»   » ಆಂಗ್ಲ ಪತ್ರಿಕೆ ವಿರುದ್ಧ ಪುನೀತ್ ರಾಜ್ ಕುಮಾರ್ ಸಖತ್ ಗರಂ

ಆಂಗ್ಲ ಪತ್ರಿಕೆ ವಿರುದ್ಧ ಪುನೀತ್ ರಾಜ್ ಕುಮಾರ್ ಸಖತ್ ಗರಂ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟೆಂಪರ್ ರೈಸ್ ಮಾಡಿಕೊಂಡಿದ್ದಾರೆ. ತಮ್ಮ ಬಗ್ಗೆ ಪ್ರಕಟವಾಗಿರುವ ವರದಿ ವಿರುದ್ಧ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

''ಡಾ.ರಾಜ್ ಕುಮಾರ್ ಪುತ್ರ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಓದುವುದಕ್ಕೆ ಬರುವುದಿಲ್ಲ'' ಅಂತ ನಿನ್ನೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಆಂಗ್ಲ ಪತ್ರಿಕೆಯ ಗಾಸಿಪ್ ಕಾಲಂ ನಲ್ಲಿ ಪ್ರಕಟವಾದ ಸುದ್ದಿ ಓದಿ ಕಣ್ಣು ಕೆಂಪಗೆ ಮಾಡಿಕೊಂಡಿರುವ ಪುನೀತ್ ರಾಜ್ ಕುಮಾರ್, ಪತ್ರಿಕೆಯ ಸಂಪಾದಕರಿಗೆ ಒಂದು ಪತ್ರ ಬರೆದಿದ್ದಾರೆ.[ಅಣ್ಣಾವ್ರ ಮಗ ಪುನೀತ್ ಗೆ ಕನ್ನಡ ಓದೋಕೆ ಬರಲ್ವಾ?]

ವರದಿ ವಿರುದ್ಧ ಬರೆದಿರುವ ಪತ್ರದಲ್ಲಿ ಪುನೀತ್ ರಾಜ್ ಕುಮಾರ್ ಖಾರವಾಗಿ ಪ್ರತಿಕ್ರಿಯೆಸಿದ್ದಾರೆ. ಹಾಗಾದ್ರೆ, ಅಪ್ಪು ಬರೆದಿರುವ ಪತ್ರದಲ್ಲಿ ಏನಿದೆ? ಅದನ್ನ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಪತ್ರಿಕೆ ವಿರುದ್ಧ ಕೆಂಡಾಮಂಡಲರಾದ ಪುನೀತ್

''ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಬರುವುದಿಲ್ಲ'' ಅಂತ ಆಂಗ್ಲ ಪತ್ರಿಕೆ ಪ್ರಕಟಿಸಿರುವ ವರದಿ ಓದಿ, ಪತ್ರಿಕೆಯ ಸಂಪಾದಕರಿಗೆ ಪುನೀತ್ ಬರೆದಿರುವ ಪತ್ರದ ಪ್ರತಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಅದನ್ನ ಓದಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ...

''ಬೇಜವಾಬ್ದಾರಿ ಸುದ್ದಿ.!''

''ತಮ್ಮ ಗುರುತನ್ನ ಬಹಿರಂಗ ಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬ ನಿಮ್ಮ ಪತ್ರಿಕೆಯ ಗಾಸಿಪ್ ಕಾಲಂನಲ್ಲಿ ನನ್ನ ಮೇಲೆ ಬರೆದಿರುವ ನಿಷ್ಪ್ರಯೋಜಕ ಸುದ್ದಿಯನ್ನು ಓದಲು ವಿಷಾದಿಸುತ್ತೇನೆ. ಇದು ಬೇಜವಾಬ್ದಾರಿಯುತ ಮತ್ತು ಚೇಷ್ಟೆಯ ವರದಿ'' - ಪುನೀತ್ ರಾಜ್ ಕುಮಾರ್.

''ಚೆನ್ನೈನಲ್ಲಿ ಓದಿದ್ದು ನಿಜ''

''ನಿಮ್ಮ ವರದಿ ಸತ್ಯಕ್ಕೆ ಹತ್ತಿರವಾಗಿದ್ದರೆ ನಾನು ಪ್ರತ್ಯುತ್ತರ ನೀಡುವ ತೊಂದರೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಚೆನ್ನೈ ನಲ್ಲಿ ಓದಿದ್ದು ನಿಜ ಅಂತ ಒಪ್ಪಿಕೊಳ್ಳುತ್ತೇನೆ. ಇದು ಅನೇಕರಿಗೆ ಗೊತ್ತಿರುವ ವಿಷಯ. ಆದ್ರೆ, ನನಗೆ ಕನ್ನಡ ಓದಲು-ಬರೆಯಲು ಬರುತ್ತದೆ. ಇಲ್ಲದಿದ್ದರೆ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ನಾನು ಪ್ರಶ್ನೆಗಳನ್ನ ಇಂಗ್ಲೀಷ್ ನಲ್ಲಿ ಓದಿದೆ ಅಂತ
ನಿಮಗೆ ಅನಿಸುತ್ತಿದೆಯೇ'' ಅಂತ ಪುನೀತ್ ರಾಜ್ ಕುಮಾರ್ ಪತ್ರಿಕೆಯ ಸಂಪಾದಕರಿಗೆ ಪ್ರಶ್ನೆ ಮಾಡಿದ್ದಾರೆ.

''ನಾನು ಹೆಮ್ಮೆಯ ಕನ್ನಡಿಗ''

''ನಾನು ನಿಮಗೆ ಏನ್ನನ್ನೂ ಸಾಬೀತು ಪಡಿಸಬೇಕಾಗಿಲ್ಲ. ನಿಮ್ಮ ಪತ್ರಿಕೆ ಹೆಚ್ಚು ಸೇಲ್ ಆಗುವುದಕ್ಕೆ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಬೇಡಿ. ನಾನು ಹೆಮ್ಮೆಯ ಕನ್ನಡಿಗ. ನನಗೆ ಕನ್ನಡ ಸರಾಗವಾಗಿ ಬರೆಯಲು ಓದಲು ಬರುತ್ತದೆ ಅನ್ನುವುದನ್ನ ತಿಳಿಸಲು ನಾನು ಹೆಮ್ಮೆ ಪಡುತ್ತೇನೆ'' - ಪುನೀತ್ ರಾಜ್ ಕುಮಾರ್

''ಕ್ಷಮೆಯಾಚಿಸಬೇಕು.!''

''ಈ ಪತ್ರವನ್ನ ನಿಮ್ಮ ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟಿಸುವಂತೆ ನಾನು ಕೇಳಿಕೊಳ್ಳುತ್ತೇನೆ. ಅದು ನಿಮ್ಮ ಕ್ಷಮೆಯಾಚನೆಯೊಂದಿಗೆ. ಇಲ್ಲವಾದಲ್ಲಿ ಕಾನೂನಿನ ಮೊರೆಹೋಗುತ್ತೇನೆ. ನನ್ನ ಮತ್ತು ನನ್ನ ಕುಟುಂಬಕ್ಕೆ ಧಕ್ಕೆ ತರುವ ವಿಷಯಗಳನ್ನು ಇಟ್ಟುಕೊಂಡು ಪಬ್ಲಿಸಿಟಿ ಪಡೆಯುವ ಅವಶ್ಯಕತೆ ನನಗಿಲ್ಲ.'' ಅಂತ ಪತ್ರಿಕೆಗೆ ಚಾಟಿ ಬೀಸಿದ್ದಾರೆ ಪುನೀತ್ ರಾಜ್ ಕುಮಾರ್.

English summary
Kannada Actor Puneeth Rajkumar is annoyed with the article published by the leading daily that he doesn't know to read Kannada. Hence, Puneeth Rajkumar has written a letter to the Editor of concerned leading daily to apologize him for publishing such baseless article.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada