For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗದ ಕಾಲೇಜಿಗೆ ನುಗ್ಗಿದ ‘ಹೀರೋ’: ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿಗಳು

  By ಶಿವಮೊಗ್ಗ ಪ್ರತಿನಿಧಿ
  |

  'ಹೀರೋ' ರಿಷಬ್ ಶೆಟ್ಟಿ ಸಿನಿಮಾ ಪ್ರಚಾರಕ್ಕಾಗಿ ಶಿವಮೊಗ್ಗದ ಕಾಲೇಜುಗಳಿಗೆ ಭೇಟಿ ನೀಡಿದರು. ಈ ಸಮಯ ವಿದ್ಯಾರ್ಥಿಗಳು ಸೆಲ್ಫಿಗಾಗಿ ಮುಗಿಬಿದ್ದರು. ರಿಷಬ್ ಶೆಟ್ಟಿ ಜೊತೆಗೆ ಸಿನಿಮಾದಲ್ಲಿ ನಟಿಸಿರುವ ಇತರ ಕಲಾವಿದರೂ ಇದ್ದರು.

  ಶಿವಮೊಗ್ಗದ ಜೆಎನ್ಎನ್‌ಸಿಇ ಕಾಲೇಜು, ಎಜುರೈಟ್, ಡಿವಿಎಸ್ ಕಾಲೇಜು ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಿನಿಮಾದ ಪ್ರಮೋಷನ್ ನಡೆಸಲಾಯಿತು.

  ಆ ಅನಿಷ್ಟ ಈಗ ನಮ್ಮ ಬುಡಕ್ಕೆ ಬಂದಿದೆ: ರಿಷಬ್ ಶೆಟ್ಟಿ ಆಕ್ರೋಶಆ ಅನಿಷ್ಟ ಈಗ ನಮ್ಮ ಬುಡಕ್ಕೆ ಬಂದಿದೆ: ರಿಷಬ್ ಶೆಟ್ಟಿ ಆಕ್ರೋಶ

  ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರನ್ನು ಕಣ್ತುಂಬಿಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದರು. ವಿದ್ಯಾರ್ಥಿಗಳ ಜೊತೆಗೆ ನಟರು ಸಂವಾದ ನಡೆಸಿದರು, ಹಾಡು, ಡೈಲಾಗ್ ಹೇಳಿ ರಂಜಿಸಿದರು. ಈ ವೇಳೆ ನಟರೊಂದಿಗೆ ಸೆಲ್ಫಿಗೂ ವಿದ್ಯಾರ್ಥಿಗಳು ಮುಗಬಿದ್ದರು.

  ಶಿವಮೊಗ್ಗ ಮಾರ್ಡನ್ ಚಿತ್ರಮಂದಿರ ಮತ್ತು ಭಾರತ್ ಸಿನಿಮಾಸ್‌ನಲ್ಲಿ ಪ್ರೇಕ್ಷಕರ ಜೊತೆಗೆ 'ಹೀರೋ' ಸಿನಿಮಾ ವೀಕ್ಷಿಸಿದರು. ಭಾರತ್ ಸಿನಿಮಾಸ್‌ನಲ್ಲಿ ಶಿವಮೊಗ್ಗದ ಬಂಟರ ಸಂಘದ ವತಿಯಿಂದ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಟ ಸಂತೋಷ್ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.

  ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಮನೆ ಮಾರಿದ ದ್ವಾರಕೀಶ್: ರಿಷಬ್ ಶೆಟ್ಟಿ ಪಾಲಾದ ಪ್ರೀತಿಯ ಬಂಗಲೆಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಮನೆ ಮಾರಿದ ದ್ವಾರಕೀಶ್: ರಿಷಬ್ ಶೆಟ್ಟಿ ಪಾಲಾದ ಪ್ರೀತಿಯ ಬಂಗಲೆ

  ಕಥೆಗೆ ಟೈಟಲ್ ಹೇಗೆ ಸೆಲೆಕ್ಟ್ ಆಯ್ತು ಅಂತಾ ಹೇಳಿದ್ರು ಡೈರೆಕ್ಟರ್ ಹೇಮಂತ್ | Filmibeat Kannada

  ರಿಷಬ್ ಶೆಟ್ಟಿ ನಿರ್ಮಾಣ ಮಾಡಿ ನಟಿಸಿರುವ 'ಹೀರೋ' ಸಿನಿಮಾ ಮಾರ್ಚ್ 5 ರಂದು ಬಿಡುಗಡೆ ಆಗಿತ್ತು. ಸಿನಿಮಾವನ್ನು ಭರತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ ಗಾನವಿ ನಾಯಕಿಯಾಗಿ ನಟಿಸಿದ್ದಾರೆ. ಕೊರೊನಾ ಸಮಯದಲ್ಲಿ ಕೆಲವೇ ಮಂದಿ ಸೇರಿ ಕೆಲವೇ ದಿನಗಳಲ್ಲಿ ನಿರ್ಮಿಸಿದ ಸಿನಿಮಾ ಇದು.

  English summary
  Hero movie team visited colleges in Shimogga for promotions. Rishab Shetty, Pramod Shetty and others talks about movie with students.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X