twitter
    For Quick Alerts
    ALLOW NOTIFICATIONS  
    For Daily Alerts

    ಯಾವ ಯಾವ ದೇಶಗಳಲ್ಲಿ 'ಕೆ.ಜಿ.ಎಫ್' ವಿಜಯ ಪತಾಕೆ ಹಾರಿಸಿದೆ ಗೊತ್ತಾ.?

    |

    Recommended Video

    ಯಾವ ಯಾವ ದೇಶಗಳಲ್ಲಿ 'ಕೆ.ಜಿ.ಎಫ್' ವಿಜಯ ಪತಾಕೆ ಹಾರಿಸಿದೆ ಗೊತ್ತಾ.? | FILMIBEAT KANNADA

    ಕರ್ನಾಟಕದಲ್ಲೇ ಕನ್ನಡ ಚಿತ್ರಗಳನ್ನ ಕೇಳುವವರಿಲ್ಲ. ಎಂತೆಂಥ ಕನ್ನಡ ಸಿನಿಮಾಗಳೇ ಕೇವಲ ಎರಡ್ಮೂರು ವಾರಕ್ಕೆ ಎತ್ತಂಗಡಿ ಆಗಿರುವ ಉದಾಹರಣೆ ಇನ್ನೂ ನಮ್ಮ ಕಣ್ಣ ಮುಂದಿದೆ. ಅಂಥದ್ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ ಬರೀ ಕರ್ನಾಟಕದಲ್ಲಿ ಅಲ್ಲ.. ಕರುನಾಡಿನ ಗಡಿಯಾಚೆ, ಸಪ್ತ ಸಾಗರದಾಚೆಗೂ ಜೋರಾಗಿದೆ.

    ''ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ... ನಾನ್ ಬಂದ್ಮೇಲೆ ನಂದೇ ಹವಾ'' - ಇದು ಯಶ್ ಬಾಯಿಂದ ಬಂದಿರುವ ಡೈಲಾಗ್ ಮಾತ್ರ ಅಲ್ಲ. ವಾಸ್ತವ ಕೂಡ ಹೌದು.

    ಸ್ಯಾಂಡಲ್ ವುಡ್ ನ ಲೇಟೆಸ್ಟ್ ಬಾಕ್ಸ್ ಆಫೀಸ್ ಸುಲ್ತಾನ್ ಯಶ್ ವಿದೇಶಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪರಿಣಾಮ, 'ಕೆ.ಜಿ.ಎಫ್' ಚಿತ್ರ ಹಲವು ದೇಶಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.

    'ಕೆ.ಜಿ.ಎಫ್' ಚಿತ್ರ ಅಮೇರಿಕಾ, ಪಾಕಿಸ್ತಾನ, ದುಬೈ, ಆಸ್ಟ್ರೇಲಿಯಾ, ಲಂಡನ್ ನಲ್ಲಿ ಮಾತ್ರ ತೆರೆಕಂಡಿರಬಹುದು ಎಂದುಕೊಳ್ಳಬೇಡಿ. ನಿಮ್ಮ ಊಹೆಗೂ ಮೀರಿ ಹಲವು ದೇಶಗಳಲ್ಲಿ 'ಕೆ.ಜಿ.ಎಫ್' ಚಿತ್ರ ವಿಜಯ ಪತಾಕೆ ಹಾರಿಸಿದೆ. ಅದರ ಕಂಪ್ಲೀಟ್ ಲಿಸ್ಟ್ ನಾವು ಕೊಡ್ತೀವಿ, ನೋಡಿರಿ....

    'ಕೆ.ಜಿ.ಎಫ್' ಚಿತ್ರ ಎಲ್ಲೆಲ್ಲಿ ತೆರೆಕಂಡಿದೆ.?

    ''ಭಾರತ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹ್ರೇನ್, ಬೆಲ್ಜಿಯಂ, ಕೆನಡಾ, ಸಿಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ದುಬೈ, ಫಿಜಿ ಐಲ್ಯಾಂಡ್, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಹಾಂಗ್ ಕಾಂಗ್'' ಸೇರಿದಂತೆ ಹಲವು ದೇಶಗಳಲ್ಲಿ 'ಕೆ.ಜಿ.ಎಫ್' ಚಿತ್ರ ರಾರಾಜಿಸುತ್ತಿದೆ. ಅದಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಮಾಡಿರುವ ಈ ಟ್ವೀಟ್ ಸಾಕ್ಷಿ.

    'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

    ಇನ್ನೂ ದೊಡ್ಡ ಪಟ್ಟಿ ಇದೆ.!

    ''ಹಂಗೇರಿ, ಇಂಡೋನೇಷಿಯಾ, ಐರ್ ಲ್ಯಾಂಡ್, ಇಸ್ರೇಲ್, ಇಟಲಿ, ಜಪಾನ್, ಕುವೈತ್, ಲಟ್ವಿಯಾ, ಲಿಥುವೇನಿಯ, ಲಕ್ಸೆಂಬರ್ಗ್, ಮಲೇಶಿಯಾ, ಮಾಲ್ಟಾ, ನ್ಯೂ ಝೀಲ್ಯಾಂಡ್, ನೈಜೀರಿಯಾ, ನಾರ್ವೇ, ಓಮನ್, ಪಾಕಿಸ್ತಾನ, ಪೊಲ್ಯಾಂಡ್, ಕತಾರ್, ರಷ್ಯಾ, ಸೌದಿ ಅರೇಬಿಯಾ, ಸಿಂಗಾಪುರ, ಶ್ರೀಲಂಕಾ, ಸ್ವೀಡೆನ್, ಸ್ವಿಟ್ಜರ್ಲ್ಯಾಂಡ್, ಥೈಲ್ಯಾಂಡ್, ಯು.ಎ.ಇ, ಯುಕ್ರೇನ್, ಯು.ಕೆ, ಯು.ಎಸ್.ಎ'' ಸೇರಿದಂತೆ ಪೂರ್ವದಿಂದ ಪಶ್ಚಿಮದವರೆಗೂ 'ಕೆ.ಜಿ.ಎಫ್' ಹವಾ ಬೊಂಬಾಟ್ ಆಗಿದೆ.

    31 ದಿನದಲ್ಲಿ 'ಕೆಜಿಎಫ್' ಹಿಂದಿ ಗಳಿಸಿದ್ದೆಷ್ಟು?31 ದಿನದಲ್ಲಿ 'ಕೆಜಿಎಫ್' ಹಿಂದಿ ಗಳಿಸಿದ್ದೆಷ್ಟು?

    ಯು.ಎಸ್.ಎ ನಲ್ಲಿ ದಾಖಲೆ ಕಲೆಕ್ಷನ್

    ಯು.ಎಸ್.ಎ ನಲ್ಲಿ ದಾಖಲೆ ಕಲೆಕ್ಷನ್

    ಯು.ಎಸ್.ಎ ನಲ್ಲಂತೂ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಚಿತ್ರ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ. ಯು.ಎಸ್.ಎ ಬಾಕ್ಸ್ ಆಫೀಸ್ ನಲ್ಲಿ ಡಾಲರ್ 800K ಗಳಿಸುವ ಮೂಲಕ ಕನ್ನಡದ 'ಕೆ.ಜಿ.ಎಫ್' ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ.

    10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ'10 ವರ್ಷದ ಬಾಲಿವುಡ್ ನಲ್ಲಿ ವಿಶೇಷ ಸ್ಥಾನ ಪಡೆದ 'ಕೆಜಿಎಫ್' ಮತ್ತು 'ಬಾಹುಬಲಿ'

    ಪಾಕಿಸ್ತಾನದಲ್ಲೂ 'ಕೆ.ಜಿ.ಎಫ್' ದರ್ಬಾರ್

    ಪಾಕಿಸ್ತಾನದಲ್ಲೂ 'ಕೆ.ಜಿ.ಎಫ್' ದರ್ಬಾರ್

    ಪಾಕಿಸ್ತಾನದಲ್ಲಿ ಬಾಲಿವುಡ್ ಚಿತ್ರಗಳಿಗಿಂತ 'ಕೆ.ಜಿ.ಎಫ್'ಗೆ ಬೇಡಿಕೆ ಹೆಚ್ಚಿದೆ. ಪಾಕಿಸ್ತಾನದಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಒಟ್ನಲ್ಲಿ, ಎಲ್ಲೆಡೆ 'ಕೆ.ಜಿ.ಎಫ್' ಕಮಾಲ್ ಮಾಡ್ತಿರೋದಂತೂ ಸುಳ್ಳಲ್ಲ.

    English summary
    Here is the list of countries where Rocking Star Yash starrer KGF is screened. Have a look.
    Wednesday, January 23, 2019, 15:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X