twitter
    For Quick Alerts
    ALLOW NOTIFICATIONS  
    For Daily Alerts

    ವಿಶೇಷತೆಗಳಿಂದ ಬೆರಗಾಗಿಸುವ 'ನಾಗರಹಾವು' ಬಗ್ಗೆ ಗೊತ್ತಿಲ್ಲದ ಸಂಗತಿಗಳು!

    By Pavithra
    |

    Recommended Video

    Nagarahaavu 2018 : ನಾಗರಹಾವು ಸಿನಿಮಾದ ವಿಶೇಷತೆಗಳು ಇವು..!! | Filmibeat Kannada

    'ನಾಗರಹಾವು' ಕೇವಲ ಸಿನಿಮಾವಾಗಿರದೇ ಸಾಕಷ್ಟು ವಿಚಾರವಾಗಿ ಹಾಗೂ ಸಾಕಷ್ಟು ಕ್ಷೇತ್ರದಲ್ಲಿ ಇತಿಹಾಸ ಬರೆದ ಚಿತ್ರ. ಅಂದಿಗೂ ಇಂದಿಗೂ ಎವರ್ ಗ್ರೀನ್ ಎನ್ನಿಸುವ ಸಾಲಿನಲ್ಲಿರುವ ಕನ್ನಡ ಸಿನಿಮಾ 'ನಾಗರಹಾವು'.

    ಉತ್ತಮ ಸಂದೇಶ, ನೋಡಲು ಮನೋರಂಜನೆ ಅದ್ಬುತ ಕಲಾವಿದರು ಇಷ್ಟು ಮಾತ್ರಕ್ಕೆ 'ನಾಗರಹಾವು' ಚಿತ್ರ ಸ್ಪೆಷಲ್ ಎನ್ನಿಸಿರಲಿಲ್ಲ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 'ನಾಗರಹಾವು' ಸಿನಿಮಾ ಹೆಸರು ಸೇರಿಕೊಂಡಿದೆ.

    ಇದೇ ವಾರ ಅಂದರೆ ಜುಲೈ 20 ರಂದು ಹೊಸ ತಂತ್ರಜ್ಙಾನದ ಮೂಲಕ ಬಿಡುಗಡೆ ಆಗುತ್ತಿರುವ ನಾಗರಹಾವು ಸಿನಿಮಾ ನೋಡುವ ಮುನ್ನ ಚಿತ್ರ ಬರೆದ ಇತಿಹಾಸದ ಬಗ್ಗೆಯೂ ಒಳ್ಳೆ ತಿಳಿದುಕೊಳ್ಳೋಣ. ಯಾವೆಲ್ಲ ವಿಚಾರವಾಗಿ ನಾಗರಹಾವು ಸಿನಿಮಾ ಪ್ರಖ್ಯಾತಿ ಗಳಿಸಿತ್ತು, ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

    ಪುಟ್ಟಣ್ಣ ಕಣಗಾಲ್ ಸೃಷ್ಟಿಸಿದ ಅದ್ಬುತ ಚಿತ್ರ

    ಪುಟ್ಟಣ್ಣ ಕಣಗಾಲ್ ಸೃಷ್ಟಿಸಿದ ಅದ್ಬುತ ಚಿತ್ರ

    ಕೇವಲ ಕನ್ನಡಕ್ಕೆ ಮಾತ್ರವಲ್ಲದೇ ಹಿಂದಿ ಚಿತ್ರಗಳಿಗೂ ಸ್ಫೂರ್ತಿಯಾಗುವಂತ ನಾನಾ ಸಂಗತಿಗಳ ಮೂಲಕ ಪುಟ್ಟಣ್ಣ ಕಣಗಾಲ್ 'ನಾಗರಹಾವು' ಚಿತ್ರವನ್ನು ರೂಪಿಸಿದ್ದರು.

    ಮೂರು ಕಾದಂಬರಿ ಒಟ್ಟಾಗಿಸಿದ ಚಿತ್ರ

    ಮೂರು ಕಾದಂಬರಿ ಒಟ್ಟಾಗಿಸಿದ ಚಿತ್ರ

    ಬಾಲಿವುಡ್ ನಲ್ಲಿ ಆ ಹೊತ್ತಿಗೆಲ್ಲಾ 'ಮೇರಾ ನಾಮ್ ಜೋಕರ್' ಚಿತ್ರವನ್ನು ಮೂರು ಭಾಗ ಮಾಡುವಂತಹ ತಂತ್ರಗಾರಿಕೆಯ ಪ್ರಯೋಗವಾಗಿತ್ತು. ಆದರೆ 'ನಾಗರಹಾವು' ಚಿತ್ರದಲ್ಲಿ ತಾರಾಸು ಅವರ 'ನಾಗರಹಾವು', 'ಒಂದು ಗಂಡು ಎರಡು ಹೆಣ್ಣು' ಮತ್ತು 'ಸರ್ಪ ಮತ್ಸರ' ಎಂಬ ಮೂರು ಕಾದಂಬರಿಗಳನ್ನು ಒಟ್ಟಾಗಿಸಿ ಕಥೆ ರೂಪಿಸಿದ್ದರು.

    ಕಲಾವಿದರ ದಿಕ್ಕೇ ಬದಲಾಯಿತು

    ಕಲಾವಿದರ ದಿಕ್ಕೇ ಬದಲಾಯಿತು

    'ನಾಗರಹಾವು' ಚಿತ್ರಗಳಲ್ಲಿ ಎಲ್ಲಾ ಪಾತ್ರಗಳು ಎಂದಿಗೂ ಪ್ರಸ್ತುತವಾಗಿರುವಂತೆ ಅದನ್ನು ನಿರ್ವಹಿಸಿದ ಕಲಾವಿದರ ಬದುಕಿನ ದಿಕ್ಕು ಈ ಚಿತ್ರದ ಮೂಲಕ ಬದಲಾಗಿತ್ತು. ಪುಟ್ಟ ಪಾತ್ರವಾದ ಜಲೀಲನಾಗಿ ಕಾಣಿಸಿಕೊಂಡಿದ್ದ ಅಂಬರೀಶ್ ಇಂದಿಗೂ ಜಲೀಲನಾಗಿ ಅದೆಷ್ಟೋ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ.

    ಜನಪ್ರಿಯರಾದ ಕಲಾವಿದರು

    ಜನಪ್ರಿಯರಾದ ಕಲಾವಿದರು

    ನಾಯಕ, ನಾಯಕಿಯರನ್ನೇ ಮೀರಿಸುವಂತೆ ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕ ಅಶ್ವತ್ಥ್ ಅವರು ಮಿಂಚಿದ್ದರು. ನಂತರ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಪ್ರಖ್ಯಾತರಾದರು. ರೋಷಾವೇಶವನ್ನೇ ಆಹ್ವಾನಿಸಿಕೊಂಡಂತೆ ನಟಿಸಿದ್ದ ವಿಷ್ಣುವರ್ಧನ್ ಅವರು ನಾಯಕ ನಟನಾಗಿ ಹೊರ ಹೊಮ್ಮಿದ್ದೇ ಈ ಚಿತ್ರದಿಂದ.

    'ನಾಗರಹಾವು' ಚಿತ್ರದಲ್ಲಿ ಚಿತ್ರದುರ್ಗದ ಅನಾವರಣ

    'ನಾಗರಹಾವು' ಚಿತ್ರದಲ್ಲಿ ಚಿತ್ರದುರ್ಗದ ಅನಾವರಣ

    'ನಾಗರಹಾವು' ಚಿತ್ರ ಬಿಡುಗಡೆಗೂ ಮುನ್ನ ಸಾಮಾನ್ಯ ಬೆಟ್ಟ ಪ್ರದೇಶದಂತಿದ್ದ ಚಿತ್ರದುರ್ಗವನ್ನು ಇಂಚಿಂಚಾಗಿ ಅನಾವರಣಗೊಳಿಸಿದ ಹೆಗ್ಗಳಿಕೆಯೂ 'ನಾಗರಹಾವು' ಚಿತ್ರಕ್ಕೇ ಸಲ್ಲಬೇಕು.

    ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಹಾಡು

    ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಲ್ಲಿ ಹಾಡು

    ಒಂದು ಪೀಳಿಗೆಯ ಯೌವನದ ರೋಷಕ್ಕೆ ಕಿಚ್ಚುಹಚ್ಚುವಂತೆ ಮೂಡಿ ಬಂದಿದ್ದ ಚಿತ್ರದ ಹಾಡುಗಳಿಗೆ ಇಂದಿಗೂ ಪ್ರಾಮುಖ್ಯತೆ ಇದೆ. ಅಂತಹ ಆವೇಷದ ಹಾಡುಗಳಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಾದರೆ, ಮಾಧುರ್ಯದ ಹಾಡುಗಳು ಪಿ ಬಿ ಶ್ರೀನಿವಾಸ್ ಕಂಠದಿಂದ ಮೂಡಿ ಬಂದಿದ್ದವು.

    ಸ್ಲೋ ಮೋಷನ್ ತೋರಿಸಿದ ಮೊದಲ ಚಿತ್ರ

    ಸ್ಲೋ ಮೋಷನ್ ತೋರಿಸಿದ ಮೊದಲ ಚಿತ್ರ

    ನಾಯಕನ ಸಾಮಾನ್ಯ ನಡಿಗೆ ಮತ್ತು ನಾಯಕಿಯ ಸ್ಲೋ ಮೋಷನ್ ಓಟವನ್ನು ಒಂದೇ ಫ್ರೇಮಿನಲ್ಲಿ ತೋರಿಸಿದ ಮೊದಲ ಚಿತ್ರ 'ನಾಗರಹಾವು'. ಚಿತ್ರದ ನಾಯಕಿಯರಾದ ಆರತಿ ಮತ್ತು ಶುಭಾ ಅವರಂತೆಯೇ ಓಬವ್ವನಾಗಿ ನಟಿಸಿದ್ದ ಜಯಂತಿ ಕೂಡಾ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದರು.

    ತಬಲಾ ಮೂಲಕ ಹಿನ್ನೆಲೆ ಸಂಗೀತ

    ತಬಲಾ ಮೂಲಕ ಹಿನ್ನೆಲೆ ಸಂಗೀತ

    ಬೆಟ್ಟದ ಮೇಲೆ ನಡೆಯೋ ದೃಶ್ಯಗಳಿಗೆ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ತಬಲಾ ಮೂಲಕ ಹಿನ್ನೆಲೆ ಸಂಗೀತ ನೀಡಿದ್ದರು. ಅದೆಷ್ಟು ಸಂಚಲನ ಸೃಷ್ಟಿಸಿತ್ತೆಂದರೆ, ಮುಂದೆ ಬಾಲಿವುಡ್‍ ನ ಖ್ಯಾತ ನಿರ್ದೇಶಕ ಆರ್.ಡಿ. ಬರ್ಮನ್, 'ಶೋಲೆ' ಚಿತ್ರದಲ್ಲಿಯೂ ಇದೇ ತಂತ್ರ ಅನುಸರಿಸಿದ್ದು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಹೆಮ್ಮೆ.

    ಮಿಸ್ ಮಾಡಿಕೊಳ್ಳಬೇಡಿ

    ಮಿಸ್ ಮಾಡಿಕೊಳ್ಳಬೇಡಿ

    ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ 'ನಾಗರಹಾವು'. ಈಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎನ್ ವೀರಸ್ವಾಮಿ ಅವರು ನಿರ್ಮಿಸಿದ್ದ ಚಿತ್ರವನ್ನು ವೀರಸ್ವಾಮಿಯವರ ಪುತ್ರ ಬಾಲಾಜಿ ನವೀನ ತಂತ್ರಜ್ಞಾನದೊಂದಿಗೆ ಜುಲೈ 20 ರಂದು ಬಿಡುಗಡೆ ಮಾಡುತ್ತಿದ್ದಾರೆ.

    'ನಾಗರಹಾವು' ಚಿತ್ರಕ್ಕಾಗಿ ವಿಷ್ಣು ಅಭಿಮಾನಿಗಳು ಮಾಡ್ತಿರೋ ಒಳ್ಳೆ ಕೆಲಸ'ನಾಗರಹಾವು' ಚಿತ್ರಕ್ಕಾಗಿ ವಿಷ್ಣು ಅಭಿಮಾನಿಗಳು ಮಾಡ್ತಿರೋ ಒಳ್ಳೆ ಕೆಲಸ

    English summary
    Kannada Nagarahaavu cinema is re releasing on July 20th. The Nagarahaavu cinema has a lot of specialties here the list of specialties
    Tuesday, July 17, 2018, 16:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X