ಸುನಿಯ 'ಅಪರೇಷನ್ ಅಲಮೇಲಮ್ಮ'ನ ಬಗ್ಗೆ ಸೆಲೆಬ್ರಿಟಿಗಳು ಉಘೇ ಉಘೇ
ಸಿಂಪಲ್ ಸುನಿಯ ಅಪರೇಷನ್ ಅಲಮೇಲಮ್ಮ ನ ಬಗ್ಗೆ ಸೆಲೆಬ್ರಿಟಿಗಳು ಏನೆಲ್ಲಾ ಹೇಳಿದ್ದಾರೆ ಇಲ್ಲೊಮ್ಮೆ ಓದಿ.
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಹುಟ್ಟುಸಿದ ಸುನಿ, ಯಾಕೋ ತಮ್ಮ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಮತ್ತು 'ಬಹುಪರಾಕ್' ಚಿತ್ರಗಳಲ್ಲಿ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಆದರೆ ಆ ಯಶಸ್ಸನ್ನು ಪಕ್ಕಕ್ಕಿಟ್ಟ ಸುನಿ ಈಗ ತಮ್ಮ ಹೊಸ 'ಆಪರೇಷನ್'ನ ಯೂಟ್ಯೂಬ್ ನಲ್ಲಿ ಹರಿಯಬಿಟ್ಟಿದ್ದು, ಎಲ್ಲಾ ಸಾಮಾಜಿಕ ತಾಣಗಳಲ್ಲಿಯೂ ಅದರದ್ದೇ ಸದ್ದು ಕೇಳುತ್ತಿದೆ. ಅಂದಹಾಗೆ ಈ ಆಪರೇಷನ್ ಹೆಸರೇ 'ಆಪರೇಷನ್ ಅಲಮೇಲಮ್ಮ".
'ಅಪರೇಷನ್ ಅಲಮೇಲಮ್ಮ' ಸುನಿ ರವರ ಟ್ರೇಡ್ ಮಾರ್ಕ್ ಸ್ಟೈಲ್ ನಲ್ಲೇ ಮೂಡಿ ಬರುತ್ತಿರುವ ಥ್ರಿಲ್ಲರ್ ಕಾಮಿಡಿ ಸಿನಿಮಾ ಆಗಿದ್ದು, ರಿಷಿ ಮತ್ತು ಶ್ರದ್ಧಾ ಶ್ರೀನಾಥ್ ರವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
'ಆಪರೇಷನ್ ಅಲಮೇಲಮ್ಮ' ಸಿನಿಮಾ ಬಿಡುಗಡೆಗೂ ಮೊದಲೇ ಟೈಟಲ್, ಟೀಸರ್, ಟ್ರೈಲರ್ ಮೂಲಕ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವ ಸುನಿ, ತಮ್ಮ 'ಆಪರೇಷನ್ ಅಲಮೇಲಮ್ಮ' ಸಿನಿಮಾ ವಿಷಯದಲ್ಲಿಯೂ ಅದೇ ಟ್ರೇಡ್ ಮಾರ್ಕ್ ಮುಂದುವರೆಸಿ, ಡಿಫರೆಂಟ್ ಡೈಲಾಗ್ ಗಳಿಂದ ಟೀಸರ್ ಮೂಲಕ ಹವಾ ಕ್ರಿಯೇಟ್ ಮಾಡಿದ್ದಾರೆ.

ಯೂಟ್ಯೂಬ್ ನಲ್ಲಿ 'ಆಪರೇಷನ್ ಅಲಮೇಲಮ್ಮ' ಹಿಟ್
'ಆಪರೇಷನ್ ಅಲಮೇಲಮ್ಮ' ಸಿನಿಮಾ ಟೀಸರ್ ಯೂಟ್ಯೂಬ್ ನಲ್ಲಿ ಈಗಾಗಲೇ 120,500 ಕ್ಕಿಂತ ಹೆಚ್ಚು ಮಂದಿ ವೀಕ್ಷಣೆ ಪಡೆದಿದ್ದು, ಹಲವು ಸೆಲೆಬ್ರಿಟಿಗಳು ತಮ್ಮದೇ ಆದ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವ್ಯಾವ ಸೆಲೆಬ್ರಿಟಿಗಳು ಏನೇನ್ ಹೇಳಿದ್ರು ಅಂತ ನೀವೇ ನೋಡಿ...

ಗೋಲ್ಡನ್ ಸ್ಟಾರ್ ಗಣೇಶ್ ಏನ್ ಹೇಳಿದ್ರು ಗೊತ್ತೇ?
"ಸೃಜನಾತ್ಮಕ ನಿರ್ದೇಶಕ ಸುನಿ ಯ ಒಂದು ಮನರಂಜನೆಯ ಸಾಹಸ, ನೀವು ನೋಡಿ, ಆಲ್ ದಿ ಬೆಸ್ಟ್ @ಸಿಂಪಲ್‌ಸುನಿ" ಎಂದು ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.

ಪರ್ಮಿ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದಾರಂತೆ..!
"ಸುನಿ ಯ ಆಪರೇಷನ್ ಅಲಮೇಲಮ್ಮ ಟೀಷರ್... ಪರ್ಮಿ ತುಂಬಾ ಇಂಟ್ರೆಸ್ಟಿಂಗ್ ಆಗಿ ಕಾಣುತ್ತಿದ್ದು, ಪ್ರಮೋಟ್ ಮಾಡುತ್ತಿದ್ದೇನೆ. ಕುತೂಹಲದಿಂದ ಕಾಯುತ್ತಿರುವೆ..." ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಹರಿಪ್ರಿಯ ಏನಂತಾರೆ ಗೊತ್ತಾ?
"ತುಂಬಾ ಅದ್ಭುತವಾಗಿ ಮೂಡಿಬಂದಿದೆ @ಸಿಂಪಲ್ ಸುನಿ. ರಿಷಿ ಯ ಉಚ್ಚಾರಣೆ ಚೆನ್ನಾಗಿದೆ. ಬಿಗ್ ಸ್ಕ್ರೀನ್ ನಲ್ಲಿ ರಾಕ್ ಮಾಡೋದ್ರಲ್ಲಿ ಡೌಟೇ ಬೇಡಾ", ಎಂದು ಹೇಳಿದ್ದು, 'ಆಪರೇಷನ್ ಅಲಮೇಲಮ್ಮ' ಟೀಸರ್ ವೀಡಿಯೊ ಲಿಂಕ್ ಶೇರ್ ಮಾಡಿದ್ದಾರೆ.

ಆಲ್ ದಿ ಬೆಸ್ಟ್ ಹೇಳಿದ ಅಜನೀಶ್ ಲೋಕನಾಥ್
"ಟ್ರೇಲರ್ ನಲ್ಲಿ ಎಲ್ಲವೂ ನನಗೆ ಇಷ್ಟವಾಯಿತು, ಆಲ್ ದಿ ಬೆಸ್ಟ್ @ ಸಿಂಪಲ್ ಸುನಿ" ಎಂದು 'ಉಳಿದವರು ಕಂಡಂತೆ' ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ವೀಟ್ ಮಾಡಿದ್ದಾರೆ.

ಗೋಧಿ ಬಣ್ಣ ಹೇಮಂತ್ ರಾವ್
"@ಸಿಂಪಲ್ ಸುನಿ ಸೂಪರ್ ಮಜಾ ಇದೆ. ಪರ್ಮಿ ತುಂಬಾ ಕಾಮಿಡಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗಾಗಿ ಕಾಯುತ್ತಿರುವೆ, : ನೋಡಿ, ಶೇರ್ ಮಾಡಿ." ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











