For Quick Alerts
  ALLOW NOTIFICATIONS  
  For Daily Alerts

  ಬುಕ್ ಮೈ ಶೋನಲ್ಲಿ ಮಹೇಶ್, ಅಲ್ಲು, ರಕ್ಷಿತ್, ರಜನಿಗಿಂತ ಹೆಚ್ಚು ರೇಟಿಂಗ್ ಸಿಕ್ಕಿದ್ದು ಆ ಚಿತ್ರಕ್ಕೆ!

  |

  ಸಂಕ್ರಾಂತಿ ಹಬ್ಬದ ವಿಶೇಷವಾಗಿ ಹಲವು ಸಿನಿಮಾಗಳು ಬಿಡುಗಡೆಯಾಗಿದೆ. ಕಳೆದ ಡಿಸೆಂಬರ್ ಅಂತ್ಯದಲ್ಲಿ ಅವನೇ ಶ್ರೀಮನ್ನಾರಾಯಣ ತೆರೆಕಂಡಿತ್ತು. ಕನ್ನಡದ ಮಟ್ಟಿಗೆ ಈ ಚಿತ್ರವೇ ಸಂಕ್ರಾಂತಿಗೂ ವಿಶೇಷ.

  ತಮಿಳಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ದರ್ಬಾರ್ ಬಂತು. ತೆಲುಗಿನಲ್ಲಿ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಹಾಗೂ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಂಲೊ ಚಿತ್ರಗಳು ರಿಲೀಸ್ ಆಗಿತ್ತು.

  ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್ಕಲೆಕ್ಷನ್ ನಲ್ಲಿ ಮಹೇಶ್ ಬಾಬು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದ ನಟ ಅಲ್ಲು ಅರ್ಜುನ್

  ದಕ್ಷಿಣ ಭಾರತ ಹಾಗೂ ವಿದೇಶಗಳಲ್ಲೂ ಸದ್ದು ಮಾಡುತ್ತಿರುವ ಈ ಚಿತ್ರಗಳಿಗಿಂತ ಇನ್ನೊಂದು ಚಿತ್ರಕ್ಕೆ ಬುಕ್ ಮೈ ಶೋನಲ್ಲಿ ಹೆಚ್ಚು ರೇಟಿಂಗ್ ಸಿಕ್ಕಿದೆ. ಮುಂದೆ ಓದಿ...

  ಅಲ್ಲು ಅರ್ಜುನ್ ಚಿತ್ರಕ್ಕೆ 85%

  ಅಲ್ಲು ಅರ್ಜುನ್ ಚಿತ್ರಕ್ಕೆ 85%

  ಜನವರಿ 12 ರಂದು ತೆರೆಕಂಡ ಅಲಾ ವೈಕುಂಠಪುರಂಲೊ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಒಂದು ವಾರದಲ್ಲಿ 100 ಕೋಟಿಗೂ ಅಧಿಕ ಬಿಸಿನೆಸ್ ಮಾಡಿರುವ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬುಕ್ ಮೈ ಶೋನಲ್ಲಿ 1,85,685 ಮತಗಳನ್ನು ಪಡೆದುಕೊಂಡಿರುವ ಈ ಚಿತ್ರಕ್ಕೆ 85% ರೇಟಿಂಗ್ ಸಿಕ್ಕಿದೆ.

  'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?'ಸರಿಲೇರು ನೀಕೆವ್ವರು' ಸಿನಿಮಾ ನೋಡಿ ರಶ್ಮಿಕಾ ತಂಗಿ ಹೇಳಿದ್ದೇನು?

  ಮಹೇಶ್ ಚಿತ್ರಕ್ಕೆ 80%

  ಮಹೇಶ್ ಚಿತ್ರಕ್ಕೆ 80%

  ಜನವರಿ 11 ರಂದು ತೆರೆಗೆ ಬಂದ ಸರಿಲೇರು ನೀಕೆವ್ವರು ಸಿನಿಮಾ ಕೂಡ ದೊಡ್ಡ ಹಿಟ್ ಆಗಿದೆ. ಈ ಚಿತ್ರವೂ ಒಂದು ವಾರದಲ್ಲಿ 100 ಕೋಟಿ ಗಳಿಕೆ ಕಂಡಿದೆ. ಬುಕ್ ಮೈ ಶೋನಲ್ಲಿ 1,95,776 ವೋಟ್ ಪಡೆದುಕೊಂಡಿರುವ ಈ ಚಿತ್ರಕ್ಕೆ 80% ರೇಟಿಂಗ್ ಲಭಿಸಿದೆ.

  'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!

  ರಕ್ಷಿತ್ ಶೆಟ್ಟಿ ಚಿತ್ರಕ್ಕೆ 86%

  ರಕ್ಷಿತ್ ಶೆಟ್ಟಿ ಚಿತ್ರಕ್ಕೆ 86%

  ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 86% ರೇಟಿಂಗ್ ಸಿಕ್ಕಿದೆ. ಆದರೆ, ಮತಗಳಿಗೆ ಹೋಲಿಸಿಕೊಂಡರೆ ಪರಭಾಷೆ ಚಿತ್ರಕ್ಕಿಂತ ಕಡಿಮೆ ಇದೆ. 84,598 ವೋಟ್ ಸಿಕ್ಕಿದೆ.

  ಹುಬ್ಬಳ್ಳಿಯಲ್ಲಿ ನಟ ರಕ್ಷಿತ್: ಸಿಂಪಲ್ ಸ್ಟಾರ್ ನೋಡಿ ಅಭಿಮಾನಿಗಳು ಫುಲ್ ಖುಷ್

  ದರ್ಬಾರ್ ಚಿತ್ರಕ್ಕೆ 80%

  ದರ್ಬಾರ್ ಚಿತ್ರಕ್ಕೆ 80%

  ಸೂಪರ್ ಸ್ಟಾರ್ ರಜನಿಕಾಂತ್ ದರ್ಬಾರ್ ಸಿನಿಮಾ ಜನವರಿ 9 ರಂದು ಬಿಡುಗಡೆಯಾಗಿತ್ತು. 1,61,746 ವೋಟ್ ಪಡೆದುಕೊಂಡಿರುವ ದರ್ಬಾರ್ ಗೆ ಬುಕ್ ಮೈ ಶೋನಲ್ಲಿ 80% ರೇಟಿಂಗ್ ಸಿಕ್ಕಿದೆ.

  ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ ರಜನಿಕಾಂತ್ 'ದರ್ಬಾರ್': 4ನೇ ದಿನದ ಗಳಿಕೆ ಎಷ್ಟು?ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ ರಜನಿಕಾಂತ್ 'ದರ್ಬಾರ್': 4ನೇ ದಿನದ ಗಳಿಕೆ ಎಷ್ಟು?

  ಹೆಚ್ಚು ರೇಟಿಂಗ್ ಸಿಕ್ಕಿರುವುದು ಈ ಚಿತ್ರಕ್ಕೆ!

  ಹೆಚ್ಚು ರೇಟಿಂಗ್ ಸಿಕ್ಕಿರುವುದು ಈ ಚಿತ್ರಕ್ಕೆ!

  ಸೌತ್ ಇಂಡಸ್ಟ್ರಿಯ ಈ ಚಿತ್ರಗಳನ್ನು ಹಿಂದಿಕ್ಕಿರುವ ತಾನಾಜಿ ಸಿನಿಮಾ ಬುಕ್ ಮೈ ಶೋನಲ್ಲಿ ಅತಿ ಹೆಚ್ಚು ವೋಟ್ ಮತ್ತು ರೇಟಿಂಗ್ ಪಡೆದುಕೊಂಡಿದೆ. 1,72,707 ಮತ ಪಡೆದುಕೊಂಡಿರುವ ಈ ಚಿತ್ರಕ್ಕೆ 90% ರೇಟಿಂಗ್ ಸಿಕ್ಕಿದೆ. ಅಜಯ್ ದೇವಗನ್, ಕಾಜೋಲ್, ಸೈಫಿ ಅಲಿ ಖಾನ್ ನಟಿಸಿರುವ ಐತಿಹಾಸಿಕ ಚಿತ್ರ ಇದಾಗಿದ್ದು, ಓಂ ರೌತ್ ನಿರ್ದೇಶಿಸಿದ್ದಾರೆ.

  English summary
  Darbar, sarileru neekevvaru, ala vaikunta puram and avane srimannarayana movies doing very well in sankranthi. but, which is the hihest rated movie in book my show?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X