ನಟ ದರ್ಶನ್ ಪ್ರಚಾರ ಮಾಡಿದ ಅಭ್ಯರ್ಥಿಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
ಸ್ಟಾರ್ ನಟರು ಪ್ರಚಾರ ಮಾಡಿದ ಮಾತ್ರಕ್ಕೆ ಚುನಾವಣಿಗೆ ನಿಂತ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಸದ್ಯ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸುವುದು ನಿಶ್ಚಿತವಾಗಿದೆ. ಕೆಲವೆಡೆ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ದರ್ಶನ್ ಒಂದು ಪಕ್ಷಕ್ಕೆ ಸೀಮಿತವಾಗಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದರು.
ಸ್ಯಾಂಡಲ್‌ವುಡ್ ತಾರೆಯರ ಆಗಮನದಿಂದಿ ಈ ಬಾರಿಯ ಚುನಾವಣೆ ಪ್ರಚಾರ ಕಣ ರಂಗೇರಿತ್ತು. ದರ್ಶನ್, ಸುದೀಪ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ, ರಮ್ಯಾ ಸೇರಿದಂತೆ ಹಲವರು ಮತದಾರನನ್ನು ಸೆಳೆಯುವ ಪ್ರಯತ್ನ ಮಾಡಿದರು. ದರ್ಶನ್- ಸುದೀಪ್ ಇಬ್ಬರು ಕೂಡ ಕೆಲವರು ಪರ ಪ್ರಚಾರ ನಡೆಸಿದರು. ಚಾಲೆಂಜಿಂಗ್ ಸ್ಟಾರ್ ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸೇರುತ್ತಿದ್ದರು. ಬೊಮ್ಮನಹಳ್ಳಿ ಕ್ಷೇತ್ರದ ಪ್ರಚಾರದ ವೇಳೆ ಎದುರಾಳಿ ಪಕ್ಷದ ಉಮಾಪತಿ ಶ್ರೀನಿವಾಸ್ ವಿರುದ್ಧ ದರ್ಶನ್ ವಾಗ್ದಾಳಿ ನಡೆಸಿದ್ದರು.

ನಟ ದರ್ಶನ್ ಬಿಜೆಪಿ, ಕಾಂಗ್ರೆಸ್, ಸ್ವತಂತ್ರ ಅಭ್ಯರ್ಥಿ, ಜೆಡಿಎಸ್ ಅಭ್ಯರ್ಥಿಗಳ ಪರ ಕೂಡ ಪ್ರಚಾರ ಮಾಡಿದ್ದು ವಿಶೇಷ. ಈ ಬಾರಿ ಕೆಲವು ಕಡೆಗಳಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಹಾಲಿ ಸಚಿವರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇನ್ನು ದರ್ಶನ್ ಪ್ರಚಾರ ನಡೆಸಿದ ಅಭ್ಯರ್ಥಿಗಳಲ್ಲಿ ಗೆದ್ದವರು, ಸೋತವರು ಯಾರ್ಯಾರು ಎನ್ನುವ ಲಿಸ್ಟ್ ಇಲ್ಲಿದೆ ನೋಡಿ.
ಗೆದ್ದವರು
ಸತೀಶ್ ರೆಡ್ಡಿ(ಬೊಮ್ಮನಹಳ್ಳಿ) - ಬಿಜೆಪಿ
ದರ್ಶನ್ ಪುಟ್ಟಣ್ಣಯ್ಯ(ಮೇಲುಕೋಟೆ)- ರೈತಸಂಘ
ಚೆಲುವರಾಯ ಸ್ವಾಮಿ(ನಾಗಮಂಗಲ)- ಕಾಂಗ್ರೆಸ್
ಉದಯ್ (ಮದ್ದೂರು)- ಕಾಂಗ್ರೆಸ್
ಮುನಿರತ್ನ(ಆರ್ ಆರ್ ನಗರ)- ಬಿಜೆಪಿ
ಎಸ್. ಟಿ ಸೋಮಶೇಖರ್(ಯಶವಂತಪುರ)- ಬಿಜೆಪಿ

ಸೋತವರು
ಸಚ್ಚಿದಾನಂದ(ಶ್ರೀರಂಗಪಟ್ಟಣ)- ಬಿಜೆಪಿ
ಬಿ. ಸಿ ಪಾಟೀಲ್(ಹಿರೇಕೆರೂರ್)- ಬಿಜೆಪಿ
ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ)- ಬಿಜೆಪಿ
ಕೆ. ಎಸ್. ಮಂಜುನಾಥ ಗೌಡ (ಮಾಲೂರು)- ಬಿಜೆಪಿ
ಕೇಶವ ರಾಜಣ್ಣ(ಯಲಹಂಕ)- ಕಾಂಗ್ರೆಸ್
ರೇಣುಕಾ ಚಾರ್ಯ(ಹೊನ್ನಾಳಿ)- ಬಿಜೆಪಿ


Click it and Unblock the Notifications











