For Quick Alerts
  ALLOW NOTIFICATIONS  
  For Daily Alerts

  ಕಣ್ಣೀರು ಹಾಕುತ್ತಿದೆ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಜೀವ

  By Pavithra
  |
  ಕನ್ನಡ ಪ್ರೇಮಿ ಶನಿ ಮಹದೇವಪ್ಪ ಈಗ ಎಂಥಾ ಸ್ಥಿತಿಯಲ್ಲಿದ್ದಾರೆ ನೋಡಿ | Filmibeat Kannada

  ಮುಖದ ಮೇಲಿನ ಬಣ್ಣ ಚೆನ್ನಾಗಿರುವವರೆಗೂ ಮಾತ್ರ ಕಲಾವಿದನಿಗೆ ಬೆಲೆ. ಬಣ್ಣ ಮಾಸಿದ ನಂತರ ಅವನು ಕಲಾವಿದನಾಗಿ ಉಳಿಯುವುದಿಲ್ಲ. ಸಾಮಾನ್ಯ ಮನುಷ್ಯನಾಗಿ ಬಿಡುತ್ತಾನೆ. ಅದರಂತೆಯೇ ಸ್ಟಾರ್ ಗಿರಿ ಇದ್ದಾಗ ತಾನು, ತನ್ನ ಮನೆ ಅಂತ ಎಲ್ಲವನ್ನು ಜೋಪಾನ ಮಾಡಿಕೊಂಡವರು ಕೆಲವು. ಸಿನಿಮಾ. ಕಲೆ ಅಭಿಮಾನ ಮುಂದಕ್ಕೆ ಜೀವನ ನಡೆಯುತ್ತೇ ಅಂತ ಯೋಚಿಸಿದವರು ಅನೇಕರು.

  ಕನ್ನಡ ಸಿನಿಮಾರಂಗದ ಹಿರಿಯ ಜೀವಗಳು ಒಂದೊಂದೆ ಮರೆಯಾಗಿ ಹೋಗುತ್ತಿವೆ. ದಿಕ್ಕು ದೆಸೆ ಇಲ್ಲದೆ ಕೊನೆಯ ಕಾಲದಲ್ಲಿ ಯಾರದ್ದೂ ಆಸರೆ ಇಲ್ಲದೆ ಹೋಗುತ್ತಿದ್ದಾರೆ ಎನ್ನುವುದೇ ಬೇಸರದ ಸಂಗತಿ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಸುಮಾರು 550 ಚಿತ್ರಗಳಲ್ಲಿ ನಟಿಸಿದ ಶನಿಮಹದೇವಪ್ಪ ಅವರ ಸ್ಥಿತಿ ತೀರ ಗಂಭೀರವಾಗಿದೆ.

  ಬುಲೆಟ್ ಪ್ರಕಾಶ್ ಇಂದು ಬದುಕಿದ್ದಾರೆ ಎಂದರೆ ಅದಕ್ಕೆ ಕಾರಣ ಒಬ್ಬ ಹುಡುಗ!

  ಹಿರಿಯ ಸಿನಿಮಾ ವರದಿಗಾರರಾದ ಗಣೇಶ್ ಕಾಸರಗೋಡು ಅವರು ತಮ್ಮ ಚದುರಿದ ಚಿತ್ರಗಳು ಹೆಸರಿನಲ್ಲಿ ಹಿರಿಯ ಕಲಾವಿದರ ಸ್ಥಿತಿ ಗತಿ ಬಗ್ಗೆ ಬರೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಹಿರಿಯ ನಟ ಶನಿಮಹಾದೇವಪ್ಪಾ ಅವರ ಸ್ಥಿತಿ ಬಗ್ಗೆ ಈ ರೀತಿಯಲ್ಲಿ ಬರೆದಿದ್ದಾರೆ. ಮುಂದೆ ಓದಿ

  ಚಿತ್ರರಂಗದ ಪ್ರೀತಿಯಿಂದ ಅವಕಾಶ ವಂಚಿತರಾದರು

  ಚಿತ್ರರಂಗದ ಪ್ರೀತಿಯಿಂದ ಅವಕಾಶ ವಂಚಿತರಾದರು

  "ಜಯಲಲಿತಾ ಕರೆದಾಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದರೆ ಈ ಶನಿ ಮಹಾದೇವಪ್ಪನವರು ಅಲ್ಲಿ ಪೋಷಕ ನಟರಾಗಿ ದೊಡ್ಡ ಹೆಸರು ಮತ್ತು ಅಪಾರ ಹಣ ಗಳಿಸಿ ವೃದ್ಧಾಪ್ಯದ ಈ ದಿನಗಳಲ್ಲಿ ಸುಖವಾಗಿ ಬದುಕು ನಡೆಸ ಬಹುದಿತ್ತು. ಆದರೆ ಏನಾಯಿತು ನೋಡಿ : ಕನ್ನಡ ಚಿತ್ರರಂಗದ ಮೇಲಿನ ಅಪಾರ ವ್ಯಾಮೋಹದಿಂದಾಗಿ ಬೆಂಗಳೂರಿನಲ್ಲೇ ಉಳಿದ ಕಾರಣವಾಗಿ ಈಗ ತೀರಾ ದುರ್ಭರ ಬದುಕು ನಡೆಸುವಂಥಾ ದುಃಸ್ಥಿತಿ ನಿರ್ಮಾಣವಾಗಿದೆ.

  ಕನ್ನಡ ನಾಡೇ ನಮಗೆ ಚಂದ

  ಕನ್ನಡ ನಾಡೇ ನಮಗೆ ಚಂದ

  'ಕನ್ನಡ ನಾಡಲ್ಲಿ ತಿಳಿ ಗಂಜಿಯನ್ನಾದರೂ ಕುಡಿದು ಬದುಕಿಯೇನು, ತಮಿಳುನಾಡಿನ ಭೂರೀ ಭೋಜನ ಬೇಡ' ಎಂದು ಕನ್ನಡಕ್ಕೆ ಆದ್ಯತೆ ಕೊಟ್ಟ ಶನಿ ಮಹಾದೇವಪ್ಪನವರದ್ದು ಅಪ್ಪಟ ಕನ್ನಡದ ಮನಸ್ಸು. ಇದು ನನ್ನ ಅಭಿಪ್ರಾಯವಲ್ಲ, ಸ್ವತಃ ಶನಿ ಮಹಾದೇವಪ್ಪನವರ ಅಭಿಪ್ರಾಯ!

  'ಇಲ್ಲ'ಗಳ ಮಧ್ಯೆ ಶನಿ ಮಹಾದೇವಪ್ಪ

  'ಇಲ್ಲ'ಗಳ ಮಧ್ಯೆ ಶನಿ ಮಹಾದೇವಪ್ಪ

  ಆದರೆ ಶನಿಮಹಾದೇವಪ್ಪ ಅವರಿಗೆ ಇದಕ್ಕಾಗಿ ದುಃಖವಿಲ್ಲ, ಪಶ್ಚಾತ್ತಾಪವೂ ಇಲ್ಲ. ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳಿಸುವುದಿಲ್ಲ, ನಡೆದಾಡಲು ಸಾಧ್ಯವಿಲ್ಲ, ಹೊಟ್ಟೆ ತುಂಬಾ ಊಟ ಮಾಡಲು ಆರ್ಥಿಕ ಬಲವಿಲ್ಲ. ಈ ಎಲ್ಲಾ 'ಇಲ್ಲ'ಗಳ ನಡುವೆ 90ರ ಹರೆಯದ ಶನಿ ಮಹಾದೇವಪ್ಪನವರು ಜೀವ ಹಿಡಿದುಕೊಂಡಿರುವುದೇ ಹೆಚ್ಚು .

  550 ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟ

  550 ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟ

  ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು ಸುಮಾರು 550 ಚಿತ್ರಗಳಲ್ಲಿ ನಟಿಸಿರುವ ಶನಿ ಮಹಾದೇವಪ್ಪ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿಯವರು. ಕಳೆದ ಐದು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿಯುತ್ತಿರುವ ಇವರದ್ದು ಈಗ ವಿಶ್ರಾಂತ ಜೀವನ.

  ಶನಿದೇವರ ಪಾತ್ರದಲ್ಲಿ ಪ್ರಖ್ಯಾತಿ

  ಶನಿದೇವರ ಪಾತ್ರದಲ್ಲಿ ಪ್ರಖ್ಯಾತಿ

  'ರಾಜಾವಿಕ್ರಮ' ನಾಟಕದಲ್ಲಿ ಸತತವಾಗಿ ಶನಿದೇವರ ಪಾತ್ರ ನಿರ್ವಹಿಸಿದ್ದರಿಂದಾಗಿ 'ಶನಿ ಮಹದೇವಪ್ಪ' ಎಂಬ ಹೆಸರು ಪರ್ಮನೆಂಟಾಯಿತು! ದುರಾದೃಷ್ಟ ವಕ್ಕರಿಸಿಕೊಂಡಾಗ ತಮ್ಮ ಹೆಸರನ್ನು 'ಶಿವಪ್ರಕಾಶ್' ಎಂದು ಬದಲಾಯಿಸಿಕೊಂಡದ್ದೂ ಇದೆ. ಆದರೂ ಅದೃಷ್ಟ ಖುಲಾಯಿಸದಿದ್ದಾಗ ಮತ್ತೆ ಶನಿ ಮಹಾದೇವಪ್ಪನಾಗಿಯೇ ಮುಂದುವರಿದದ್ದು ಈಗ ಇತಿಹಾಸ. ಇಂಥಾ ಶನಿ ಮಹಾದೇವಪ್ಪನವರು ನಟಿಸಿದ ಪ್ರಮುಖ ಚಿತ್ರಗಳೆಂದರೆ 'ಕವಿರತ್ನ', 'ಕಾಳಿದಾಸ', 'ಅದೇ ಕಣ್ಣು', 'ದೇವತಾ ಮನುಷ್ಯ', 'ಭಕ್ತ ಕುಂಬಾರ', 'ಭಕ್ತ ಪ್ರಹ್ಲಾದ', 'ಬಡವರ ಬಂಧು''ಇತ್ಯಾದಿ.

  English summary
  Here with full information about Kannada Shani senior actor Mahadevappa, Shani Mahadevappa has acted in many films like 'Kaviratna', 'Kalidasa', 'Ade Kannu', 'Devatha manushya', 'Bhakta Kumbara', 'Bhakta Prahlada' and 'Badavar Bandhu'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X