twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಿವರು!

    |

    Recommended Video

    ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಯ್ತು ಯುವ ಗಾಯಕರ ಸಂಖ್ಯೆ | Sandalwood | Songers | Filmibeat Kannada

    ಒಂದು ಚಿತ್ರಕ್ಕೆ ಒಬ್ಬ ನಟ ಎಷ್ಟು ಸಂಭಾವನೆ ಪಡೆಯುತ್ತಾರೆ, ಒಬ್ಬ ನಟಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲದಂತೆ ಒಂದು ಹಾಡಿಗೆ ಒಬ್ಬ ಗಾಯಕ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ.

    ಸದ್ಯ ಇಂಡಸ್ಟ್ರಿಯಲ್ಲಿ ಯುವ ಗಾಯಕರು ಹೆಚ್ಚಾಗಿದ್ದಾರೆ. ಕೆಲವರಿಗೆ ಬೇಡಿಕೆ ಹೆಚ್ಚಿದೆ ಸಂಭಾವನೆ ಕಮ್ಮಿ ಇದೆ. ಇನ್ನು ಕೆಲವರಿಗೆ ಸಂಭಾವನೆ ಹೆಚ್ಚಿದೆ, ಹಾಡುಗಳ ಸಂಖ್ಯೆ ಕಮ್ಮಿ ಇದೆ.

    ಸ್ಟಾರ್ ನಟರು ಕಡಿಮೆ ಚಿತ್ರ ಮಾಡೋದರಿಂದ ಲಾಭಕ್ಕಿಂತ ನಷ್ಟ ಹೆಚ್ಚು!ಸ್ಟಾರ್ ನಟರು ಕಡಿಮೆ ಚಿತ್ರ ಮಾಡೋದರಿಂದ ಲಾಭಕ್ಕಿಂತ ನಷ್ಟ ಹೆಚ್ಚು!

    ಹಾಗಿದ್ರೆ, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಯಾರಿರಬಹುದು? ಯಾವ ಗಾಯಕರಿಗೆ ಹೆಚ್ಚು ಬೇಡಿಕೆ ಇದೆ?

    ವಿಜಯ್ ಪ್ರಕಾಶ್ ಸಂಭಾವನೆ ಎಷ್ಟು?

    ವಿಜಯ್ ಪ್ರಕಾಶ್ ಸಂಭಾವನೆ ಎಷ್ಟು?

    ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಗಾಯಕ ವಿಜಯ್ ಪ್ರಕಾಶ್. ಸ್ಟಾರ್ ನಟರ ನೆಚ್ಚಿನ ಗಾಯಕ. 2018ರ ಸಾಲಿನಲ್ಲಿ ಸುಮಾರು 50ಕ್ಕೂ ಅಧಿಕ ಹಾಡು ಹಾಡಿದ್ದ ವಿಜಯ್ ಪ್ರಕಾಶ್, 2019ನೇ ಸಾಲಿನಲ್ಲಿ ಹತ್ತು ಹಾಡು ಹಾಡಿದ್ದಾರೆ ಎನ್ನಲಾಗಿದೆ. ಗಾಂಧಿನಗರದ ಟಾಕ್ ಪ್ರಕಾರ, ವಿಜಯ್ ಪ್ರಕಾಶ್ ಒಂದು ಹಾಡಿಗೆ ಒಂದು ಲಕ್ಷ ಚಾರ್ಜ್ ಮಾಡ್ತಾರಂತೆ.

    ರಾಜೇಶ್ ಕೃಷ್ಣನ್ ಸಂಭಾವನೆ ಹೆಚ್ಚಿದೆ

    ರಾಜೇಶ್ ಕೃಷ್ಣನ್ ಸಂಭಾವನೆ ಹೆಚ್ಚಿದೆ

    ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಈಗಿನ ಸಮಯದಲ್ಲಿ ಹಾಡೋದು ಕಮ್ಮಿ ಆಗಿದೆ. ಆದರೆ, ಬೇಡಿಕೆ ಮತ್ತು ಸಂಭಾವನೆ ಮಾತ್ರ ಕಡಿಮೆಯಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ, ಹಾಡೊಂದಕ್ಕೆ ಒಂದು ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

    ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಏಕೈಕ ನಟಿ ಬಗ್ಗೆ ನಿಮಗೆಷ್ಟು ಗೊತ್ತು.?ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಏಕೈಕ ನಟಿ ಬಗ್ಗೆ ನಿಮಗೆಷ್ಟು ಗೊತ್ತು.?

    ಸಂಚಿತ್ ಹೆಗ್ಡೆ

    ಸಂಚಿತ್ ಹೆಗ್ಡೆ

    ವಿಜಯ್ ಪ್ರಕಾಶ್ ನಂತರ ಸದ್ಯ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಗಾಯಕ ಸಂಚಿತ್ ಹೆಗ್ಡೆ. 2018ರಲ್ಲಿ 30ಕ್ಕೂ ಅಧಿಕ ಹಾಡು ಹಾಡಿದ್ದ ಸಂಚಿತ್, 2019ರಲ್ಲಿ 40ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಸಂಭಾವನೆ ವಿಚಾರದಲ್ಲಿ ಕಮ್ಮಿ ಇದ್ದರೂ ಬೇಡಿಕೆ ಮಾತ್ರ ಹೆಚ್ಚಿದೆ.

    ಹೇಮಂತ್

    ಹೇಮಂತ್

    ದರ್ಶನ್ ಅವರ ಬಹುತೇಕ ಸಿನಿಮಾಗಳಲ್ಲಿ ಹಾಡುವ ಗಾಯಕ ಹೇಮಂತ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಹೇಮಂತ್ ಅವರ ಗಾಯನಕ್ಕೂ ಬೇಡಿಕೆ ಹೆಚ್ಚಿದೆ. ಆದರೆ, ವರ್ಷವೊಂದರಲ್ಲಿ ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ರೀತಿ ತುಂಬಾ ಹಾಡುಗಳನ್ನು ಹಾಡುವುದಿಲ್ಲ.

    'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?

    ಅನುರಾಧ ಭಟ್

    ಅನುರಾಧ ಭಟ್

    ಗಾಯಕಿಯ ಪೈಕಿ ಅನುರಾಧ ಭಟ್ ಕನ್ನಡದ ಶ್ರೇಯಾ ಘೋಷಲ್ ಎನಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಪಾಲಿಗೆ ಬ್ಯುಸಿಯೆಸ್ಟ್ ಹಾಗೂ ಬೇಡಿಕೆಯ ಗಾಯಕಿ. 'ಅಪ್ಪ ಐ ಲವ್ ಯೂ' ಖ್ಯಾತಿಯ ಅನುರಾಧ್ ಭಟ್ ಗಾಯಕಿಯ ಪೈಕಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

    ಇಂದಿನ ಕಾಲದಲ್ಲಿ ನಿಜವಾಗಿಯೂ ಒಂದು ಸಿನಿಮಾ ಶತದಿನಗಳನ್ನು ಪೂರೈಸುತ್ತಾ?ಇಂದಿನ ಕಾಲದಲ್ಲಿ ನಿಜವಾಗಿಯೂ ಒಂದು ಸಿನಿಮಾ ಶತದಿನಗಳನ್ನು ಪೂರೈಸುತ್ತಾ?

    ಶಮಿತಾ ಮಲ್ನಾಡ್

    ಶಮಿತಾ ಮಲ್ನಾಡ್

    ಕನ್ನಡದ ಮತ್ತೊಬ್ಬ ಗಾಯಕಿ ಶಮಿತಾ ಮಲ್ನಾಡ್ ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ಬೇಡಿಕೆ ಹೊಂದಿದ್ದಾರೆ. ಶಮಿತಾ ಮಲ್ನಾಡ್ ಹಾಡಿದ್ದ Rambo ಚಿತ್ರದ 'ಚುಟು ಚುಟು' ಹಾಡು ದೊಡ್ಡ ಹಿಟ್ ಆಗಿತ್ತು. ಅಂದ್ಹಾಗೆ, ಗಾಯಕರ ವಿಚಾರದಲ್ಲಿ ಚಂದನವನದಲ್ಲೊಂದು ಟ್ರೆಂಡ್ ಇದೆ. ಗಾಯಕ ಅಥವಾ ಗಾಯಕಿಯ ಸಂಭಾವನೆ ವಿಚಾರದಲ್ಲಿ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಅನೇಕ ಗೀತೆಗಳನ್ನು ಯುವ ಪ್ರತಿಭೆಗಳಿಂದ ಸಂಗೀತ ನಿರ್ದೇಶಕರೇ ಹಾಡಿಸುತ್ತಾರೆ. ಇಲ್ಲಿ ಸಂಭಾವನೆ ಅನ್ನುವುದಕ್ಕಿಂತ ಅವಕಾಶ ನೀಡಿದ್ರು ಎಂಬುದೇ ವಿಶೇಷವೆನಿಸಿಕೊಳ್ಳುತ್ತೆ.

    English summary
    What is the remuneration of kannada singer vijay prakash, rajesh krishnan, sanchith hegde?
    Tuesday, February 11, 2020, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X