'ಓಂ' ಚಿತ್ರದ ಓಂಕಾರ ಹಾಡಿನ ಹಿಂದಿದೆ ಈ ಕುತೂಹಲಕಾರಿ ಕಥೆ

'ಓಂ' ಸಿನಿಮಾ ಇಡೀ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ದಾಖಲೆ ಮಾಡಿರುವ ಚಿತ್ರ. ಈ ಸಿನಿಮಾದ ಹಿಂದೆ ಅನೇಕ ರೋಚಕ ಕಥೆಗಳಿವೆ. ಪ್ರತಿಯೊಂದು ಹಂತದಲ್ಲಿಯೂ ಇತಿಹಾಸ ಸೃಷ್ಟಿ ಮಾಡಿದ 'ಓಂ' ಸಿನಿಮಾದಲ್ಲಿ ಇದ್ದ ಪ್ರತಿ ಹಾಡುಗಳು ಸೂಪರ್ ಹಿಟ್ ಆಗಿತ್ತು.

ಅಂದಿನ ಕಾಲಕ್ಕೆ ಮಾತ್ರವಲ್ಲದೆ ಇಂದಿಗೂ 'ಓಂ' ಚಿತ್ರದ ಹಾಡುಗಳು ಪ್ರತಿಯೊಬ್ಬರ ಮೊಬೈಲ್ ಹಾಗೂ ಕಾರ್ ಗಳಲ್ಲಿ ಆಗಾಗ ಕೇಳಿಬರುತ್ತೆ. ಅಷ್ಟರ ಮಟ್ಟಿಗೆ ಆ ಹಾಡುಗಳು ಮ್ಯಾಜಿಕ್ ಮಾಡಿತ್ತು.

'ಓಂ' ಚಿತ್ರದ ಹಾಡುಗಳನ್ನು ತಮ್ಮ ಕೈಯಾರೆ ಡಾ.ರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು. ರಾಜ್ ಕುಮಾರ್ 'ಓಂ' ಸಿನಿಮಾದಲ್ಲಿ ಎರಡು ಹಾಡುಗಳನ್ನು ಹಾಡಿದ್ದರು. ಅದರಲ್ಲಿ ಒಂದು ಹಾಡು ಬ್ರಹ್ಮಂನಂದಾ ಓಂಕಾರ. ಈ ಹಾಡು ಸಿನಿಮಾದಲ್ಲಿ ಇರಲಿಲ್ಲಂತೆ ಆದರೆ ನಂತರ ಸೇರಿಸಲಾಗಿದೆ. ಈ ಹಾಡು 'ಓಂ' ಚಿತ್ರಕ್ಕೆ ಸೇರಿಕೊಂಡ ರೋಚಕ ಕಥೆ ಇಲ್ಲಿದೆ ಮುಂದೆ ಓದಿ..

ಸಿನಿಮಾ ಟೈಟಲ್ ಗಾಗಿ ಹುಟ್ಟುದ ಹಾಡು

ಸಿನಿಮಾ ಟೈಟಲ್ ಗಾಗಿ ಹುಟ್ಟುದ ಹಾಡು

ಉಪೇಂದ್ರ ಅವರ ಕಥೆಯಲ್ಲಿ ಮೊದಲು 'ಓಂಕಾರ' ಹಾಡು ಇರಲಿಲ್ಲವಂತೆ. ಆ ನಂತರ ರಾಜ್ 'ಓಂ' ಎಂಬ ಪದಕ್ಕೆ ಒಂದು ಹಾಡು ಇರಲಿ ಅಂತ ಹೇಳಿದಾಗ ಈ ಹಾಡು ಸೃಷ್ಟಿಯಾಗಿದೆ.

ಪ್ರಖ್ಯಾತಿ ಪಡೆದುಕೊಂಡಿರುವ ಹಾಡು

ಪ್ರಖ್ಯಾತಿ ಪಡೆದುಕೊಂಡಿರುವ ಹಾಡು

'ಓಂಕಾರ' ಮತ್ತು 'ಓ ಗುಲಾಬಿಯೇ...' ಹಾಡುಗಳು ಇಂದಿಗೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಚಿತ್ರದ ಈ ಎರಡು ಹಾಡುಗಳನ್ನು ಡಾ ರಾಜ್ ಕುಮಾರ್ ಅವರೇ ಹಾಡಿದ್ದರು. ಇದು ಕೂಡ ಚಿತ್ರದ ಹಾಡು ಹಿಟ್ ಆಗಲು ಒಂದು ಪ್ಲಸ್ ಪಾಯಿಂಟ್ ಆಗಿತ್ತು.

ಸಾಹಿತ್ಯ-ಸಂಗೀತ ಎರಡು ಹಂಸಲೇಖ ಅವರದ್ದೇ

ಸಾಹಿತ್ಯ-ಸಂಗೀತ ಎರಡು ಹಂಸಲೇಖ ಅವರದ್ದೇ

'ಓಂ' ಸಿನಿಮಾದ ಹಾಡುಗಳು ಹಂಸಲೇಖ ಅವರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಈ ಚಿತ್ರದ ಎಲ್ಲ ಹಾಡುಗಳಿಗೂ ಹಂಸಲೇಖ ಅವರೇ ಸಾಹಿತ್ಯ-ಸಂಗೀತ ಒದಗಿಸಿದ್ದರು.

ಅತಿ ಹೆಚ್ಚು ಭಾರಿ ರೀ ರಿಲೀಸ್

ಅತಿ ಹೆಚ್ಚು ಭಾರಿ ರೀ ರಿಲೀಸ್

'ಓಂ' ಸಿನಿಮಾದ ಮುಹೂರ್ತದ ದಿನ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಸಹ ಡಾ.ರಾಜ್ ಕುಮಾರ್. ಓಂ' ಚಿತ್ರ ಡಾ.ರಾಜ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಓಂ' ಸಿನಿಮಾ ಹೆಚ್ಚು ಬಾರಿ ರೀ ರಿಲೀಸ್ ಆಗಿ ಭಾರತ ಚಿತ್ರರಂಗದಲ್ಲೇ ದೊಡ್ಡ ದಾಖಲೆ ಮಾಡಿದೆ. ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರೇಮ ಅಭಿನಯಿಸಿದ್ದರು.

More from Filmibeat

English summary
Here's Full details of how the Omkar song is born in Kannada Om movie. Om Shivaraj Kumar's performance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X