ನವೆಂಬರ್ ತಿಂಗಳು ಬಿಡುಗಡೆಗೊಳ್ಳುವ ಕನ್ನಡ ಚಿತ್ರಗಳ ಪಟ್ಟಿ; ಎರಡು ಚಿತ್ರ ಬಿಟ್ರೆ ಇನ್ಯಾವುದೂ ಗೊತ್ತೇ ಇಲ್ಲ!

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳು ಬಿಡುಗಡೆಗೊಂಡ ಚಿತ್ರಗಳ ಪೈಕಿ ಹಲವು ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುವಲ್ಲಿ ಹಾಗೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು. ಅದರಲ್ಲಿಯೂ ಕನ್ನಡ ಚಲನಚಿತ್ರರಂಗದ ಕಾಂತಾರ ಸಿನಿಮಾ ಯಾರೂ ಊಹಿಸಿರದ ರೀತಿ ಭರ್ಜರಿ ಹಿಟ್ ಆಗಿದೆ. ಈಗಾಗಾಲೇ ಮುನ್ನೂರು ಕೋಟಿ ಕ್ಲಬ್ ಸೇರಿರುವ ಕಾಂತಾರ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಬಾಕ್ಸ್ ಆಫೀಸ್‌ನಲ್ಲೂ ಸಹ ಅಬ್ಬರಿಸುತ್ತಿದೆ.
ಕಾಂತಾರ ಜತೆ ತೆರೆ ಕಂಡ ತಮಿಳಿನ ಪೊನ್ನಿಯಿನ್ ಸೆಲ್ವನ್ ಸಹ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಮಳೆ ಸುರಿಸಿದೆ. ಅಷ್ಟೇ ಅಲ್ಲದೇ ಪೊನ್ನಿಯಿನ್ ಸೆಲ್ವನ್ ಐನೂರು ಕೋಟಿ ಕ್ಲಬ್ ಸೇರುವ ಸನಿಹದಲ್ಲಿದ್ದು ಒಟ್ಟಿನಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ತೆರೆಕಂಡ ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆ ಲೂಟಿ ಮಾಡಿವೆ. ಇನ್ನು ಈ ಚಿತ್ರಗಳ ಜತೆಗೆ ಅಕ್ಟೋಬರ್ ತಿಂಗಳಿನಲ್ಲಿ ತೆರೆಕಂಡ ಕೆಲವೊಂದಿಷ್ಟು ಚಿತ್ರಗಳು ಸಹ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿವೆ.
ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ ತಿಂಗಳ ಅಂತ್ಯದಲ್ಲಿ ಬಿಡುಗಡೆಗೊಂಡು ಗೆದ್ದಿದೆ. ಅತ್ತ ದೀಪಾವಳಿ ಪ್ರಯುಕ್ತ ಬಿಡುಗಡೆಗೊಂಡ ಚಿತ್ರಗಳ ಪೈಕಿ ಬಿಡುಗಡೆಗೊಂಡ ಕಾರ್ತಿ ಅಭಿನಯದ ತಮಿಳು ಚಿತ್ರ ಸರ್ದಾರ್ ಸಹ ಬಾಕ್ಸ್ ಆಫೀಸ್ ಮಾತ್ರವಲ್ಲದೇ ಜನರ ಮನಸ್ಸು ಗೆಲ್ಲುವಲ್ಲಿಯೂ ಸಹ ಯಶಸ್ವಿಯಾಗಿದೆ. ಹೀಗೆ ಅಕ್ಟೋಬರ್ ತಿಂಗಳಿನಲ್ಲೂ ಸಹ ವಿವಿಧ ಚಿತ್ರರಂಗಗಳಲ್ಲಿ ಕೆಲವು ಉತ್ತಮ ಚಿತ್ರಗಳು ಬಿಡುಗಡೆಗೊಂಡಿದ್ದರೆ ಇನ್ನೂ ಕೆಲ ಚಿತ್ರಗಳು ಮಕಾಡೆ ಮಲಗಿವೆ. ಸದ್ಯ ನವೆಂಬರ್ ತಿಂಗಳು ಆರಂಭವಾಗಿದ್ದು ಈ ತಿಂಗಳಂದು ಯಾವ ಚಿತ್ರರಂಗದ ಯಾವ ಚಿತ್ರಗಳು ಬಿಡುಗಡೆಗೊಳ್ಳಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಕನ್ನಡ ಚಿತ್ರಗಳ ಪಟ್ಟಿ
ನವೆಂಬರ್ ತಿಂಗಳು ಬಿಡುಗಡೆಗೊಳ್ಳಲಿರುವ ಕನ್ನಡ ಚಿತ್ರಗಳು ಹಾಗೂ ದಿನಾಂಕದ ಪಟ್ಟಿ
ಬನಾರಸ್: ನವೆಂಬರ್ 4
ಕಂಬ್ಳಿಹುಳ - ನವೆಂಬರ್ 4
ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ - ನವೆಂಬರ್ 11
ದಿಲ್ ಪಸಂದ್ - ನವೆಂಬರ್ 11
ರಾಣಾ - ನವೆಂಬರ್ 11
ಎಲ್ಲೋ ಗ್ಯಾಂಗ್ - ನವೆಂಬರ್ 11
ಓ - ನವೆಂಬರ್ 11
ಖಾಸಗಿ ಪುಟಗಳು - ನವೆಂಬರ್ 18
ಸದ್ದು ವಿಚಾರಣೆ ನಡೆಯುತ್ತಿದೆ - ನವೆಂಬರ್ 25
ರೇಮೋ - ನವೆಂಬರ್ 25

ಎರಡು ಚಿತ್ರ ಬಿಟ್ರೆ ಇನ್ಯಾವುದೂ ಗೊತ್ತಿಲ್ಲ
ಇನ್ನು ನವೆಂಬರ್ ತಿಂಗಳಿನಲ್ಲಿ ಈ ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಕನ್ನಡ ಸಿನಿ ಪ್ರೇಮಿಯೊಬ್ಬರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ಗೆ ಮತ್ತೋರ್ವ ನೆಟ್ಟಿಗ ಪ್ರತಿಕ್ರಿಯಿಸಿದ್ದು ಈ ಚಿತ್ರಗಳ ಪೈಕಿ ಬನಾರಸ್ ಹಾಗೂ ದಿಲ್ ಪಸಂದ್ ಹೊರತುಪಡಿಸಿ ಉಳಿದ ಯಾವುದೇ ಚಿತ್ರಗಳ ಬಗ್ಗೆಯೂ ಸಿನಿ ಪ್ರೇಕ್ಷಕರಿಗೆ ಮಾಹಿತಿ ಇಲ್ಲ, ಸರಿಯಾದ ರೀತಿ ಪ್ರಚಾರ ಮಾಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟಾಲಿವುಡ್ ಹಾಗೂ ಕಾಲಿವುಡ್
ಊರ್ವಶಿವೋ ರಾಕ್ಷಸಿವೋ - ನವೆಂಬರ್ 4
ಲೈಕ್ ಶೇರ್ ಸಬ್ಸ್ಕ್ರೈಬ್ - ನವೆಂಬರ್ 4
ಮಿಸ್ಟರ್ ತಾರಕ್ - ನವೆಂಬರ್ 4
ಬೊಮ್ಮ ಬ್ಲಾಕ್‌ಬಸ್ಟರ್ - ನವೆಂಬರ್ 11
ಆಕಾಸಂ - ನವೆಂಬರ್ 11
ಯಶೋಧ - ನವೆಂಬರ್ 11
ಇಟ್ಲು ಮಾರೇದುಮಿಲಿ ಪ್ರಜಾನಿಕಂ - ನವೆಂಬರ್ 11
ತಮಿಳು: ಲವ್ ಟುಡೇ - ನವೆಂಬರ್ 4, ಕಾಫಿ ವಿಥ್ ಕಾದಲ್ - ನವೆಂಬರ್ 4, ನಿದಮ್ ಒರು ವಾನಮ್ - ನವೆಂಬರ್ 4, ಯಶೋಧಾ - ನವೆಂಬರ್ 11, ಅಗಿಲನ್ - ನವೆಂಬರ್ 11, ಪೆರೋಲ್ - ನವೆಂಬರ್ 11, ಏಜೆಂಟ್ ಕಣ್ಣಾಯಿರಾಮ್ - ನವೆಂಬರ್ 25.


Click it and Unblock the Notifications











