ಆ ಅನಿಷ್ಟ ಈಗ ನಮ್ಮ ಬುಡಕ್ಕೆ ಬಂದಿದೆ: ರಿಷಬ್ ಶೆಟ್ಟಿ ಆಕ್ರೋಶ

ರಿಷಬ್ ಶೆಟ್ಟಿಗೆ ಪೈರಸಿ ಕಾಟ ತಲೆದೂರಿದೆ. ರಿಷನ್ ಶೆಟ್ಟಿ ನಿರ್ಮಿಸಿ, ನಟಿಸಿರುವ ಹೀರೋ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮೂರು ದಿನಗಳಾಗಿದ್ದು. ಚಿತ್ರಮಂದಿರದಲ್ಲಿ ಇನ್ನೂ ಓಡುತ್ತಿರುವಾಗಲೇ ಸಿನಿಮಾದ ಪೈರಸಿ ಕಾಪಿಗಳು ಹೊರಬಂದಿವೆ.

Recommended Video

ರಘು ಗೌಡ ಇನ್ನಷ್ಟು ದಿನ ಸೇಫ್.. ಹೇಗೆ ಅಂತೀರ? | Bigg Boss Season 8 | Filmibeat Kannada

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ರಿಷಬ್ ಶೆಟ್ಟಿ, 'ನಮ್ಮ 'ಹೀರೋ' ಸಿನಿಮಾ ಎರಡು ಕಡೆ ಚೆನ್ನಾಗಿ ಓಡುತ್ತಿದೆ ಒಂದು ಚಿತ್ರಮಂದಿರದಲ್ಲಿ ಮತ್ತೊಂದು ಪೈರಸಿಯಲ್ಲಿ' ಎಂದಿದ್ದಾರೆ ರಿಷಬ್.

'ಕೊರೊನಾ ಸಮಯದಲ್ಲಿ ಇಡೀಯ ಊರು ಮಲಗಿದ್ದಾಗ. ಜನರ ಮನರಂಜನೆಗಾಗಿ ಕಡಿಮೆ ಸಮಯದಲ್ಲಿ ಕೆಲವರೇ ಸೇರಿಕೊಂಡು ಸಿನಿಮಾ ಮಾಡುತ್ತೀವಿ. ಅದು ಚಿತ್ರಮಂದಿರದಲ್ಲಿ ಕೆಲವು ದಿನ ಹಿಂದೆಯಷ್ಟೆ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಪೈರಸಿ ಕಾಪಿಗಳು ಎಷ್ಟು ಹರಿದಾಡುತ್ತಿವೆಯೆಂದರೆ, ನಾವು ಬೆಳಿಗ್ಗಿನಿಂದ ಕೂತು ಲಿಂಕ್‌ಗಳನ್ನು ಎಷ್ಟು ಡಿಲೀಟ್ ಮಾಡಿದರು ಸಾಕಾಗುತ್ತಿಲ್ಲ' ಎಂದಿದ್ದಾರೆ ರಿಷಬ್ ಶೆಟ್ಟಿ.

ಚಿತ್ರಮಂದಿರದವರ ಜವಾಬ್ದಾರಿಯೂ ಇದೆ: ರಿಷಬ್ ಶೆಟ್ಟಿ

ಚಿತ್ರಮಂದಿರದವರ ಜವಾಬ್ದಾರಿಯೂ ಇದೆ: ರಿಷಬ್ ಶೆಟ್ಟಿ

ಚಿತ್ರಮಂದಿರದ ಒಳಗೆ ಕ್ಯಾಮೆರಾ ತೆಗೆದುಕೊಂಡು ಹೋಗಿ ಇಡೀಯ ಸಿನಿಮಾ ಚಿತ್ರೀಕರಿಸಿ ಬರುತ್ತಾರೆ ಎಂದರೆ ಇದರಲ್ಲಿ ಚಿತ್ರಮಂದಿರದವರ ಜವಾಬ್ದಾರಿಯೂ ಇದೆ. ಒಂದು ವರ್ಷದ ಕಾಲ ನಮಗೆ ಚಿತ್ರಮಂದಿರಗಳೇ ತೆರೆದಿರಲಿಲ್ಲ. ಈಗ ತೆರೆದಿದೆ. ಚಿತ್ರಮಂದಿರದ ಒಳಗೆ ಕ್ಯಾಮೆರಾ, ಮೊಬೈಲ್‌ಗಳನ್ನು ಹೇಗೆ ಅಲೋ ಮಾಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ' ಎಂದರು ರಿಷಬ್ ಶೆಟ್ಟಿ.

'ಪೈಲ್ವಾನ್' ಸಿನಿಮಾ ಸಹ ಪೈರಸಿಗೆ ತುತ್ತಾಗಿತ್ತು: ರಿಷಬ್

'ಪೈಲ್ವಾನ್' ಸಿನಿಮಾ ಸಹ ಪೈರಸಿಗೆ ತುತ್ತಾಗಿತ್ತು: ರಿಷಬ್

'ಈ ರೀತಿಯ ಸಮಸ್ಯೆ ಇದು ಮೊದಲೇನೂ ಅಲ್ಲ ಈ ಹಿಂದೆಯೂ ಹಲವಾರು ದೊಡ್ಡ-ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ಸಹ ಈ ಸಮಸ್ಯೆ ಎದುರಾಗಿತ್ತು. ಪೈಲ್ವಾನ್ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿತ್ತು. ಈಗ ನಮ್ಮ ಬುಡಕ್ಕೆ ಬಂದಿದೆ. ನಾನು ಪೈರಸಿ ಬಗ್ಗೆ ಈಗ ಮಾತನಾಡುತ್ತಿಲ್ಲ, ಕಿರಿಕ್ ಪಾರ್ಟಿ ಸಿನಿಮಾದ ಸಮಯದಿಂದಲೂ ಮಾತನಾಡುತ್ತಿದ್ದೇನೆ' ಎಂದರು ರಿಷಬ್ ಶೆಟ್ಟಿ.

ಲಿಂಕ್‌ಗಳನ್ನು ನಮಗೆ ಕಳಿಸಿಕೊಡಿ: ರಿಷಬ್

ಲಿಂಕ್‌ಗಳನ್ನು ನಮಗೆ ಕಳಿಸಿಕೊಡಿ: ರಿಷಬ್

'ನನ್ನ ಮನವಿ ಇಷ್ಟೆ, ನಿಮಗೆ ಎಲ್ಲಿಯೇ 'ಹೀರೊ' ಸಿನಿಮಾದ ಪೈರಸಿ ಲಿಂಕ್ ಸಿಕ್ಕರೂ ಅದನ್ನು ನಮಗೆ ಕಳುಹಿಸಿ. ನನ್ನ ಸಾಮಾಜಿಕ ಜಾಲತಾಣಕ್ಕೆ ಕಳುಹಿಸಿ ನಾವು ಡಿಲೀಟ್ ಮಾಡಿಸುತ್ತೇವೆ. ಅಷ್ಟೇ ಅಲ್ಲದೆ, ಹೆಚ್ಚು-ಹೆಚ್ಚು ಮಂದಿ 'ಹೀರೊ' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಂದು ನೋಡಿ' ಎಂದಿದ್ದಾರೆ ರಿಷನ್ ಶೆಟ್ಟಿ.

24 ಮಂದಿ ಸೇರಿ ತೆಗೆದಿರುವ ಸಿನಿಮಾ

24 ಮಂದಿ ಸೇರಿ ತೆಗೆದಿರುವ ಸಿನಿಮಾ

'ಹೀರೊ' ಸಿನಿಮಾವನ್ನು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ರಿಷಬ್ ಶೆಟ್ಟಿ ಮತ್ತು ಕಿರು ತಂಡ ಖಾಸಗಿ ಎಸ್ಟೇಟ್ ಒಂದರಲ್ಲಿ ಚಿತ್ರೀಕರಣ ಮಾಡಿದರು. ಕೇವಲ 24 ಮಂದಿಯ ತಂಡ ಸೇರಿ ನಿರ್ಮಾಣ ಮಾಡಿರುವ ಸಿನಿಮಾ ಇದು. ಮಾರ್ಚ್ 5 ರಂದು 'ಹೀರೋ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.

More from Filmibeat

English summary
Rishab Shetty produced 'Hero' movie pirated. He express his anger and helplessness on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X