For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಗೆ ಬಿಗ್ ರಿಲೀಫ್: ಅರೆಸ್ಟ್ ವಾರೆಂಟ್ ಗೆ ಹೈಕೋರ್ಟ್ ತಡೆ

  |
  ಕಿಚ್ಚ ಸುದೀಪ್‍ಗೆ ಸಿಗ್ತು ಬಿಗ್ ರಿಲೀಫ್ | FILMIBEAT KANNADA

  ನಟ ಕಿಚ್ಚ ಸುದೀಪ್ ವಿರುದ್ಧ ಚಿಕ್ಕಮಗಳೂರಿನ ಜೆಎಂಎಫ್ ಸಿ ನ್ಯಾಯಾಲಯ ಜಾರಿ ಮಾಡಿದ್ದ ಅರೆಸ್ಟ್ ವಾರೆಂಟ್ ಅನ್ನ ಹೈ ಕೋರ್ಟ್ ತಡೆ ಹಿಡಿದಿದೆ. ವಾರಸ್ದಾರ ಧಾರಾವಾಹಿಯ ಶೂಟಿಂಗ್ ಗಾಗಿ ಬಳಸಿದ್ದ ಮನೆ ಬಾಡಿಗೆ ಕಟ್ಟದ ಆರೋಪದ ಹಿನ್ನಲೆಯಲ್ಲಿ ಸುದೀಪ್ ಅವರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು.

  ಈ ಪ್ರಕರಣ ಕೈಗೆತ್ತಿಕೊಂಡ ಹೈ ಕೋರ್ಟ್ ವಿಚಾರಣೆಯನ್ನ ಏಪ್ರಿಲ್ 22ಕ್ಕೆ ಮುಂದೂಡಿದ್ದು, ಅಲ್ಲಿವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ದೀಪಕ್ ಮಯೂರ್ ಎಂಬುವವರು ಸುದೀಪ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜೆಎಂಎಫ್ ಸಿ ನ್ಯಾಯಾಲಯ ನಿನ್ನೆ (ಮಾರ್ಚ್ 26) ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಈಗ ಹೈಕೋರ್ಟ್ ತಡೆ ಹಿಡಿದಿದೆ.

  ಚಿಕ್ಕಮಗಳೂರು ಕೋರ್ಟ್ ನಿಂದ ಸುದೀಪ್ ಗೆ ಅರೆಸ್ಟ್ ವಾರೆಂಟ್ ಜಾರಿ

  ಘಟನೆ ಹಿನ್ನೆಲೆ

  ಕಿಚ್ಚ ಕ್ರಿಯೇಷನ್ಸ್ ನಲ್ಲಿ ವಾರಸ್ದಾರ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಶೂಟಿಂಗ್ ಗಾಗಿ ದೀಪಕ್ ಮಯೂರ್ ಪಟೇಲ್ ಅವರ ಮನೆ ಹಾಗೂ ತೋಟವನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ಶೂಟಿಂಗ್ ಸಮಯದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದ್ದು, ಹಾನಿಯಾದ ಹಿನ್ನೆಲೆಯಲ್ಲಿ ಒಟ್ಟು 1.50 ಕೋಟಿ ರೂ. ನಷ್ಟವಾಗಿದೆ.

  ಈ ಹಣವನ್ನು ನೀಡಬೇಕೆಂದು ದೀಪಕ್ ಮಯೂರ್ ಧಾರಾವಾಹಿ ನಿರ್ಮಾಣ ತಂಡಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಈ ಬೇಡಿಕೆಯನ್ನು ಸುದೀಪ್ ಕ್ರಿಯೇಷನ್ಸ್ ತಿರಸ್ಕರಿಸಿತ್ತು. ಹಾಗಾಗಿ ಸುದೀಪ್ ವಿರುದ್ಧ ದೀಪಕ್ ಮಯೂರ್ ದೂರು ದಾಖಲಿಸಿದ್ದರು.

  English summary
  After arrest warrant by JMFC court in Chikkamagalur, High Court stays the proceedings against kiccha sudeep. Case adjourned to April 22. Varasadara shooting related payment in question.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X