ನನ್ನದಲ್ಲದ ತಪ್ಪಿಗೆ ನರಕಯಾತನೆ ಅನುಭವಿಸಿದೆ ಎಂದು ಗಳಗಳ ಅತ್ತ 'ಸಂಜನಾ ಗಲ್ರಾನಿ'..!

ಗಂಡ-ಹೆಂಡ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು ಸಂಜನಾ ಗಲ್ರಾನಿ. ಆ ನಂತರ ಅತ್ಯಲ್ಪ ಅವಧಿಯಲ್ಲಿಯೇ ಹೆಸರು ಮಾಡಿ. ಕನ್ನಡವೂ ಸೇರಿದಂತೆ ತೆಲುಗು ಮತ್ತು ಮಲಯಾಳಂ ಸಿನಿಮಾಗಳನ್ನು ಮಾಡಿದವರು ಇವರು.

ಇಂಥ ಸಂಜನಾ ನಸೀಬು 2020ರಲ್ಲಿ ಕೈ ಕೊಟ್ಟಿತ್ತು. ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸಿದ್ದ ಡ್ರಗ್ಸ್ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದು ಆ ನಂತರ ಬಂಧನವೂ ಆಯಿತು. ಆ ನಂತರ ಹೆಚ್ಚು ಕಡಿಮೆ 82 ದಿನಗಳವರೆಗೆ ಸಂಜನಾ ಪರಪ್ಪನ ಅಗ್ರಹಾರದಿಂದ ಆಚೆ ಬಂದರು. ಇದೆಲ್ಲವೂ ನಡೆದು ಈಗ 04 ವರ್ಷಗಳಾಗುತ್ತಾ ಬಂದಿವೆ. ಈಗ ಸಂಜನಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ನ ಹೈಕೋರ್ಟ್ ರದ್ದು ಗೊಳಿಸಿದೆ. ಸಂಜನಾ ಮುಖದಲ್ಲಿ ನಗು ಅರಳಿದೆ. ಈ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಸಂಜನಾ ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಾನೇ ಭಾವುಕರಾಗಿದ್ದಾರೆ. ಕಣ್ಣೀರು ಹಾಕಿದ್ದಾರೆ.

high-court-quashes-fir-against-sanjjanaa-galrani-in-drugs-case-actress-reacts

ನನ್ನದಲ್ಲದ ತಪ್ಪಿಗೆ ನಾನು ಶಿಕ್ಷೆ ಅನುಭವಿಸಿದೆ ಎಂದಿರುವ ಸಂಜನಾ, ವ್ಯೆಯಕ್ತಿಕ ದ್ವೇಷಕ್ಕೆ ನಾನು ಬಲಿಯಾದೆ ಎಂದಿದ್ದಾರೆ. ಕೆಲವರು ನನ್ನ ಹೆಸರು ಬಳಸಿಕೊಂಡು ಮುಂದಕ್ಕೆ ಹೋಗುವ ಪ್ರಯತ್ನ ಮಾಡಿದರು. ಮಾತಲ್ಲಿ ಒಬ್ಬ ನನ್ನ ಹೆಸರು ಹೇಳಿದ ಎಂಬ ಕಾರಣಕ್ಕೆ ನನ್ನನ್ನೇ ಟಾರ್ಗೆಟ್ ಮಾಡಿದರು. ಹೀಗಾಗಿಯೇ ಇವತ್ತು ಈ ಕೇಸ್ ರದ್ದು ಆಗಿದೆ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ.

ಇನ್ನೂ ಸಂಜನಾ ಬಂಧನವಾದಾಗ ಅನೇಕರು ಸಂಜನಾ ಮನೆಯಲ್ಲಿ ಸಿಗಬಾರದ ಮಾದಕ ವಸ್ತುಗಳೆಲ್ಲ ಸಿಕ್ಕಿವೆ ಎಂದು ಮಾತನಾಡಿಕೊಂಡಿದ್ದರು. ಆದರೆ ವಾಸ್ತವದಲ್ಲಿ ನಮ್ಮ ನಮ್ಮ ಮನೆಯಲ್ಲಿ ಒಂದು ಬಿಯರ್ ಬಾಟಲ್ ಕೂಡ ಸಿಕ್ಕಿರಲಿಲ್ಲ. ಸಿಗರೇಟು ಸಿಕ್ಕಿರಲಿಲ್ಲ ಎಂದಿರುವ ಸಂಜನಾ ಆದರೂ ನನ್ನನ್ನ ವಿಕ್ಟಿಮ್ ಮಾಡಲಾಯ್ತು ಎಂದು ಕಣ್ಣೀರು ಹಾಕಿದ್ದಾರೆ

high-court-quashes-fir-against-sanjjanaa-galrani-in-drugs-case-actress-reacts


ನನ್ನ ಕಷ್ಟದ ಸಮಯದಲ್ಲಿ ಯಾರೂ ಬರಲಿಲ್ಲ. ಈಗ ನೆನಪಿಸಿಕೊಂಡರೂ ನೋವಾಗುತ್ತೆ ಎಂದಿರುವ ಸಂಜನಾ, ನಾನಂತೂ ಈ ಪ್ರಕರಣ ಆದ್ಮೇಲೆ ಸಾಕಷ್ಟು ನೋವು ಅನುಭವಿಸಿದೆ.ಅದು ಯಾವತ್ತೂ ಹೋಗಲ್ಲ ಎಂದಿದ್ದಾರೆ. ಇದೆಲ್ಲದರಿಂದ ನಾನು ಸಿನಿಮಾರಂಗದಲ್ಲಿ ಅವಕಾಶ ವಂಚಿತಳಾದೆ, ಯಾರ ಹತ್ರ ಆದರೂ ಸಂಭಾವನೆ ವಿಚಾರ ಮಾತನಾಡಿದ್ರೆ ನೀವು ಡ್ರಗ್ಸ್ ಕೇಸ್‌ನಲ್ಲಿ ಇದ್ರಿ ಅಲ್ವಾ ಎಂದು ಮಾತನಾಡುತ್ತಾರೆ ಎಂದು ನಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ ಸಂಜನಾ

ಇನ್ನೂ ವ್ಯೆಯಕ್ತಿಕ ಬದುಕಿನ ವಿಚಾರಕ್ಕೂ ಸಂಜನಾ ಈ ಹಿಂದೆ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಟ್ರೋಲ್ ಆಗ್ತಾನೇ ಇದ್ದಾರೆ. ಇದರಿಂದ ಕೂಡ ನೊಂದು ಬೆಂದು ಹೋಗಿರುವ ಸಂಜನಾ, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ನನ್ನನ್ನು ಜನ ಟ್ರೋಲ್ ಮಾಡಿದರು. ಕೆಟ್ಟದಾಗಿ ನಿಂದಿಸಿದರು ಎಂದಿದ್ದಾರೆ. ನನ್ನನ್ನು ಟ್ರೋಲ್ ಮಾಡಬೇಡಿ. ಒಂದು ಮೆಸೇಜ್, ಟ್ರೋಲ್‌ನಿಂದ ಏನಾಗುತ್ತೆ ಅನ್ನೋದಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣವೇ ಸಾಕ್ಷಿ ಎಂದು ಸಂಜನಾ ಮಾತನಾಡಿದ್ದಾರೆ. ಈಗ ಡ್ರಗ್ಸ್ ಪ್ರಕರಣದ ಬಗ್ಗೆ ಸತ್ಯ ಗೊತ್ತಾಗಿದೆ. ನನಗೆ ಈ ಬಗ್ಗೆ ನೆನಪು ಮಾಡ್ಕೊಂಡು ಮಾತಾಡೋಕೆ ಇಷ್ಟ ಇಲ್ಲ. ತಾಳ್ಮೆಯಿಂದ ಕಾದಿದ್ದಕ್ಕೆ ನ್ಯಾಯ ಸಿಕ್ಕಿದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಸಂಜನಾ ಗಲ್ರಾನಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X