೆ. ಇನ್ನು ನಟ ಸೂರ್ಯ, ಶುಭಶ್ರೀ ಎನ್ನುವವರನ್ನು ವಿವಾಹವಾಗಿದೆ. ಸೂರ್ಯ ಮತ್ತು ಶುಭಶ್ರೀ ಮನೆ ಸಮೀಪದಲ್ಲಿಯೇ ಇದ್ದು, ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು.