ಯಶ್ ಬಾಡಿಗೆ ಮನೆ ಖಾಲಿ ಮಾಡಲು ಹೈಕೋರ್ಟ್ ಷರತ್ತುಬದ್ಧ ಆದೇಶ

By Bharath Kumar

Recommended Video

ಯಶ್ ಬಾಡಿಗೆ ಮನೆ ವಿವಾದ ಅಂತ್ಯ..! | Filmibeat Kannada

ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದಕ್ಕೆ ಅಂತ್ಯವಾಡಲು ಹೈಕೋರ್ಟ್ ನಿರ್ಧರಿಸಿದ್ದು, ಮನೆ ಖಾಲಿ ಮಾಡಲು ಆದೇಶ ನೀಡಿದೆ. ಯಶ್ ಬಾಡಿಗೆ ಮನೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಮನೆ ಖಾಲಿ ಮಾಡುವಂತೆ ಯಶ್ ಅವರ ತಾಯಿಗೆ ಷರತ್ತು ಬದ್ಧ ನಿರ್ದೇಶನ ನೀಡಿದೆ.

ಡಿಸೆಂಬರ್ ತಿಂಗಳೊಳಗೆ ಬಾಕಿ ಬಾಡಿಗೆ ಹಣ ಪಾವತಿಸಲು ಆದೇಶ ನೀಡಿದ್ದು, ಬಾಕಿ ಉಳಿಸಿಕೊಂಡ ಒಟ್ಟು ಬಾಡಿಗೆ 23,27,283 ರೂಪಾಯಿ ನೀಡಬೇಕಾಗಿದೆ. ಈ ಬಾಕಿ ಹಣ ಪಾವತಿಸಿದರೆ ಮಾರ್ಚ್ ವರೆಗೂ ಕಾಲಾವಕಾಶ ನೀಡಲಾಗುತ್ತೆ ಎಂದು ಕೋರ್ಟ್ ತಿಳಿಸಿದೆ.

high court orders actor yash to pay rental dues

ಕತ್ತರಿಗುಪ್ಪೆಯಲ್ಲಿರುವ ಯಶ್ ಮನೆಯ ಮಾಲೀಕ ಮುನಿಪ್ರಸಾದ್ ಅವರು ಮನೆ ಖಾಲಿ ಮಾಡಿಸುವಂತೆ ಕೋರ್ಟ್ ಗೆ ದಾವೆ ಹೂಡಿದ್ದರು. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಯಶ್ ಅವರ ತಾಯಿಗೆ 3 ತಿಂಗಳು ಕಾಲಾವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಯಶ್ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈ ಕೋರ್ಟ್ ನಿಂದ ಆದೇಶ ಹೊರಬಂದಿದೆ.

2010ರ ಅಕ್ಟೋಬರ್ 16 ರಿಂದ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಂ.755, 5 ನೇ ಕ್ರಾಸ್, 3 ನೇ ಬ್ಲಾಕ್, 3 ನೇ ಹಂತ, ಬನಶಂಕರಿಯಲ್ಲಿರುವ ನಿವಾಸದಲ್ಲಿ 2010 ರಿಂದ ನಟ ಯಶ್ ಮತ್ತು ಕುಟುಂಬ ಬಾಡಿಗೆಗೆ ವಾಸವಾಗಿದ್ದರು.

More from Filmibeat

English summary
Bengaluru high court orders actor yash to pay rental dues and vacate the house at kathriguppe within december month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X