For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಹೆಚ್ಚು ಸಂಭಾವನೆ ಗಳಿಸುವ ನಾಯಕರು

  By ಜೇಮ್ಸ್ ಮಾರ್ಟಿನ್
  |

  ದಕ್ಷಿಣ ಭಾರತ ಚಿತ್ರರಂಗವೆಂದರೆ ನಾಯಕ ನಟರದ್ದೇ ಮೇಲುಗೈ, ಚಿತ್ರದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ಇರುತ್ತೋ ಅದಕ್ಕಿಂತ ದುಪ್ಪಟ್ಟು ನಾಯಕ ನಟನ ಆಯ್ಕೆ ವಿಷಯದಲ್ಲಿ ನಿರ್ಮಾಪಕರು ಕಾಳಜಿ ವಹಿಸುತ್ತಾರೆ. ಏಕೆಂದರೆ, ಕಾಲಿವುಡ್, ಟಾಲಿವುಡ್, ಮಾಲಿವುಡ್ ಹಾಗೂ ನಮ್ಮ ಚಂದನವನದಲ್ಲಿ ನಾಯಕ ನಟರದ್ದೇ ದರ್ಬಾರ್. ಇಲ್ಲಿ ನಾಯಕ ಕೇವಲ ನಟನಷ್ಟೇ ಅಲ್ಲ ನಿಜ ಜೀವನದ ದೇವರಾಗಿರುತ್ತಾನೆ..

  ದಕ್ಷಿಣ ಭಾರತ ಚಿತ್ರರಂಗದ ಹೀರೋಗಳು ಅಭಿಮಾನಿಗಳ ಪಾಲಿನ ಅಣ್ಣನಾಗಿ ಬಾಂಧವ್ಯ ಬೆಸೆದುಕೊಂಡಿರುವುದರಿಂದ ಸಿನಿಮಾ ಎಂದರೆ ಹಬ್ಬದ ವಾತಾವರಣ ಎಲ್ಲಾ ರಾಜ್ಯಗಳಲ್ಲೂ ಕಂಡು ಬರುತ್ತದೆ. ಹೀರೋಗಳು ಕೂಡಾ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಚಿತ್ರದಿಂದ ಚಿತ್ರಕ್ಕೆ ಮ್ಯಾನರೀಸಂ ಬದಲಾಯಿಸುತ್ತಾ ಪ್ರೇಕ್ಷಕರನ್ನು ಸೆಳೆಯುತ್ತಿರುತ್ತಾರೆ. [ಅತಿ ಹೆಚ್ಚು ಸಂಭಾವನೆ ಎಣಿಸುವ ದಕ್ಷಿಣದ ನಟಿಯರು]

  ಅಭಿಮಾನಿಗಳ ಶ್ರೀರಕ್ಷೆ ಪಡೆದ ಹೀರೋಗಳ ಗಳಿಕೆ ಚಿತ್ರದ ನಿರ್ಮಾಣ ವೆಚ್ಚದಲ್ಲಿ ಶೇ 25 ರಿಂದ ಶೇ 50 ರಷ್ಟು ಪಾಲು ಪಡೆಯುತ್ತಾರೆ ಎಂದರೆ ಅಚ್ಚರಿಯಾದರೂ ನಂಬಲೇ ಬೇಕು. ಕೋಟಿಗಟ್ಟಲೇ ಹಣ ಗಳಿಸುವ ದಕ್ಷಿಣದ ನಾಯಕರು ಬಾಲಿವುಡ್ ಹೀರೋಗಳಿಗೆ ಸರಿಸಾಟಿಯಾಗಿ ನಿಲ್ಲುತ್ತಿದ್ದಾರೆ. ಸಿನಿರಂಗದಲ್ಲಿ ಕೋಟಿ ಗಳಿಕೆ ಹೊಂದಿರುವ ತಾರೆಯರ ಸಂಭಾವನೆ ವಿವರ ನಿಮ್ಮ ಮುಂದಿದೆ.

  ಸೂಪರ್ ಸ್ಟಾರ್ ರಜನಿಕಾಂತ್

  ಸೂಪರ್ ಸ್ಟಾರ್ ರಜನಿಕಾಂತ್

  ಸೂಪರ್ ಸ್ಟಾರ್ ರಜನಿಕಾಂತ್ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಜನಪ್ರಿಯ ನಾಯಕ ನಟ. ಕಾಲಿವುಡ್ ನ ಸ್ಟಾರ್ ಚಿತ್ರವೊಂದಕ್ಕೆ ಸುಮಾರು 30 ಕೋಟಿ ರು ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ಬಹುಭಾಷಾ ಚಿತ್ರ ಕೊಚ್ಚಡಿಯಾನ್ ಗೆ ರಜನಿ ಪಡೆದ ಮೊತ್ತ ಇದಾಗಿತ್ತು.

  ಸಕಲ ಕಲಾ ವಲ್ಲಭ ಕಮಲ್ ಹಾಸನ್

  ಸಕಲ ಕಲಾ ವಲ್ಲಭ ಕಮಲ್ ಹಾಸನ್

  ಸಕಲ ಕಲಾ ವಲ್ಲಭ ಕಮಲ್ ಹಾಸನ್ ಅವರು ಸಂಭಾವನೆ ವಿಚಾರದಲ್ಲಿ ರಜನಿ ನಂತರದ ಸ್ಥಾನದಲ್ಲಿದ್ದಾರೆ ಕಮಲ್ ಹಾಸನ್ ಅವರು ಸುಮಾರು 25 ಕೋಟಿ ರು ಪಡೆಯುತ್ತಾರೆ. ಬಹುಭಾಷಾ ಚಿತ್ರ ವಿಶ್ವರೂಪಂಗೆ ಕಮಲ್ ಅಷ್ಟು ಮೊತ್ತ ಪಡೆದುಕೊಂಡಿದ್ದರು.

  ಪವರ್ ಸ್ಟಾರ್ ಪವನ್ ಕಲ್ಯಾಣ್

  ಪವರ್ ಸ್ಟಾರ್ ಪವನ್ ಕಲ್ಯಾಣ್

  ಪವನ್ ಕಲ್ಯಾಣ್ ಅವರು ಸುಮಾರು 18 ಕೋಟಿ ರು ಪಡೆಯುತ್ತಾರೆ ಎಂಬ ಸುದ್ದಿಯಿದೆ. ಗಬ್ಬರ್ ಸಿಂಗ್ 2 ಚಿತ್ರಕ್ಕಾಗಿ ಅಷ್ಟು ಗಳಿಸಿದ್ದಾರೆ. ಗಬ್ಬರ್ ಸಿಂಗ್ ಚಿತ್ರದ ಎರಡನೇ ಭಾಗ ಇದಾಗಿದ್ದು, ಪವನ್ ಸಂಭಾವಣೆ ಗ್ರಾಫ್ ಏರಿಕೆಯಾದರೂ ಅಚ್ಚರಿಯೇನಿಲ್ಲ ಎಂದು ಟಾಲಿವುಡ್ ಮೂಲಗಳು ಹೇಳಿವೆ.

  ಇಳಯ ದಳಪತಿ ವಿಜಯ್

  ಇಳಯ ದಳಪತಿ ವಿಜಯ್

  ಇಳಯ ದಳಪತಿ ವಿಜಯ್ ಅವರು ವೇಲಾಯುಧನ್ ಯಶಸ್ಸಿನ ನಂತರ ಮತ್ತೊಮ್ಮೆ ಟ್ರ್ಯಾಕ್ ಗೆ ಮರಳಿರುವ ಕಾಲಿವುಡ್ ನಟ ವಿಜಯ್ ಅವರು ಕೂಡಾ ಚಿತ್ರವೊಂದಕ್ಕೆ 18 ಕೋಟಿ ರು ಗಳಿಸುತ್ತಿದ್ದಾರೆ.

  ಕಾಲಿವುಡ್ ಸ್ಟಾರ್ ಸೂರ್ಯ

  ಕಾಲಿವುಡ್ ಸ್ಟಾರ್ ಸೂರ್ಯ

  ಸಿಂಗಮ್ ಯಶಸ್ಸಿನ ನಂತರ ಸೂರ್ಯ ಮತ್ತೊಮ್ಮೆ ಎಂದಿನ ಲಯಕ್ಕೆ ಮರಳಿದರೂ ಮಿಕ್ಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಆದರೂ, ಚಿತ್ರವೊಂದಕ್ಕೆ ಸೂರ್ಯ 18 ಕೋಟಿ ರು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

  ಅಭಿಮಾನಿಗಳ ಆಪ್ತ ಅಜಿತ್ ಕುಮಾರ್

  ಅಭಿಮಾನಿಗಳ ಆಪ್ತ ಅಜಿತ್ ಕುಮಾರ್

  ಅಭಿಮಾನಿಗಳ ಆಪ್ತ ನಟ ಎನಿಸಿರುವ ಅಜಿತ್ ಕುಮಾರ್ ವರ್ಷಕ್ಕೊಂದು ಚಿತ್ರ ಮಾಡಿದರೆ ಹೆಚ್ಚು. ಆದರೆ, ಅಜಿತ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವುದಕ್ಕೆ ಅಭಿಮಾನಿಗಳ ಶ್ರೀರಕ್ಷೆಯೇ ಕಾರಣ. ಅಜಿತ್ ಕುಮಾರ್ ಅವರು ಸುಮಾರು 18 ಕೋಟಿ ರು ಪಡೆಯುತ್ತಾರೆ.

  ಪ್ರಿನ್ಸ್ ಮಹೇಶ್ ಬಾಬು

  ಪ್ರಿನ್ಸ್ ಮಹೇಶ್ ಬಾಬು

  ಟಾಲಿವುಡ್ ನ ಅತಿ ಹೆಚ್ಚು ಜನಪ್ರಿಯ ನಟ ಹಾಗೂ ಸಂಭಾವನೆ ವಿಷಯದಲ್ಲಿ ಎರಡನೇ ಸ್ಥಾನದಲ್ಲಿರುವ ಮಹೇಶ್ ಬಾಬು ಅವರು ಚಿತ್ರವೊಂದಕ್ಕೆ 16 ಕೋಟಿ ರು ಗಳಿಸುತ್ತ್ತಿದ್ದಾರೆ. ಸದ್ಯಕ್ಕೆ ಆಗಡು ಚಿತ್ರದ ಟ್ರೇಲರ್ ಭರ್ಜರಿ ಯಶಸ್ಸು ಕಂಡಿದೆ.

  ಜ್ಯೂನಿಯರ್ ಎನ್ಟಿಆರ್

  ಜ್ಯೂನಿಯರ್ ಎನ್ಟಿಆರ್

  ಜ್ಯೂನಿಯರ್ ಎನ್ಟಿಆರ್ ಟಾಲಿವುಡ್ ನಲ್ಲಿ ಮೂರನೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟ ಎನಿಸಿದ್ದಾರೆ. ಜ್ಯೂ. ಎನ್ಟಿಆರ್ ಅವರ ಮುಂಬರುವ ರಭಸ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹೊಂದಲಾಗಿದೆ. ಚಿತ್ರವೊಂದಕ್ಕೆ ಸುಮಾರು 14 ಕೋಟಿ ರು ಪಡೆಯುತ್ತಾರೆ.

  ವೈವಿಧ್ಯಮಯ ನಟ ವಿಕ್ರಮ್

  ವೈವಿಧ್ಯಮಯ ನಟ ವಿಕ್ರಮ್

  ವೈವಿಧ್ಯಮಯ ನಟ ವಿಕ್ರಮ್ ಅವರು ಕ್ಲಾಸ್ ಹಾಗೂ ಮಾಸ್ ಎರಡು ಬಗೆಯ ಪ್ರೇಕ್ಷಕರ ಮೆಚ್ಚುಗೆ ಪಡೆದ ನಟ. ಇತ್ತೀಚಿಗೆ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಅವರ AI ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. ಈ ಚಿತ್ರಕ್ಕಾಗಿ ಸುಮಾರು 12 ಕೋಟಿ ರು ಸಂಭಾವನೆ ಪಡೆದುಕೊಂಡಿದ್ದಾರೆ.

  ರಾಮ್ ಚರಣ್ ತೇಜ

  ರಾಮ್ ಚರಣ್ ತೇಜ

  ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರ ಗಳಿಕೆ ಗ್ರಾಫ್ ಆರಕ್ಕೇರದೆ ಮೂರಕ್ಕಿಳಿಯದೆ ಉಳಿದುಕೊಂಡಿದೆ. ಮೆಗಾ ಸ್ಟಾರ್ ಫ್ಯಾಮಿಲಿ ಅಭಿಮಾನಿಗಳ ಶ್ರೀರಕ್ಷೆಯಿಂದ ರಾಮ್ ಚರಣ್ ಅವರು ಗೋವಿಂದುಡು ಅಂದಿರಿವಾಡೆಲೆ ಚಿತ್ರಕ್ಕಾಗಿ 12 ಕೋಟಿ ರು ಗಳಿಸಿದ್ದಾರೆ.

  ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್

  ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್

  ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಸುಮಾರು 10 ಕೋಟಿ ರು ಸಂಭಾವನೆ ಗಳಿಸುತ್ತಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದೆನಿಸಿದೆ.

  ಸ್ಟೈಲಿಷ್ ನಟ ಅಲ್ಲು ಅರ್ಜುನ್

  ಸ್ಟೈಲಿಷ್ ನಟ ಅಲ್ಲು ಅರ್ಜುನ್

  ಸ್ಟೈಲಿಷ್ ನಟ ಅಲ್ಲು ಅರ್ಜುನ್ ಅವರು ಚಿತ್ರವೊಂದಕ್ಕೆ ಸುಮಾರು 10 ಕೋಟಿ ರು ಪಡೆಯುತ್ತಾರೆ. ರೇಸ್ ಗುರ್ರಂ ಚಿತ್ರದ ಯಶಸ್ಸಿನಿಂದ ಅರ್ಜುನ್ ಸಂಭಾವನೆ ಏರಿಕೆ ಕಾಣುವ ಸಾಧ್ಯತೆಯಿದೆ.

  ಸೂಪರ್ ಸ್ಟಾರ್ ಅಳಿಯ ಧನುಷ್

  ಸೂಪರ್ ಸ್ಟಾರ್ ಅಳಿಯ ಧನುಷ್

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ಕಾಲಿವುಡ್ ಅಲ್ಲದೆ ಬಾಲಿವುಡ್ ಗೂ ಎಂಟ್ರಿ ಕೊಟ್ಟು ಯಶಸ್ವಿಯಾಗಿದ್ದರು. ಆದರೆ, ಹೆಚ್ಚಿನ ಲಾಭ ಗಳಿಕೆ ಆಗಲಿಲ್ಲ. ಸದ್ಯಕ್ಕೆ 8 ಕೋಟಿ ರು ಸಂಭಾವನೆ ಗಳಿಸುತ್ತಿದ್ದಾರೆ.

  ಜ್ಯೂ. ಸೂಪರ್ ಸ್ಟಾರ್ ಸಿಂಬು

  ಜ್ಯೂ. ಸೂಪರ್ ಸ್ಟಾರ್ ಸಿಂಬು

  ಜ್ಯೂ. ಸೂಪರ್ ಸ್ಟಾರ್ ಎಂದೇ ತಮಿಳು ಚಿತ್ರರಂಗದಲ್ಲಿ ಬೆಳೆದ ಸಿಲಂಬರಸನ್ ಅಲಿಯಾಸ್ ಸಿಂಬು ಅವರು ಎಂಗಾ ಎನ್ನ ಸೊಲ್ಲುದು, ವಾಲು, ಕಾಕಾ ಮುಟ್ಟೈ, ಇದು ನಮ್ಮ ಆಳು, ಸಟ್ಟೆಂಡ್ರು ಮಾರುಥು ವಾನಿಲೈ ಮುಂತಾದ ಚಿತ್ರಗಳ ಸರಣಿ ಹೊಂದಿದ್ದು ಬೇಡಿಕೆ ಉಳಿಸಿಕೊಂಡಿದ್ದಾರೆ. ಸಿಂಬು ಚಿತ್ರವೊಂದಕ್ಕೆ 8 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ.

  ಕಾಲಿವುಡ್, ಟಾಲಿವುಡ್ ಸ್ಟಾರ್ ಕಾರ್ತಿ

  ಕಾಲಿವುಡ್, ಟಾಲಿವುಡ್ ಸ್ಟಾರ್ ಕಾರ್ತಿ

  ಕಾಲಿವುಡ್, ಟಾಲಿವುಡ್ ಸ್ಟಾರ್ ಆಗಿ ಬೆಳೆಯುತ್ತಿರುವ ಸೂರ್ಯ ಅವರ ಸೋದರ ಕಾರ್ತಿಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶ ಎರಡೂ ಕಡೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಸರಣಿ ಫ್ಲಾಪ್ ಗಳ ನಡುವೆಯೂ ಈತ ಚಿತ್ರವೊಂದಕ್ಕೆ 8 ಕೋಟಿ ಪಡೆದುಕೊಳ್ಳುತ್ತಿದ್ದಾರೆ.

  ಮಾಸ್ ಹೀರೋ ರವಿ ತೇಜ

  ಮಾಸ್ ಹೀರೋ ರವಿ ತೇಜ

  ತೆಲುಗು ಚಿತ್ರರಂಗದಲ್ಲಿ ಸಹನಟ, ಸಹಾಯಕ ನಿರ್ದೇಶಕ ನಾಗಿ ಬೆಳೆದ ರವಿತೇಜ ಈಗ ಅಭಿಮಾನಿಗಳ ನೆಚ್ಚಿನ ಮಾಸ್ ಹೀರೋ. ಪವರ್ ಹೆಸರಿನ ಮುಂಬರುವ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದು ಈ ಚಿತ್ರಕ್ಕಾಗಿ 7 ಕೋಟಿ ರು ಪಡೆದುಕೊಂಡಿದ್ದಾರೆ.

  ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್

  ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್

  ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಸದ್ದು ಮಾಡಿದ್ದರೂ ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬಾಹುಬಾಲಿ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಸುದೀಪ್ ಅವರು ಇತ್ತೀಚೆಗೆ ತಮಿಳು ಚಿತ್ರವೊಂದಕ್ಕೆ 6 ಕೋಟಿ ರು ಪಡೆಯುವ ಮೂಲಕ ಕನ್ನಡ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿದ್ದಾರೆ.

  ನಂದಮೂರಿ ಬಾಲಕೃಷ್ಣ

  ನಂದಮೂರಿ ಬಾಲಕೃಷ್ಣ

  ನಂದಮೂರಿ ಬಾಲಕೃಷ್ಣ ಅವರು ಲೆಜೆಂಡ್ ಚಿತ್ರದ ಯಶಸ್ಸಿನ ನಂತರ 6 ಕೋಟಿ ರು ಸಂಭಾವನೆ ಪಡೆದುಕೊಂಡಿದ್ದಾರೆ.

  ಅಕ್ಕಿನೇನಿ ನಾಗಾರ್ಜುನ ಸಂಭಾವನೆ

  ಅಕ್ಕಿನೇನಿ ನಾಗಾರ್ಜುನ ಸಂಭಾವನೆ

  ಮನಂ ಚಿತ್ರದ ಉತ್ತಮ ಓಪನಿಂಗ್ ನಿಂದ ಸಂತಸದಲ್ಲಿರುವ ಅಕ್ಕಿನೇನಿ ನಾಗಾರ್ಜುನ ಸಂಭಾವನೆ 6 ಕೋಟಿ ರು ದಾಟುತ್ತದೆ.

  ವಿಕ್ಟರಿ ವೆಂಕಟೇಶ್ ಸಂಭಾವನೆ

  ವಿಕ್ಟರಿ ವೆಂಕಟೇಶ್ ಸಂಭಾವನೆ

  ತೆಲುಗು ಚಿತ್ರರಂಗದ ಕೌಟುಂಬಿಕ ಚಿತ್ರಗಳ ಸರದಾರ ಎನಿಸಿರುವ ವಿಕ್ಟರಿ ವೆಂಕಟೇಶ್ ಅವರ ಸಂಭಾವನೆ ಚಿತ್ರವೊಂದಕ್ಕೆ 6 ಕೋಟಿ ರು ನಷ್ಟಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಾಯಕ ನಟರಾಗಿದ್ದು, ಚಿತ್ರವೊಂದಕ್ಕೆ 5.5 ಕೋಟಿ ರು.ಗೂ ಅಧಿಕ ಮೊತ್ತ ಪಡೆಯುತ್ತಿದ್ದಾರೆ.

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿತ್ರವೊಂದಕ್ಕೆ ಸುಮಾರು 5 ಕೋಟಿ ರು ಸಂಭಾವನೆ ಪಡೆಯುತ್ತಿದ್ದಾರೆ.

  ಕಾಲಿವುಡ್ ನ ಆರ್ಯ

  ಕಾಲಿವುಡ್ ನ ಆರ್ಯ

  ಕಾಲಿವುಡ್ ನ ನಟ ಆರ್ಯ 'ರಾಜ ರಾಣಿ' ತಮಿಳು ಚಿತ್ರದ ಯಶಸ್ಸಿನ ನಂತರ ಚಿತ್ರವೊಂದಕ್ಕೆ 5 ಕೋಟಿ ರು ಗಳಿಸುತ್ತಿದ್ದಾರೆ.

  ನಟ ವಿಶಾಲ್

  ನಟ ವಿಶಾಲ್

  ನಟ ವಿಶಾಲ್ ಅವರು ತಮಿಳು ಚಿತ್ರರಂಗದಲ್ಲಿ ಚಿತ್ರವೊಂದಕ್ಕೆ 5 ಕೋಟಿ ರು ಗಳಿಸುತ್ತಿದ್ದಾರೆ.

  ರಿಯಲ್ ಸ್ಟಾರ್ ಉಪೇಂದ್ರ

  ರಿಯಲ್ ಸ್ಟಾರ್ ಉಪೇಂದ್ರ

  ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದು ನಟನಾಗಿ ಬೆಳೆದವರು, ಕಾಲಿವುಡ್, ಟಾಲಿವುಡ್ ನಲ್ಲೂ ಸಂಚಲನ ಮೂಡಿಸಿದವರು. ಚಿತ್ರವೊಂದಕ್ಕೆ 4 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ.

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ರಿಮೇಕ್ ಚಿತ್ರಗಳಲ್ಲಿ ನಟಿಸದೇ ಬರಿ ಸ್ವಮೇಕ್ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾ ಚಿತ್ರವೊಂದಕ್ಕೆ 3.5 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ.

  ತಮಿಳು ನಟ ಜೀವಾ

  ತಮಿಳು ನಟ ಜೀವಾ

  ತಮಿಳು ನಟ ಜೀವಾ ಅವರು ಚಿತ್ರವೊಂದಕ್ಕೆ 3 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

  ತೆಲುಗು ನಟ ನಿತಿನ್ ರೆಡ್ಡಿ

  ತೆಲುಗು ನಟ ನಿತಿನ್ ರೆಡ್ಡಿ

  ತೆಲುಗು ನಟ ನಿತಿನ್ ರೆಡ್ಡಿ ಅವರು ಕೂಡಾ ಚಿತ್ರವೊಂದಕ್ಕೆ ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ನಿತಿನ್ ಅವರ ಕೊರಿಯರ್ ಬಾಯ್ ಕಲ್ಯಾಣ್ ಚಿತ್ರ ನಿರೀಕ್ಷೆ ಹುಟ್ಟಿಸಿದೆ.

  ಸ್ಟಾರ್ ನಟ ಪುತ್ರ ನಾಗ ಚೈತನ್ಯ

  ಸ್ಟಾರ್ ನಟ ಪುತ್ರ ನಾಗ ಚೈತನ್ಯ

  ಸ್ಟಾರ್ ನಟ ಪುತ್ರ ನಾಗ ಚೈತನ್ಯ ಅವರ 'ಅಟೋನಗರ್ ಸೂರ್ಯ' ಚಿತ್ರಕ್ಕಾಗಿ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದಾರೆ. ಕಿಂಗ್ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಚಿತ್ರವೊಂದಕ್ಕೆ 2.5 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ.

  ಕನ್ನಡದ ಯಶಸ್ವಿ ನಟ ಯಶ್

  ಕನ್ನಡದ ಯಶಸ್ವಿ ನಟ ಯಶ್

  ಕನ್ನಡದ ಯಶಸ್ವಿ ನಟ ಯಶ್ ಅವರು ಸರಣಿ ಹಿಟ್ ಚಿತ್ರಗಳನ್ನು ನೀಡುವ ಮೂಲಕ ತಮ್ಮ ಸಂಭಾವನೆ ಮೊತ್ತವನ್ನು ಏರಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಈಗಿನ ಸಂಭಾವನೆ ರೇಟ್ 2.5 ಕೋಟಿ ರು.

  ಈಗ ಚಿತ್ರದ ನಟ ನಾನಿ

  ಈಗ ಚಿತ್ರದ ನಟ ನಾನಿ

  ಈಗ ಚಿತ್ರದ ನಟ ನಾನಿ ಅವರು ಇತ್ತೀಚೆಗೆ ಬಿಡುಗಡೆಯಾದ ಪೈಸಾ ಚಿತ್ರಕ್ಕಾಗಿ 2.5 ಕೋಟಿ ರು ಪಡೆದುಕೊಂಡಿದ್ದರು.

  ತೆಲುಗಿನ ವೈರಟಿ ನಟ ಅಲ್ಲರಿ ನರೇಶ್

  ತೆಲುಗಿನ ವೈರಟಿ ನಟ ಅಲ್ಲರಿ ನರೇಶ್

  ತೆಲುಗಿನ ವೈರಟಿ ನಟ ಅಲ್ಲರಿ ನರೇಶ್ ಅವರು ಆಕ್ಷನ್ 3D ಚಿತ್ರಕ್ಕಾಗಿ 2.5 ಕೋಟಿ ರು ಪಡೆದುಕೊಂಡಿದ್ದರು.

  ತೆಲುಗು ನಾಯಕ ನಟ ಗೋಪಿಚಂದ್

  ತೆಲುಗು ನಾಯಕ ನಟ ಗೋಪಿಚಂದ್

  ತೆಲುಗು ಚಿತ್ರರಂಗದಲ್ಲಿ ಖಳನಟನಾಗಿ ನಂತರ ನಾಯಕ ಪಟ್ಟಕ್ಕೇರಿದ ಗೋಪಿಚಂದ್ ಸಂಭಾವನೆ ರೇಟ್ 2 ಕೋಟಿ ರು.

  ದುನಿಯಾ ವಿಜಯ್ ಸಂಭಾವನೆ

  ದುನಿಯಾ ವಿಜಯ್ ಸಂಭಾವನೆ

  ದುನಿಯಾ ವಿಜಯ್ ಸಂಭಾವನೆ ಚಿತ್ರದಿಂದ ಚಿತ್ರಕ್ಕೆ ಏರುಪೇರಾದರೂ ಸುಮಾರು 2 ಕೋಟಿ ರು ಸಂಭಾವನೆ ಪಡೆಯುತ್ತಿರುವ ಸುದ್ದಿ ಸಿಕ್ಕಿದೆ.

  ಸೂಪರ್ ಸ್ಟಾರ್ ಮೋಹನ್ ಲಾಲ್

  ಸೂಪರ್ ಸ್ಟಾರ್ ಮೋಹನ್ ಲಾಲ್

  ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು 1.5 ಕೋಟಿ ರು ಗಳಿಸಿದ್ದಾರೆ.

  ಮಲೆಯಾಳಂ ನಟ ಮಮ್ಮೂಟಿ

  ಮಲೆಯಾಳಂ ನಟ ಮಮ್ಮೂಟಿ

  ಮಲೆಯಾಳಂ ನಟ ಮಮ್ಮೂಟಿ ಅವರು ಚಿತ್ರವೊಂದಕ್ಕೆ 1.5 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ.

  ಕಾಮಿಡಿ ಸ್ಟಾರ್ ನಾಯಕ ನಟ ಸುನಿಲ್

  ಕಾಮಿಡಿ ಸ್ಟಾರ್ ನಾಯಕ ನಟ ಸುನಿಲ್

  ಕಾಮಿಡಿ ಸ್ಟಾರ್ ಆಗಿದ್ದ ಸುನಿಲ್ ಅವರು ನಾಯಕ ನಟನಾಗಿ ಬೆಳೆದಿದ್ದು ತಡಖ ಚಿತ್ರಕ್ಕಾಗಿ 1.5 ಕೋಟಿ ರು ಸಂಭಾವನೆ ಗಳಿಸಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್

  ಗೋಲ್ಡನ್ ಸ್ಟಾರ್ ಗಣೇಶ್

  ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಚಿತ್ರವೊಂದಕ್ಕೆ 1.50 ಕೋಟಿ ರು ಪಡೆದುಕೊಳ್ಳುತ್ತಿದ್ದಾರೆ. ರೋಮಿಯೋ, ಶ್ರಾವಣಿ ಸುಬ್ರಮಣ್ಯ ಗಲ್ಲಾಪೆಟ್ಟಿಗೆಯಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿದ್ದು ಗಣೇಶ್ ಗೆ ಮತ್ತೆ ಲಾಭ ತಂದಿದೆ.

  ಮಲಯಾಳಂನ ಪೃಥ್ವಿರಾಜ್

  ಮಲಯಾಳಂನ ಪೃಥ್ವಿರಾಜ್

  ಮಲಯಾಳಂನ ಪೃಥ್ವಿರಾಜ್ ಅವರು ಚಿತ್ರವೊಂದಕ್ಕೆ 1 ಕೋಟಿ ರು ಸಂಭಾವನೆ ಪಡೆಯುತ್ತಾರೆ.

  ದೂಧ್ ಪೇಡ ದಿಗಂತ್

  ದೂಧ್ ಪೇಡ ದಿಗಂತ್

  ಕನ್ನಡದ ದೂಧ್ ಪೇಡ ದಿಗಂತ್ ಅವರು ಇತ್ತೀಚೆಗೆ ಬಾಲಿವುಡ್ ನಲ್ಲೂ ಚಾನ್ಸ್ ಗಿಟ್ಟಿಸಿಕೊಂಡಿದ್ದು, ಚಿತ್ರವೊಂದಕ್ಕೆ ಈಗ 1 ಕೋಟಿ ರು ತನಕ ಸಂಭಾವನೆ ಪಡೆಯುತ್ತ್ತಿದ್ದಾರೆ.

  English summary
  Film heroes in South India are treated as demi gods on the earth and heroism plays a dominant role in the success of a film. The business of a movie always depends on the power and popularity of its lead actor. So the heroes take away at least 25% to 50% of production cost of a film as their remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X