twitter
    For Quick Alerts
    ALLOW NOTIFICATIONS  
    For Daily Alerts

    ಬಗೆಹರಿಯಿತು ವಿಷ್ಣು ಸ್ಮಾರಕ ಸಮಸ್ಯೆ: ಗೊತ್ತು ಪಡಿಸಿದ ಜಾಗದಲ್ಲೇ ಸ್ಮಾರಕ ನಿರ್ಮಾಣ.!

    By ಯಶಸ್ವಿನಿ ಎಂ ಕೆ
    |

    Recommended Video

    ಗೊತ್ತುಪಡಿಸಿದ ಜಾಗದಲ್ಲೇ ಸ್ಮಾರಕ ನಿರ್ಮಾಣ

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಸಮಸ್ಯೆ ನಿವಾರಣೆಯಾಗಿದ್ದು, ಈಗ ಸ್ಮಾರಕ ನಿರ್ಮಾಣ ಕೆಲಸಕ್ಕೆ ಚಾಲನೆ ಸಿಗಲಿದೆ. ಸುಮಾರು 10 ವರ್ಷದಿಂದ ವಿಷ್ಣು ಸ್ಮಾರಕಕ್ಕಾಗಿ ಹೋರಾಟ ಮಾಡಿದ್ದ ಅಭಿಮಾನಿಗಳು, ಕುಟುಂಬದವರು ಈಗ ಖುಷಿಯಾಗಿದ್ದಾರೆ.

    ವಿಷ್ಣು ಸ್ಮಾರಕ ಅಂದಾಕ್ಷಣ ಬೆಂಗಳೂರಿನಲ್ಲಿರುವ ಅಭಿಮಾನ್ ಸ್ಟುಡಿಯೋ ಎಂದುಕೊಳ್ಳಬೇಡಿ. ಸಮಸ್ಯೆ ಬಗೆಹರಿದಿರುವುದು ಮೈಸೂರಿನಲ್ಲಿ. ಕುಟುಂಬದ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಜಾಗ ನೀಡಿತ್ತು. ಆ ಜಾಗವೂ ವಿವಾದಕ್ಕೆ ಗುರಿಯಾಗಿ ಅಲ್ಲಿಯೂ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಇದೀಗ, ಆ ಸಮಸ್ಯೆ ಬಗಹರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂ ಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂ

    ಹೌದು, ಕೆಳ ನ್ಯಾಯಾಲಯ ಸ್ಮಾರಕ ನಿರ್ಮಾಣದ ಭೂ ಒಡೆತನಕ್ಕೆ ಸಂಬಂಧಿಸಿದಂತೆ ನೀಡಿದ್ದ ತಾತ್ಕಾಲಿಕ ಪ್ರತಿಬಂಧಕಾಜ್ಞೆ (ಸಿವಿಲ್ ಇಂಜೆಕ್ಷನ್) ಯನ್ನು ತೆರವುಗೊಳಿಸಿದ ಹೈಕೋರ್ಟ್ ಈಗ ಸ್ಮಾರಕ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅಷ್ಟಕ್ಕೂ, ಏನಿದು ಸ್ಮಾರಕ ಸಮಸ್ಯೆ? ಮುಂದೆ ಓದಿ.....

    ಏನಿದು ಮೈಸೂರಿನ ವಿವಾದ

    ಏನಿದು ಮೈಸೂರಿನ ವಿವಾದ

    ಮೈಸೂರು ತಾಲೂಕಿನ ಉದ್ಬೂರು ಹತ್ತಿರವಿರುವ ಮಾನಂದವಾಡಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಕಸಬಾ ಹೋಬಳಿ ಹಾಲಾಳು ಗ್ರಾಮದ ಸರ್ವೆ ನಂ.8ರಲ್ಲಿ 6 ಎಕರೆ 5 ಗುಂಟೆ ಸರ್ಕಾರಿ ಭೂಮಿಯಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು ಜಿಲ್ಲಾಡಳಿತ ಮಂಜೂರು ಮಾಡಿತ್ತು. ಆದರೆ ಆ ಭೂಮಿ ನಮಗೆ ಮಂಜೂರಾಗಿದ್ದು, ಅದರ ಒಡೆತನ ನಮ್ಮದು ಎಂದಿದ್ದರು. ಹಾಗಾಗಿ, ಇಲ್ಲಿ ಸ್ಮಾರಕ ನಿರ್ಮಾಣ ಮಾಡಬಾರದು ಎಂದು ಕೋರ್ಟ್ ನಲ್ಲಿ ಇಂಜಕ್ಷನ್ ಆರ್ಡರ್ ತಂದಿದ್ದರು.

    ಡಾ.ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ನೀಡಿದ 4 ಸಲಹೆಗಳುಡಾ.ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ನೀಡಿದ 4 ಸಲಹೆಗಳು

    ಹೈಕೋರ್ಟ್ ಹಸಿರು ನಿಶಾನೆ

    ಹೈಕೋರ್ಟ್ ಹಸಿರು ನಿಶಾನೆ

    ವಿಷ್ಣುವರ್ಧನ್ ಸ್ಮಾರಕ ಸಂಬಂಧ ಮೈಸೂರಿನ ಸಿವಿಲ್​​ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ತಡೆಯೊಡ್ಡಿತ್ತು. ಇದನ್ನು ಪ್ರಶ್ನಿಸಿದ ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಿತ್ತು. ಇದೀಗ ಹೈಕೋರ್ಟ್ ಆದೇಶದಂತೆ ವಿಷ್ಣು ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅಂತಿಮ ವಿಚಾರಣೆ ಮಾತ್ರ ಬಾಕಿ ಇದೆ.

    ಗೊತ್ತು ಪಡಿಸಿದ ಜಾಗದಲ್ಲೇ ಸ್ಮಾರಕ

    ಗೊತ್ತು ಪಡಿಸಿದ ಜಾಗದಲ್ಲೇ ಸ್ಮಾರಕ

    ಕೋರ್ಟ್ ಸೂಚನೆ ಮೆರೆಗೆ ಈಗ ಈ ಮೊದಲು ಮೈಸೂರು ಜಿಲ್ಲಾಡಳಿತ ಗೊತ್ತು ಪಡಿಸಿದ್ದ ಸ್ಥಳದಲ್ಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಬಹುದು. ಕುಟುಂಬದ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು, ಈ ಕೆಲಸಕ್ಕೆ ಅತಿ ಶೀಘ್ರದಲ್ಲಿ ಚಾಲನೆ ದೊರೆಯಲಿದೆ.

    ಅಭಿಮಾನಿ ಒತ್ತಾಯವೇ ಬೇರೆ ಇದೆ

    ಅಭಿಮಾನಿ ಒತ್ತಾಯವೇ ಬೇರೆ ಇದೆ

    ಇತ್ತ ವಿಷ್ಣುವರ್ಧನ್​ ಅವರು ಲೀನವಾಗಿರುವ ಅಭಿಮಾನ್​ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕೆಂಬುದು ಅಭಿಮಾನಿಗಳ ಕನಸಾಗಿದೆ. ಆದರೆ, ಇಲ್ಲಿಯೂ ಕೂಡ ವಿವಾದ ಕೋರ್ಟ್​ ಅಂಗಳದಲ್ಲಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆಸಿದೆ. ಆದರೆ ಇದುವರೆಗೂ ಬೆಳವಣಿಗೆ ಕಂಡುಬಂದಿಲ್ಲ.

    English summary
    Karnataka High Court has gives green signal to Dr. Vishnuvardhan Memorial in mysore. now, vishnu Memorial work starts in according to government plan.
    Saturday, April 13, 2019, 11:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X