For Quick Alerts
  ALLOW NOTIFICATIONS  
  For Daily Alerts

  ಸೌತ್ ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯಾರ ಮುಡಿಗೆ ?

  By Pavithra
  |

  ದಕ್ಷಿಣ ಭಾರತದ ಅತಿ ದೊಡ್ಡ ಪ್ರಶಸ್ತಿ ಸಮಾರಂಭ ಸೌತ್ ಫಿಲ್ಮ್ ಫೇರ್ ಅವಾರ್ಡ್ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳು 16ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ಈ ಅದ್ಧೂರಿ ಸಮಾರಂಭದಲ್ಲಿ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ಕೊಟ್ಟು ಗೌರವ ಸಲ್ಲಿಸಲಾಗುತ್ತದೆ.

  ನಾಲ್ಕು ಭಾಷೆಯ ಕಲಾವಿದರು ತಂತ್ರಜ್ಞರು ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದುಕೊಳ್ಳುವುದರ ಜೊತೆಯಲ್ಲಿ ವೇದಿಕೆ ಮೇಲೆ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹತ್ತು ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ನೀಡಲಿದ್ದು ಕಳೆದ ಬಾರಿ ಸ್ಯಾಂಡಲ್ ವುಡ್ ನಲ್ಲಿ ಹಲವಾರು ವಿಭಿನ್ನ ಸಿನಿಮಾಗಳು ತೆರೆಕಂಡಿವೆ.

  ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?

  ವಿಭಿನ್ನ ಸಿನಿಮಾಗಳನ್ನ ಕೊಟ್ಟು ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ ಕೆಲ ನಿರ್ದೇಶಕರ ಹೆಸರುಗಳು ಫಿಲ್ಮ್ ಫೇರ್ ನಲ್ಲಿ ಆಯ್ಕೆ ಆಗಿವೆ. ಹಾಗಾದರೆ ಯಾರಿಗೆ ಈ ಬಾರಿಯ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಸಿಗಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ ..

  ಬ್ಯೂಟಿಫುಲ್ ಮನಸುಗಳು

  ಬ್ಯೂಟಿಫುಲ್ ಮನಸುಗಳು

  ಈಗಾಗಲೇ ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ರೀತಿಯ ಸಿನಿಮಾಗಳನ್ನು ನೀಡುತ್ತಾ ಬಂದಿರುವಂತಹ ನಿರ್ದೇಶಕ ಜಯತೀರ್ಥ ಅವರ ಹೆಸರು ಕೂಡ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿದೆ. ಜಯತೀರ್ಥ ನಿರ್ದೇಶನದ ಶ್ರುತಿ ಹಾಗೂ ನೀನಾಸಂ ಸತೀಶ್ ಅಭಿನಯದ ಬ್ಯೂಟಿಫುಲ್ ಮನಸುಗಳು ಚಿತ್ರದ ನಿರ್ದೇಶನಕ್ಕಾಗಿ ಜಯತೀರ್ಥ ಅವರ ಹೆಸರು ನಾಮ ನಿರ್ದೇಶನವಾಗಿದೆ.

  ನಾಮನಿರ್ದೇಶನ ವಾಯ್ತು ಒಂದು ಮೊಟ್ಟೆಯ ಕಥೆ

  ನಾಮನಿರ್ದೇಶನ ವಾಯ್ತು ಒಂದು ಮೊಟ್ಟೆಯ ಕಥೆ

  'ಒಂದು ಮೊಟ್ಟೆಯ ಕಥೆ' ಕಳೆದ ವರ್ಷದಲ್ಲಿ ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಎಂದು ತೋರಿಸಿ ಕೊಟ್ಟಂತಹ ಸಿನಿಮಾ. ಚಿತ್ರದಲ್ಲಿ ನಾಯಕನಾಗಿ ಹಾಗೂ ನಿರ್ದೇಶನವನ್ನು ಮಾಡಿದ್ದಂತಹ ರಾಜ್ ಶೆಟ್ಟಿ ಈ ಬಾರಿ ಫಿಲ್ಮ್ ಫೇರ್ ನಲ್ಲಿ ಅತ್ಯುತ್ತಮ ನಿರ್ದೇಶಕರ ರೇಸ್ ನಲ್ಲಿದ್ದಾರೆ.

  ದಯವಿಟ್ಟು ಗಮನಿಸಿ ಪ್ರಶಸ್ತಿಯ ಸಾಲಿನಲ್ಲಿ

  ದಯವಿಟ್ಟು ಗಮನಿಸಿ ಪ್ರಶಸ್ತಿಯ ಸಾಲಿನಲ್ಲಿ

  ರೋಹಿತ್ ಪದಕಿ ನಿರ್ದೇಶನದ ಚೊಚ್ಚಲ ಸಿನಿಮಾ 'ದಯವಿಟ್ಟು ಗಮನಿಸಿ' ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದಂತಹ ದಯವಿಟ್ಟು ಗಮನಿಸಿ ಸಿನಿಮಾ ಹಾಡುಗಳಿಂದಲೇ ಜನರ ಗಮನ ಸೆಳೆದಿತ್ತು. ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ರೋಹಿತ್ ಪದಕಿ ಅವರ ಹೆಸರು ಕೂಡ ನಾಮಿನೇಟ್ ಆಗಿದೆ.

  ನಾಮನಿರ್ದೇಶನ ವಾಯ್ತು ಸಂತೋಷ ಹೆಸರು

  ನಾಮನಿರ್ದೇಶನ ವಾಯ್ತು ಸಂತೋಷ ಹೆಸರು

  ಕಳೆದ ವರ್ಷ ಬಾಕ್ಸ್ ಆಫೀಸ್ನಲ್ಲಿ ಮಾತ್ರವಲ್ಲದೆ ಕನ್ನಡ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ಸು ಆಗಿದ್ದ ರಾಜಕುಮಾರ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೆಸರು ಕೂಡ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ.

  ತರುಣ್ ಹೆಸರು ನಾಮಿನೇಟ್

  ತರುಣ್ ಹೆಸರು ನಾಮಿನೇಟ್

  ಕಳೆದ ವರ್ಷ ಸಾಕಷ್ಟು ಭಿನ್ನ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದವು. ಅದೇ ರೀತಿಯ ವಿಭಿನ್ನ ಸಿನಿಮಾ ಎನಿಸಿಕೊಂಡ ಮತ್ತೊಂದು ಚಿತ್ರ ಚೌಕ. ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನಿಮಾ ಚೌಕ ಕೂಡ ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿದೆ ತರುಣ್ ಸುಧೀರ್ ಹೆಸರು ಅತ್ಯುತ್ತಮ ನಿರ್ದೇಶಕರ ಹೆಸರಿನಲ್ಲಿದೆ.

  English summary
  Here's list of 65th Jio Filmfare Awards South 2018 best kannada movie Director nominees.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X