For Quick Alerts
  ALLOW NOTIFICATIONS  
  For Daily Alerts

  ಒಂದು ವಾರದ ಕನ್ನಡ ಚಿತ್ರರಂಗದಲ್ಲಿ ಏನೆಲ್ಲ ಆಗಿದೆ ನೋಡಿ!

  By Naveen
  |
  ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವಾರ ಏನೆಲ್ಲಾ ನಡೀತು ..! | Filmibeat Kannada

  ಕಲರ್ ಫುಲ್ ಲೋಕ ಎನ್ನುವ ಚಿತ್ರರಂಗದ ಬಗ್ಗೆ ಎಲ್ಲರಿಗೂ ಆಸಕ್ತಿ ಜಾಸ್ತಿ ಇರುತ್ತದೆ. ಅದೇ ರೀತಿ ಇಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಲ್ಲೇ ಇರುತ್ತದೆ. ಅದರಲ್ಲಿಯೂ ಈ ವಾರ ಕನ್ನಡ ಚಿತ್ರರಂಗದಲ್ಲಿ ಅನೇಕ ಘಟನೆಗಳ ನಡೆದಿವೆ.

  ಕಾಲಾ ವಿವಾದ, ಸುದೀಪ್ ಹಾಗೂ ಯಶ್ ಅಭಿಮಾನಿಗ ಗುದ್ದಾಟ, ಪುನೀತ್ ಕಾರು ಅಪಘಾತ, ದುನಿಯಾ ವಿಜಯ್ ಬಂಧನ ಮತ್ತು ಜಾಮಿನು, ಕಾಸ್ಟಿಂಗ್ ಕೌಚ್ ಬಗ್ಗೆ ನಿರಂಜನ್ ಅಚ್ಚರಿಯ ಹೇಳಿಕೆ, ಇವುಗಳ ಜೊತೆಗೆ 'ಅವನೇ ಶ್ರೀಮನ್ನಾರಯಣ' ಟೀಸರ್ ಈ ವಾರ ಅತಿ ಹೆಚ್ಚು ಸುದ್ದಿ ಮಾಡಿದ ವಿಷಯಗಳಾಗಿವೆ.

  ಅಂದಹಾಗೆ, ಕಳೆದ ವಾರ ಕನ್ನಡ ಚಿತ್ರರಂಗದಲ್ಲಿ ಆದ ಪ್ರಮುಖ ಬೆಳವಣಿಗೆಯ ವಿವರಗಳ ಮುಂದಿದೆ ಓದಿ...

  'ಕಾಲಾ' ಕಲಹ

  'ಕಾಲಾ' ಕಲಹ

  ತಮಿಳು ನಟ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ಕಳೆದ ಗುರುವಾರ ಬಿಡುಗಡೆಯಾಗಿತ್ತು. ಆದರೆ ಸಿನಿಮಾಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಚಿತ್ರವನ್ನು ಬಿಡುಗಡೆ ಮಾಡದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಪ್ರತಿಭಟನೆಗಳ ನಡುವೆ ಸಹ ಸಿನಿಮಾ ಗುರುವಾರ ಮಧ್ಯಾಹ್ನದ ಮೇಲೆ ನಿಧಾನವಾಗಿ ಒಂದೊಂದೇ ಥಿಯೇಟರ್ ನಲ್ಲಿ ರಿಲೀಸ್ ಆಯ್ತು.

  'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ?'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ?

  ಯಶ್ ಸುದೀಪ್ ಫ್ಯಾನ್ಸ್ ವಾರ್

  ಯಶ್ ಸುದೀಪ್ ಫ್ಯಾನ್ಸ್ ವಾರ್

  ನಟ ಸುದೀಪ್ ಗೆ ಯಶ್ 'ಸರ್' ಅಂತ ಕರೆದಿಲ್ಲ ಎಂದು ಕಿಚ್ಚನ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಯಶ್ ಗೆ ಸುದೀಪ್ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಆ ಚಾಲೆಂಜ್ ಸ್ವೀಕರಿಸಿದ್ದ ಯಶ್ ವಿಡಿಯೋದಲ್ಲಿ ಮಾತನಾಡುವಾಗ ಸುದೀಪ್ ಎಂದು ಕರೆದಿದ್ದರು. ಆದರೆ, ಇದು ಸುದೀಪ್ ಸರ್ ಎಂದು ಕರೆಯದೆ ಗೌರವ ನೀಡಿಲ್ಲ ಅಂತ ಕಿಚ್ಚನ ಫ್ಯಾನ್ಸ್ ಯಶ್ ಮೇಲೆ ಸಿಟ್ಟಿಗೆದ್ದಿದರು.

  ಫ್ಯಾನ್ಸ್ ವಾರ್ ಮಾಡುವವರಿಗೆ ಯಶ್ ಖಡಕ್ ವಾರ್ನಿಂಗ್ಫ್ಯಾನ್ಸ್ ವಾರ್ ಮಾಡುವವರಿಗೆ ಯಶ್ ಖಡಕ್ ವಾರ್ನಿಂಗ್

  ಪುನೀತ್ ಕಾರು ಅಪಘಾತ

  ಪುನೀತ್ ಕಾರು ಅಪಘಾತ

  ನಟ ಪುನೀತ್ ರಾಜ್ ಕುಮಾರ್ 'ನಟ ಸಾರ್ವರ್ಭೌಮ' ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ ಬರುವ ವೇಳೆ ಅವರ ಕಾರು ಅಪಘಾತವಾಗಿತ್ತು. ಬಿಳಿ ಬಣ್ಣದ KA 05 MW 144 ರೇಂಜ್ ರೋವರ್ ಕಾರ್ ನಲ್ಲಿ ಪುನೀತ್ ರಾಜ್ ಕುಮಾರ್ ರಾತ್ರಿ ಬರುವ ವೇಳೆ ಅನಂತಪುರದ ಬಳಿ ಮೂರು ರಸ್ತೆಗಳ ತಿರುವು ಡ್ರೈವರ್ ಕಣ್ಣಿಗೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿತ್ತು. ಆದರೆ ಅದೃಷ್ಟವಶಾತ್ ಯಾರಿಗೆ ಏನು ಆಗಲಿಲ್ಲ.

  ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು.!ಪುನೀತ್ ರಾಜ್ ಕುಮಾರ್ ಕಾರಿಗೆ ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು.!

  ದುನಿಯಾ ವಿಜಯ್ ಬಂಧನ ಮತ್ತು ಜಾಮಿನು

  ದುನಿಯಾ ವಿಜಯ್ ಬಂಧನ ಮತ್ತು ಜಾಮಿನು

  'ಮಾಸ್ತಿಗುಡಿ' ನಿರ್ಮಾಪಕ ಸುಂದರ್‌ ಪಿ.ಗೌಡ ಬಂಧನಕ್ಕೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತೆರಳಿದ್ದರು. ಈ ವೇಳೆಯಲ್ಲಿ ಪೊಲೀಸರಿಂದ ಆರೋಪಿ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಹಿನ್ನಲೆಯಲ್ಲಿ ದುನಿಯಾ ವಿಜಯ್‌ ವಿರುದ್ಧ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ದುನಿಯಾ ವಿಜಯ್‌ ತಮಿಳಿನಾಡಿನಲ್ಲಿ ಪೊಲೀಸರ ವಶಕ್ಕೆ ಸಿಕ್ಕಿದ್ದರು. ಆದರೆ ಬಳಿಕ ಅವರಿಗೆ ಜಾಮಿನು ನೀಡಲಾಗಿದೆ.

  ತಮಿಳುನಾಡಿನಲ್ಲಿ ಪೊಲೀಸರ ವಶಕ್ಕೆ ನಟ ದುನಿಯಾ ವಿಜಯ್ತಮಿಳುನಾಡಿನಲ್ಲಿ ಪೊಲೀಸರ ವಶಕ್ಕೆ ನಟ ದುನಿಯಾ ವಿಜಯ್

  ವಿಜಯಲಕ್ಷ್ಮಿ ಕಣ್ಣೀರು

  ವಿಜಯಲಕ್ಷ್ಮಿ ಕಣ್ಣೀರು

  ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ 'ಸೂರ್ಯವಂಶ' ಚಿತ್ರ ಖ್ಯಾತಿಯ ನಟಿ ವಿಜಯ ಲಕ್ಷ್ಮಿ ಇದ್ದಕ್ಕಿದ್ದ ಹಾಗೆ ವಾಹಿನಿಯಲ್ಲಿ ಪ್ರತ್ಯಕ್ಷ ಆದರು. ''ನಾನು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದೀನಿ. ನನಗೆ ಯಾರಾದರೂ ಸಿನಿಮಾದಲ್ಲಿ ಅಭಿನಯಸುವುದಕ್ಕೆ ಅವಕಾಶ ಕೊಟ್ರೆ ಖಂಡಿತಾ ಮಾಡ್ತೀನಿ. ನನಗೆ ಆಕ್ಟಿಂಗ್ ಬಿಟ್ರೆ ಬೇರೆನೂ ಗೊತ್ತಿಲ್ಲ. ನಟನೆಯೇ ಎಲ್ಲ. ನನ್ನ ಕುಟುಂಬವನ್ನ ನಾನೇ ಪೋಷಿಸಬೇಕು'' ಎಂದು ಹೇಳಿಕೊಂಡು ಭಾವುಕರಾಗಿದರು.

  'ಸೂರ್ಯವಂಶ'ದ ಸೇವಂತಿ ವಿಜಯಲಕ್ಷ್ಮಿಯ ಕಣ್ಣೀರ ಕಥೆ'ಸೂರ್ಯವಂಶ'ದ ಸೇವಂತಿ ವಿಜಯಲಕ್ಷ್ಮಿಯ ಕಣ್ಣೀರ ಕಥೆ

  ಕಾಸ್ಟಿಂಗ್ ಕೌಚ್ ಬಗ್ಗೆ ನಿರಂಜನ್ ಹೇಳಿಕೆ

  ಕಾಸ್ಟಿಂಗ್ ಕೌಚ್ ಬಗ್ಗೆ ನಿರಂಜನ್ ಹೇಳಿಕೆ

  ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶ್ ಪಾಂಡೆ ಕಾಸ್ಟಿಂಗ್ ಕೌಚ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದರು. ಕಾಸ್ಟಿಂಗ್ ಕೌಚ್ ಎಂಬುದು ಕೇವಲ ಒಂದು ವರ್ಗದವರ ಮೇಲೆ ಮಾತ್ರವಲ್ಲ, ಹೆಣ್ಣು-ಗಂಡು ಎನ್ನುವುದನ್ನ ನೋಡದೇ, ಮಂಗಳಮುಖಿಯೂ ಮೇಲೆ ಕಾಸ್ಟಿಂಗ್ ಕೌಚ್ ದೌರ್ಜನ್ಯ ನಡೆದಿರುವ ಉದಾಹರಣೆಗಳಿವೆ''. ಎಂದು ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವನ್ನು ಬಿಚ್ಚಿಟ್ಟರು.

  ನಂಬಿದ್ರೆ ನಂಬಿ, ಬಿಟ್ರೆ ಬಿಡಿ ನಿರಂಜನ್ ಗೂ 'ಕಾಸ್ಟಿಂಗ್ ಕೌಚ್' ಎದುರಾಗಿತ್ತು.!ನಂಬಿದ್ರೆ ನಂಬಿ, ಬಿಟ್ರೆ ಬಿಡಿ ನಿರಂಜನ್ ಗೂ 'ಕಾಸ್ಟಿಂಗ್ ಕೌಚ್' ಎದುರಾಗಿತ್ತು.!

  ಅಮೂಲ್ಯ - ದರ್ಶನ್ ಸಿನಿಮಾ

  ಅಮೂಲ್ಯ - ದರ್ಶನ್ ಸಿನಿಮಾ

  ನಟಿ ಅಮೂಲ್ಯ ಮದುವೆ ಆದ ನಂತರ ಸಿನಿಮಾದಲ್ಲಿ ಅಭಿನಯ ಮಾಡುತ್ತಾರಾ ಇಲ್ಲವಾ, ಎನ್ನುವ ಸ್ಪಷ್ಟತೆ ಸಿಕ್ಕಿರಲಿಲ್ಲ. ಆದರೆ ಈಗ ಅವರು ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ತಮಿಳಿನ 'ವೇದಾಳಂ' ಚಿತ್ರವನ್ನ ಕನ್ನಡಕ್ಕೆ ರೀಮೆಕ್ ಮಾಡಲು ಮುಂದಾಗಿದ್ದು, ಸಿನಿಮಾದಲ್ಲಿಯ ದರ್ಶನ್ ತಂಗಿ ಪಾತ್ರವನ್ನು ಅಮೂಲ್ಯ ನಿರ್ವಹಿಸಲಿದ್ದಾರಂತೆ. ಈ ಮೂಲಕ 15 ವರ್ಷದ ನಂತರ ಮತ್ತೆ ದರ್ಶನ್ ಜೊತೆಗೆ ಅಮೂಲ್ಯ ನಟಿಸುತ್ತಿದ್ದಾರೆ.

  15 ವರ್ಷದ ನಂತ್ರ ಮತ್ತೆ ಡಿ ಬಾಸ್ ಜೊತೆ ಅಮೂಲ್ಯ15 ವರ್ಷದ ನಂತ್ರ ಮತ್ತೆ ಡಿ ಬಾಸ್ ಜೊತೆ ಅಮೂಲ್ಯ

  ಸೌತ್ ಫಿಲ್ಮ್ ಫೇರ್ ಪ್ರಶಸ್ತಿ

  ಸೌತ್ ಫಿಲ್ಮ್ ಫೇರ್ ಪ್ರಶಸ್ತಿ

  2017-18ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯ ನಾಮಿನೇಷನ್ ಪಟ್ಟಿ ಬಿಡುಗಡೆಯಾಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಸಿನಿಮಾಗಳ ಪೈಕಿ ಐದು ಚಿತ್ರಗಳು 'ಅತ್ಯುತ್ತಮ ಚಿತ್ರ ವಿಭಾಗ'ದಲ್ಲಿ ನಾಮಿನೇಟ್ ಆಗಿದೆ. 'ಚೌಕ', 'ಒಂದು ಮೊಟ್ಟೆಯ ಕಥೆ', 'ಶುದ್ದಿ', 'ಉರ್ವಿ, 'ದಯವಿಟ್ಟು ಗಮನಿಸಿ' ಪ್ರಶಸ್ತಿಗೆ ನಾಮಿನೇಟ್ ಆದ ಸಿನಿಮಾವಾಗಿವೆ.

  ಸೌತ್ ಫಿಲ್ಮ್ ಫೇರ್ ಪ್ರಶಸ್ತಿ: ಕನ್ನಡ ತಾರೆಯರ ನಾಮಿನೇಷನ್ ಪಟ್ಟಿಸೌತ್ ಫಿಲ್ಮ್ ಫೇರ್ ಪ್ರಶಸ್ತಿ: ಕನ್ನಡ ತಾರೆಯರ ನಾಮಿನೇಷನ್ ಪಟ್ಟಿ

  'ಕುರುಕ್ಷೇತ್ರ'ದಲ್ಲಿ ಇರಲ್ಲ ರವಿಚಂದ್ರನ್ ಧ್ವನಿ

  'ಕುರುಕ್ಷೇತ್ರ'ದಲ್ಲಿ ಇರಲ್ಲ ರವಿಚಂದ್ರನ್ ಧ್ವನಿ

  ಕೃಷ್ಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ರವಿಚಂದ್ರನ್ ತನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಹಳೆ ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಕಂಠದಾನ ಮಾಡುತ್ತಿದ್ದ ಹಿರಿಯ ನಟ ಶ್ರೀನಿವಾಸ ಪ್ರಭು ಅವರಿಂದ ಕೃಷ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

  ಅಂತಿಮ ಕ್ಷಣದಲ್ಲಿ 'ಕೃಷ್ಣ'ನ ಪಾತ್ರಕ್ಕೆ ಮಹತ್ವದ ಬದಲಾವಣೆ.!ಅಂತಿಮ ಕ್ಷಣದಲ್ಲಿ 'ಕೃಷ್ಣ'ನ ಪಾತ್ರಕ್ಕೆ ಮಹತ್ವದ ಬದಲಾವಣೆ.!

  'ಅವನೇ ಶ್ರೀಮನ್ನಾರಾಯಣ' ಟೀಸರ್

  'ಅವನೇ ಶ್ರೀಮನ್ನಾರಾಯಣ' ಟೀಸರ್

  'ಅವನೇ ಶ್ರೀಮನ್ನಾರಾಯಣ' ಸಿನಿಮಾ ಟೀಸರ್ ಈಗ ಸೂಪರ್ ಹಿಟ್ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿದ್ದ ಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಯೂ ಟ್ಯೂಬ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ಟೀಸರ್ ಬಿಡುಗಡೆಯಾದ ದಿನದಿಂದ ಅಂದರೆ ಸತತ ನಾಲ್ಕು ದಿನಗಳ ಕಾಲ ನಂ 1 ಟ್ರೆಂಡಿಂಗ್ ನಲ್ಲಿದೆ.

  ಒಂದು ಮಿಲಿಯನ್ ಹಿಟ್ಸ್, ನಂ 1 ಟ್ರೆಂಡ್ - ಎಲ್ಲ ನಾರಾಯಣನ ಕೃಪೆಒಂದು ಮಿಲಿಯನ್ ಹಿಟ್ಸ್, ನಂ 1 ಟ್ರೆಂಡ್ - ಎಲ್ಲ ನಾರಾಯಣನ ಕೃಪೆ

  English summary
  Highlights of Sandalwood news in June 1st week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X