For Quick Alerts
  ALLOW NOTIFICATIONS  
  For Daily Alerts

  'ಭೈರವ'ನ ಗೀತಾಳ ಬೋಲ್ಟ್ ಅವತಾರಕ್ಕೆ ಸುಸ್ತಾದ ನೆಟ್ಟಿಗರು

  By Pavithra
  |
  ಭೈರವ ಗೀತ ಸಿನಿಮಾ ನಾಯಕಿಯ ಬೋಲ್ಡ್ ಅವತಾರ ನೋಡಿ..! | Oneindia Kannada

  'ಭೈರವ ಗೀತ' ಸ್ಪೆಷಲ್ ಸ್ಟಾರ್ ಧನಂಜಯ ಅಭಿನಯದ ಮೊದಲ ಟಾಲಿವುಡ್ ಸಿನಿಮಾ. ಆರ್ ಜಿ ವಿ ನಿರ್ಮಾಣದಲ್ಲಿ ಸೆಟ್ಟೇರಿ ಚಿತ್ರೀಕರಣದ ಕೊನೆಯ ಹಂತ ತಲುಪಿರುವ 'ಭೈರವ ಗೀತ' ಸಿನಿಮಾ ಟೀಸರ್ ಸಖತ್ ಸದ್ದು ಮಾಡುತ್ತಿದೆ.

  ಯೂಟ್ಯೂಬ್ ನಲ್ಲಿ ಟ್ರೆಂಡ್ ಸೆಟ್ ಮಾಡುತ್ತಿರುವ 'ಭೈರವ ಗೀತ' ಸಿನಿಮಾ ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಆರ್ ಜಿ ವಿ ಶಿಷ್ಯ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಚಿತ್ರದ ಪಾತ್ರಗಳ ಆಯ್ಕೆ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನೂ ರಾಮ್ ಗೋಪಾಲ್ ವರ್ಮ ಅವರೇ ನಿರ್ವಹಿಸಿದ್ದರು.

  ಯೂಟ್ಯೂಬ್ ನಲ್ಲಿ ಕನ್ನಡ ಟ್ರೇಲರ್ ಗಳ ಕಾರುಬಾರು ಯೂಟ್ಯೂಬ್ ನಲ್ಲಿ ಕನ್ನಡ ಟ್ರೇಲರ್ ಗಳ ಕಾರುಬಾರು

  ಧನಂಜಯನ ಮೊದಲ ತೆಲುಗು ಸಿನಿಮಾಗೆ ನಾಯಕಿಯಾರಾಗಲಿದ್ದಾರೆ ಎನ್ನುವ ಕುತೂಹಲ ಸಾಕಷ್ಟು ಜನರಲ್ಲಿ ಇತ್ತು. ಅದೇ ರೀತಿಯಲ್ಲಿ ಆರ್ ಜಿ ವಿ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ನಾಯಕಿಯನ್ನು ಪ್ರೇಕ್ಷಕರ ಮುಂದೆ ಕರೆತಂದಿದ್ದರು. ಟೀಸರ್ ನಲ್ಲಿ ಗೌರಮ್ಮನಂತೆ ಕಾಣಿಸಿಕೊಂಡ ನಟಿ ಇರಾ ಈಗ ಬೋಲ್ಡ್ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇರಾ ಹೊಸ ಅವತಾರಕ್ಕೆ ಅಭಿಮಾನಿಗಳು ಸುಸ್ತಾಗಿದ್ದಾರೆ. ಹಾಗಾದರೆ ಇರಾ ನ್ಯೂ ಲುಕ್ ಹೇಗಿದೆ? ಮುಂದೆ ಓದಿ

  ಬೋಲ್ಡ್ ಲುಕ್ ನಲ್ಲಿ ಇರಾ

  ಬೋಲ್ಡ್ ಲುಕ್ ನಲ್ಲಿ ಇರಾ

  'ಭೈರವ ಗೀತ' ಸಿನಿಮಾ ನಾಯಕಿ ಇರಾ ಹೊಸದೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಸಿನಿಮಾದ ಲುಕ್ ಟೆಸ್ಟ್ ಗಾಗಿ ಈ ಶೂಟ್ ಮಾಡಿಸಿದ್ದು ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪುತ್ತಿರುವ ಸಮಯದಲ್ಲಿ ಫೋಟೋ ಶೂಟ್ ನ ಫೋಟೋಗಳು ವೈರಲ್ ಆಗ್ತಿವೆ.

  ಇರಾ ಸೌಂದರ್ಯಕ್ಕೆ ಬೆರಗಾದ ನೆಟ್ಟಿಗರು

  ಇರಾ ಸೌಂದರ್ಯಕ್ಕೆ ಬೆರಗಾದ ನೆಟ್ಟಿಗರು

  ಇರಾ ಮಾಡಿಸಿರುವ ಫೋಟೋ ಶೂಟ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಇರಾ ಸೌಂದರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.

  ಇರಾ ಫೋಟೋ ಟ್ವೀಟ್ ಮಾಡಿದ ಆರ್ ಜಿ ವಿ

  ಇರಾ ಫೋಟೋ ಟ್ವೀಟ್ ಮಾಡಿದ ಆರ್ ಜಿ ವಿ

  ಇರಾ 'ಭೈರವ ಗೀತ' ಸಿನಿಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದ ರಾಮ್ ಗೋಪಾಲ್ ವರ್ಮ. ಈಗ ಅವರೇ ಇರಾ ಅವರ ಹೊಸ ಅವತಾರವನ್ನು ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

  ಗ್ಯಾಮರ್ ಬೊಂಬೆ ಇರಾ

  ಗ್ಯಾಮರ್ ಬೊಂಬೆ ಇರಾ

  ಇರಾ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಭೈರವ ಗೀತ' ಸಿನಿಮಾದಲ್ಲಿ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿಯ ಬೋಲ್ಡ್ ಅವತಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

  English summary
  'Bhairava Geeta' movie heroine Irra Mor's photos viral on the social networking site. Irra Bold has appeared in a photo shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X