ಮಗಳ ಮದುವೆ ಆಹ್ವಾನದ ಜೊತೆ ಮಾಹಿತಿ ನೀಡಿದ ಸುಂದರ್ ರಾಜ್ ದಂಪತಿ
Recommended Video

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮದುವೆ ಸಂಭ್ರಮ ಚಂದನವನದಲ್ಲಿ ಕಳೆಗಟ್ಟಿದೆ. ಚಿರು-ಮೇಘನಾ ಮದುವೆಯನ್ನ ಕನ್ನಡ ಸಿನಿಮಾರಂಗ ಸಂಭ್ರಮಿಸಲು ಸಾಕಷ್ಟು ಕಾರಣಗಳಿವೆ. ಇಬ್ಬರ ಕುಟುಂಬದವರು ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಸುಮರು ವರ್ಷಗಳ ನಂತರ ಸರ್ಜಾ ಕುಟುಂಬದಲ್ಲಿ ಇದೇ ಮೊದಲ ಶುಭ ಕಾರ್ಯ ನಡೆಯುತ್ತಿದೆ.
ಇನ್ನು ಮೇಘನಾ ರಾಜ್ ಫ್ಯಾಮಿಲಿ ವಿಚಾರವಾಗಿ ಮಾತನಾಡುವುದಾದರೆ ಸುಂದರ್ ರಾಜ್ ಮತ್ತು ಪ್ರಮೀಳ ಜೋಷಾಯಿ ಸಾಕಷ್ಟು ವರ್ಷಗಳಿಂದ ಸ್ಯಾಂಡಲ್ ವುಡ್ , ಟಾಲಿವುಡ್ ನ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಒಬ್ಬಳೆ ಮುದ್ದಿನ ಮಗಳಾದ ಮೇಘನಾ ರಾಜ್ ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿದ್ದು ಈಗ ಆ ಕನಸೆಲ್ಲವೂ ನನಸಾಗುವ ಸಮಯ ಬಂದಿದೆ. ಮೇಘನಾ-ಚಿರು ಮದುವೆಗೆ ಒಂದು ವಾರಗಳಷ್ಟೇ ಬಾಕಿ ಇದೆ. ಮದುವೆಗೆ ಮಾಧ್ಯಮದವರನ್ನ ಆಹ್ವಾನ ಮಾಡುವುದರ ಜೊತೆಯಲ್ಲಿ ಮಗಳ ಮದುವೆ ಹೇಗೆಲ್ಲಾ ನಡೆಯಲಿದೆ ಎಂದು ವಿವರ ನೀಡಿದ್ದಾರೆ. ಹಾಗಾದರೆ ಮೇಘನಾ ಮದುವೆ ಪ್ಲಾನ್ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

ಶುರುವಾಯ್ತು ಮೇಘನಾ ಮದುವೆ ಸಂಭ್ರಮ
ನಟಿ ಮೇಘನಾ ರಾಜ್ ಮದುವೆ ಸಂಭ್ರಮ ಶುರುವಾಗಿದೆ. ನಾಳೆಯಿಂದಲೇ ಮದುವೆಯ ಶಾಸ್ತ್ರಗಳು ಆರಂಭ ಆಗಲಿದ್ದು ಚಪ್ಪರ ಶಾಸ್ತ್ರದ ಮೂಲಕ ಮದುವೆಯ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ.

ಅರಿಶಿನ ಶಾಸ್ತ್ರ ಜೊತೆ ಬಳೆ ಶಾಸ್ತ್ರ
ಮೇಘನಾ ಹಾಗೂ ಚಿರು ಮದುವೆ ಸಾಂಪ್ರದಾಯಿಕವಾಗಿ ನಡೆಯಲಿದೆ. ಚಪ್ಪರ ಶಾಸ್ತ್ರದ ನಂತರ ಅರಿಶಿನ ಶಾಸ್ತ್ರ ಹಾಗೂ ಬಳೆ ಶಾಸ್ತ್ರವನ್ನ ಮಾಡಲಾಗುತ್ತೆ. ಈ ಎಲ್ಲಾ ಕಾರ್ಯಕ್ರಮಗಳು ಮೇಘನಾ ಮನೆಯಂಗಳದಲ್ಲಿ ನಡೆಯಲಿದೆ.

ರೋಮನ್ ಕ್ಯಾಥೋಲಿಕ್ ಸ್ಟೈಲ್ ನಲ್ಲಿ ಮದುವೆ
ಮೊದಲಿಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಂತೆ ಮೇಘನಾ-ಚಿರು ಮದುವೆ ನಡೆಯಲಿದೆ. ಬೆಂಗಳೂರಿನ ಸೆಂಟ್ ಆಂಟನಿ ಚರ್ಚ್ ನಲ್ಲಿ ಮದುವೆ ಆಗಲಿದೆ. ಪ್ರಮೀಳಾ ಜೋಷಾಯಿ ಕ್ರೈಸ್ತ ಧರ್ಮದವರು ಆದ್ದರಿಂದ ಹಿಂದೂ ಹಾಗೂ ಕ್ರೈಸ್ತ ಎರಡು ರೀತಿ ಮದುವೆ ಮಾಡಿಕೊಡಲಾಗುತ್ತಿದೆ.

ಕಲರ್ ಫುಲ್ ಆಗಿರಲಿದೆ ಸಂಗೀತ್ ಸಂಭ್ರಮ
ಚರ್ಚ್ ನಲ್ಲಿ ಮದುವೆ ಆದ ನಂತರ ಮೆಹಂದಿ ಹಾಗೂ ಸಂಗೀತ್ ಕಾರ್ಯಕ್ರಮಗಳನ್ನ ಮೇಘನಾ ಹಾಗೂ ಸ್ನೇಹಿತರು ಪ್ಲಾನ್ ಮಾಡಿದ್ದಾರೆ. ಸಂಗೀತ್ ಕಾರ್ಯಕ್ರಮದಲ್ಲಿ ಎಲ್ಲರ್ ಕಲರ್ ಫುಲ್ ಡ್ರಸ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು ರಾಜಸ್ಥಾನಿ ಸ್ಟೈಲ್ ನಲ್ಲಿರಲಿದೆಯಂತೆ.

ಮದುವೆ ಹಿಂದಿನ ದಿನ ವರಪೂಜೆ
ಇಷ್ಟೆಲ್ಲಾ ಕಾರ್ಯಕ್ರಮಗಳು ಆದ ನಂತರದ ದಿನದಲ್ಲಿ ಹಿಂದೂ ಸಂಪ್ರದಾಯದಂತೆ ವರಪೂಜೆ ನಡೆಯಲಿದೆ. ಮೇ 2 ರಂದು ಪ್ಯಾಲೆಸ್ ಗ್ರೌಂಡ್ ನಲ್ಲಿ ಮಹೂರ್ತ ನಡೆಯಲಿದೆ. ಮದುವೆ ಸಂಪ್ರದಾಯದಲ್ಲಿ ಸಾಕಷ್ಟು ಸ್ಟಾರ್ ಗಳು ಭಾಗಿ ಆಗಲಿದ್ದಾರೆ.


Click it and Unblock the Notifications











