Soundarya Jayamala Wedding : ಜಯಮಾಲಾ ಮಗಳ ಹಳದಿ ಶಾಸ್ತ್ರ, ಕುಣಿದು ಕುಪ್ಪಳಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್ !

ಕನ್ನಡ ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಒಂದು ಕಡೆ ಡಾಲಿ ಧನಂಜಯ್ ಈ ಫೆಬ್ರವರಿ 16ರಂದು ಸಪ್ತಪದಿ ತುಳಿಯಲಿದ್ದರೆ ಇನ್ನೊಂದು ಕಡೆ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರ ಮದುವೆ ಕೂಡ ನಡೆಯಲಿದೆ. ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಅವರ ಮಗಳು ಸೌಂದರ್ಯ ಕೂಡ ಹೊಸ ಬದುಕಿಗೆ ಮುನ್ನುಡಿ ಬರೆಯಲು ಅಣಿಯಾಗಿದ್ದಾರೆ.

ಹೌದು, ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಇರುವ ಜಯಮಾಲಾ ಅವರ ಮಗಳು ಸೌಂದರ್ಯ ಅವರ ಮದುವೆ ಈ ಫೆಬ್ರವರಿ 7 ಮತ್ತು 8ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೌಂದರ್ಯ ಮದುವೆ ನಡೆಯಲಿದ್ದು, ಲಲಿತ್ ಅಶೋಕ್ ಹೊಟೇಲ್‌ನ ಆವರಣ ನಿನ್ನೆ ಸೌಂದರ್ಯ ಅವರ ಹಳದಿ ಶಾಸ್ತ್ರಕ್ಕೆ ಸಾಕ್ಷಿಯಾಗಿದೆ. ಅದ್ಧೂರಿಯಾಗಿ ನಡೆದ ಈ ಹಳದಿ ಶಾಸ್ತ್ರದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟಿಯರು ಭಾಗವಹಿಸಿದ್ದಾರೆ. ನವ ಜೋಡಿಗೆ ಹಳದಿ ಹಚ್ಚಿ ಸಂಭ್ರಮಿಸಿದ್ದಾರೆ.

Highlights of the Haldi Ceremony of Soundarya the Bride-to-Be Daughter of Jayamala

ಇನ್ನು, ಕನ್ನಡ ಚಿತ್ರರಂಗದ ಕುಚಿಕು ಗೆಳತಿಯರಾದ ಸುಧಾರಾಣಿ, ಮಾಳವಿಕಾ ಅವಿನಾಶ್ ಮತ್ತು ಶ್ರುತಿ ಹಳದಿ ಶಾಸ್ತ್ರದ ರಂಗೇರಿಸಿದ್ದು ಸುಳ್ಳಲ್ಲ. ಹಳದಿ ಬಣ್ಣದ ಉಡುಗೆಯಲ್ಲಿಯೇ ಬಂದಿದ್ದ ಮೂವರು ಮನಸಾರೆ ಕುಣಿದು ಕುಪ್ಪಳಿಸಿದ್ದಾರೆ. ಹರ್ಷಿಕಾ ಪೊಣಚ್ಚ, ಅನು ಪ್ರಭಾಕರ್, ಪ್ರಿಯಾಂಕ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್ ಹೀಗೆ ಎಲ್ಲರ ಜೊತೆ ಸುಧಾರಾಣಿ, ಮಾಳವಿಕಾ ಮತ್ತು ಶ್ರುತಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಹರ್ಷಿಕಾ ಪೊಣಚ್ಚ ಅವರನ್ನು ಹೊರತು ಪಡಿಸಿ ಸೌಂದರ್ಯ ಅವರ ಹಳದಿ ಶಾಸ್ತ್ರಕ್ಕೆ ಬಹುತೇಕರು ಹಳದಿ ಬಣ್ಣದ ಉಡುಗೆಯಲ್ಲಿಯೇ ಬಂದಿದ್ದು ವಿಶೇಷ.

ಅಂದ್ಹಾಗೇ ಸೌಂದರ್ಯ ಅವರ ಕೈ ಹಿಡಿಯುತ್ತಿರುವ ಹುಡುಗನ ಹೆಸರು ರುಷಬ್ ಕೆ. ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರ ರಾವ್ ಮತ್ತು ರೋಹಿಣಿ ಅವರ ಪುತ್ರ ಇವರು. ಇನ್ನು ಸೌಂದರ್ಯ ಮತ್ತು ರುಷಬ್ ಅವರದ್ದು ಲವ್ ಮ್ಯಾರೇಜಾ, ಅರೆಂಜ್ ಮ್ಯಾರೇಜಾ, ಲವ್ ಕಂ ಅರೆಂಜ್ ಮ್ಯಾರೇಜಾ ? ಈ ಪ್ರಶ್ನೆಗೆ ಉತ್ತರ ಸೌಂದರ್ಯ ಅವರೇ ಕೊಡಬೇಕು. ಇನ್ನು, ರುಷಬ್ ಅವರ ವೃತ್ತಿಯ ಕುರಿತು ಕೂಡ ಹೆಚ್ಚಿನ ಮಾಹಿತಿ ಇಲ್ಲ.

ಇನ್ನು ಸೌಂದರ್ಯ ಮತ್ತು ರುಷಬ್ ಅವರ ಈ ವಿವಾಹ ಮಹೋತ್ಸವದಲ್ಲಿ 5,000ಕ್ಕೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಚಿತ್ರರಂಗದ ಗಣ್ಯರನ್ನು ಸೇರಿ ಜಯಮಾಲಾ ರಾಜಕೀಯದವರನ್ನು ಕೂಡ ತಮ್ಮ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಯಾರು ಯಾರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

ಇನ್ನುಳಿದಂತೆ ಸೌಂದರ್ಯ ತಾಯಿಯಂತೆ ಚಿತ್ರರಂಗದಲ್ಲಿ ಮಿಂಚುವ ಕನಸನ್ನು ಕಂಡಿದ್ದರು. ಉಪೇಂದ್ರ ಅಭಿನಯದ ಗಾಡ್ ಫಾದರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ಸೌಂದರ್ಯ ಮಿಸ್ಟರ್ ಪ್ರೇಮಿಕುಡು ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದರು. ಆದರೆ, ಮೊದಲ ಈ ಎರಡು ಚಿತ್ರಗಳು ಸೋತವು. ಆ ನಂತರ ಸೌಂದರ್ಯ ಅಭಿನಯದ ಪಾರು ವೈಫ್ ಆಫ್ ದೇವದಾಸ್ ಮತ್ತು ಸಿಂಹಾದ್ರಿ ಕೂಡ ಸದ್ದು ಮಾಡಲಿಲ್ಲ. ಇಲ್ಲಿಂದಾಚೆ ನಾಯಕಿಯಾಗುವ ಕನಸನ್ನು ಮರೆತ ಸೌಂದರ್ಯ ನಟನೆಯಿಂದ ದೂರ ಉಳಿದರು. ಸದ್ಯ ಸೌಂದರ್ಯ ಹೊಸ ಬದುಕನ್ನು ಪ್ರಾರಂಭಿಸಲು ಸಿದ್ಧವಾಗಿದ್ದು ನಿಮ್ಮದು ಒಂದು ಶುಭ ಹಾರೈಕೆ ಇವರ ಮೇಲಿರಲಿ.

More from Filmibeat

Read more about: wedding jayamala filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X