Just In
Don't Miss!
- News
ಸ್ಟಾರ್ಟ್ ಅಪ್ಗಳ ಅನುಷ್ಠಾನದಲ್ಲಿ ಕರ್ನಾಟಕದ ನಂಬರ್ 1
- Finance
Gold Silver Rate: ಪ್ರಮುಖ ನಗರಗಳಲ್ಲಿ ಜ.26ರ ಚಿನ್ನ, ಬೆಳ್ಳಿ ದರ
- Sports
ಸಯ್ಯದ್ ಮುಷ್ತಾಕ್ ಅಲಿ: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ಹೀನಾಯ ಸೋಲು
- Automobiles
ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ ನ್ಯೂ ಜನರೇಷನ್ ಸ್ಕಾರ್ಪಿಯೋ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಡಿಗೆ ಮನೆ ಹಾನಿ ಪ್ರಕರಣ ಯಶ್ ತಾಯಿಗೆ ಬಿಗ್ ರಿಲೀಫ್
ರಾಕಿಂಗ್ ಸ್ಟಾರ್ ಅವರ ಬಾಡಿಗೆ ಮನೆ ವಿವಾದ ಇನ್ನು ಅಂತ್ಯಗೊಂಡಿಲ್ಲ. ಮನೆ ಮಾಲಿಕರಿಗೆ ಮನೆ ಬಿಟ್ಟುಕೊಟ್ಟರು ವಿವಾದ ಮಾತ್ರ ಇನ್ನು ಬಗೆಹರಿದಿಲ್ಲ. ಮನೆಯನ್ನು ಡ್ಯಾಮೇಜ್ ಮಾಡಿದ್ದಾರೆ ಎಂದು ಮನೆ ಮಾಲಿಕರ ದೂರಿನ ಆಧಾರದ ಮೇಲೆ ಯಶ್ ತಾಯಿ ಪುಷ್ಪ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ಆದ್ರೀಗ ಪುಷ್ಪ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ಅನ್ನು ರದ್ದು ಮಾಡುವಂತೆ ಹೈ ಕೋರ್ಟ್ ಆದೇಶ ಹೊರಡಿಸಿದೆ. ಮನೆ ಮಾಲಿಕರ ದಾಖಲಿಸಿದ ದೂರನ್ನು ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಹೈಕೋರ್ಟ್ ಮೋರೆ ಹೋಗಿದ್ದರು. 'ನ್ಯಾಯಾಲಯ ಸೂಚಿಸಿದಂತೆ ಬಾಕಿ ಹಣ ಪಾವತಿಸಿ, ಬಾಡಿಗೆ ಮನೆ ಖಾಲಿ ಮಾಡಿದ್ದೇವೆ. ಮನೆ ಖಾಲಿ ಮಾಡುವ ವೇಳೆ ಕೆಲವು ವಸ್ತುಗಳು ಸಣ್ಣಪುಟ್ಟ ಹಾನಿಗೀಡಾಗಿವೆ. ಇದಕ್ಕಾಗಿ ಪರಿಹಾರ ಕೋರಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಕರಣ ವಿಚಾರಣೆ ನಡೆಸಿದ ಹೈ ಕೋರ್ಟ್ ಏಕಸದಸ್ಯ ಪೀಠ ಎಫ್ ಐ ಆರ್ ರದ್ದುಮಾಡುವಂತೆ ಆದೇಶ ಹೊರಡಿಸಿದೆ.
ನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ ಐ ಆರ್ ದಾಖಲು
ಕೆಲವುದಿನಗಳ ಹಿಂದೆಯೆ ಯಶ್ ನ್ಯಾಯಾಲದ ಸೂಚನೆಯಂತೆ ಮನೆ ಖಾಲಿ ಮಾಡಿದ್ದಾರೆ. ಖಾಲಿ ಮಾಡುವಾಗ ಕಬೋರ್ಡ್, ವಾಶ್ ಬೇಸಿನ್, ಸ್ವಿಚ್ ಬೋರ್ಡ್ ಸೇರಿದಂತೆ ಹಲವು ವಸ್ತುಗಳನ್ನು ಹಾನಿ ಮಾಡಿದ್ದಾರೆ ಮತ್ತು ಕೆಲವು ಮಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಮನೆ ಮಾಲಿಕರು ಆರೋಪಿಸಿದ್ದರು.