ಅಪ್ಪು ನಿರ್ಮಾಣದ 'ಕವಲುದಾರಿ' ರಿಮೇಕ್ ಗೆ ಹೆಚ್ಚಿದ ಬೇಡಿಕೆ
Recommended Video
'ಕವಲುದಾರಿ', ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಿಂದ ನಿರ್ಮಾಣವಾದ ಮೊದಲ ಸಿನಿಮಾ. ಸದ್ಯ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ 'ಕವಲುದಾರಿ' ನೋಡಿ ಪ್ರೇಕ್ಷಕರು ಮನ ಸೋತಿದ್ದರು. ಪಿ ಆರ್ ಕೆ ಸಂಸ್ಥೆಯಿಂದ ಬಂದ ಮೊದಲ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರತಂಡಕ್ಕೆ ಸಂತಸವಾಗಿದೆ.
ಸದ್ಯ 'ಕವಲುದಾರಿ'ಯ ರಿಮೇಕ್ ರೈಟ್ಸ್ ಗೆ ಭಾರಿ ಬೇಡಿಕೆ ಶುರುವಾಗಿದೆಯಂತೆ. ಮರ್ಡರ್ ಮಿಸ್ಟ್ರಿಯ 'ಕವಲುದಾರಿ' ಚಿತ್ರದಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದ ರಿಷಿ ಕೊಲೆಯನ್ನು ಭೇದಿಸುವ ಸಾಹಸಕ್ಕೆ ಕೈ ಹಾಕಿದ್ದರು. ಹಿರಿಯ ನಟ ಅನಂತ್ ನಾಗ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ.
ಹೊಸ ಕಾನ್ಸೆಪ್ಟ್ ನೊಂದಿಗೆ ಬಂದ 'ಕವಲುದಾರಿ'ಗೆ ಪರಭಾಷ ನಿರ್ಮಾಪಕರು ಫಿದಾ ಆಗಿದ್ದಾರಂತೆ. ಹಾಗಾಗಿ ಚಿತ್ರದ ರಿಮೇಕ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆಯಂತೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಿಂದ ಬೇಡಿಕೆ ಹೆಚ್ಚಾಗಿದೆಯಂತೆ. ಈಗಾಗಲೆ ಮಾತುಕತೆ ಹಂತದಲ್ಲಿದ್ದು ಸಧ್ಯದಲ್ಲೇ ರಿಮೇಕ್ ರೈಟ್ಸ್ ಸೇಲ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸದ್ಯ ಉತ್ತಮ ಪ್ರದರ್ಶನ ಕಾಣುತ್ತಿರುವ 'ಕವಲುದಾರಿ' ವಿದೇಶದಲ್ಲು ರಿಲೀಸ್ ಆಗಲು ಸಜ್ಜಾಗಿದೆ. ದುಬೈ, ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದಲ್ಲಿ ಕವಲುದಾರಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. 'ಕವಲುದಾರಿ' ಹೇಮಂತ್ ನಿರ್ದೇಶನದ ಸಿನಿಮಾ.


Click it and Unblock the Notifications











