For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿಮಾಗಳ ಈ ದಿನದ 5 ಚುಟುಕು ಸುದ್ದಿಗಳು

  |

  ಕನ್ನಡ ಚಿತ್ರರಂಗದಲ್ಲಿ ಪ್ರತಿದಿನ ಸಿನಿಮಾಗಳ ಕೆಲಸಗಳು ನಡೆಯುತ್ತಲೇ ಇರುತ್ತದೆ. ಯಾವುದೋ ಸಿನಿಮಾದ ಮುಹೂರ್ತ, ಇನ್ಯಾವುದೋ ಸಿನಿಮಾದ ಬಿಡುಗಡೆ, ಮತ್ತೊಂದು ಕಡೆ ವಿವಾದ, ಇನ್ನೊಂದು ಕಡೆ ವಿವಾಹ ಹೀಗೆ ಒಂದೇ ದಿನ ಸಾಕಷ್ಟು ಬೆಳವಣಿಗೆಗಳು ಆಗುತ್ತದೆ.

  ಸದ್ಯಕ್ಕೆ, 'ನಟ ಸಾರ್ವಭೌಮ' ಸಿನಿಮಾದ ಶೂಟಿಂಗ್ ಮುಗಿದಿದೆ. ದಿಗಂತ್ - ಐಂದ್ರಿತಾ ರೇ ಜೋಡಿಗೆ ರಾಗಿಣಿ ಶುಭ ಹಾರೈಸಿದ್ದಾರೆ. ಜಗ್ಗೇಶ್ ಅವರ '8 ಎಂಎಂ' ಸಿನಿಮಾವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀಕ್ಷಿಸಲಿದ್ದಾರೆ. 'ಅಯೋಗ್ಯ' ಸಿನಿಮಾದ ನೂರು ದಿನ ಕಾರ್ಯಕ್ರಮ ಹಾಗೂ 'ದಿ ವಿಲನ್' ಸಿನಿಮಾದ ಹೊಸ ವಿಡಿಯೋ ಹಾಡು ಬಿಡುಗಡೆ ಈ ದಿನದ ವಿಶೇಷ ಸುದ್ದಿಗಳಾಗಿವೆ.

  ಕಿರುತೆರೆಗೆ ಬಂದ 'ಅಯೋಗ್ಯ', ಯಾವಾಗ ಪ್ರಸಾರ?

  ಅಂದಹಾಗೆ, ಕನ್ನಡ ಚಿತ್ರರಂಗದ ಈ ದಿನದ ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...

  'ಅಯೋಗ್ಯ' 100 ಡೇಸ್

  'ಅಯೋಗ್ಯ' 100 ಡೇಸ್

  ಇದೇ ವಾರ 'ಅಯೋಗ್ಯ' ಸಿನಿಮಾ ನೂರು ದಿನಗಳನ್ನು ಪೂರೈಸಲಿದೆ. ಶತದಿನದ ಕಾರ್ಯಕ್ರಮವನ್ನು ಇದೇ ಭಾನುವಾರ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ 100 ಡೇಸ್ ಕಾರ್ಯಕ್ರಮ ನಡೆಯಲಿದೆ. ವಿಶೇಷ ಅಂದರೆ, ಅದೇ ದಿನ ಸಿನಿಮಾ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.

  'ನಟ ಸಾರ್ವಭೌಮ' ಪ್ಯಾಕ್ ಅಪ್

  ಪುನೀತ್ ರಾಜ್ ಕುಮಾರ್ ನಟನೆಯ 'ನಟ ಸಾರ್ವಭೌಮ' ಸಿನಿಮಾದ ಶೂಟಿಂಗ್ ನಿನ್ನೆಗೆ ಮುಗಿದಿದೆ. ಈ ವಿಷಯವನ್ನು ನಿರ್ದೇಶಕ ಪವನ್ ಒಡೆಯರ್ ಹಂಚಿಕೊಂಡಿದ್ದಾರೆ. ಕುಂಬಳ ಕಾಯಿ ಒಡೆದು ಇಡೀ ಚಿತ್ರತಂಡ ಫೋಟೋ ತೆಗೆದುಕೊಂಡಿದೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದ ನಾಯಕಿಯರಾಗಿದ್ದಾರೆ.

  'ನಟಸಾರ್ವಭೌಮ' ಕಡೆಯಿಂದ ಇಂದು ಸಂಜೆ 6.30ಕ್ಕೆ ಸರ್ಪ್ರೈಸ್.!

  '8 ಎಂಎಂ' ಸಿನಿಮಾ ನೋಡ್ತಾರೆ ಯಡಿಯೂರಪ್ಪ

  '8 ಎಂಎಂ' ಸಿನಿಮಾ ನೋಡ್ತಾರೆ ಯಡಿಯೂರಪ್ಪ

  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ '8 ಎಂಎಂ' ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಜಗ್ಗೇಶ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯಡಿಯೂರಪ್ಪ ಅವರಿಗಾಗಿ ಇಂದು ಸಂಜೆ 6.30ಕ್ಕೆ ಒರಿಯಲ್ ಮಾಲ್ ನಲ್ಲಿ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಕಳೆದ ವಾರ ಈ ಸಿನಿಮಾ ಬಿಡುಗಡೆಯಾಗಿತ್ತು.

  ಹೊಸ ಜೋಡಿಗೆ ರಾಗಿಣಿ ವಿಶ್

  ನಟ ದಿಗಂತ್ ಹಾಗೂ ಅಂದ್ರಿತಾ ರೇ ವಿವಾಹದ ದಿನಾಂಕ ನಿಗದಿಯಾಗಿದೆ. ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಆಗಿರುವ ವಿಷಯವನ್ನು ಅಂದ್ರಿತಾ ಇಂದು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಹೊಸ ಜೋಡಿಗೆ ರಾಗಿಣಿ ದ್ವಿವೇದಿ ಶುಭಾಶಯ ತಿಳಿಸಿದ್ದಾರೆ.

  ದಿಗಂತ್ - ಐಂದ್ರಿತಾ ಮದುವೆ ಡೇಟ್ ಫಿಕ್ಸ್ : 3 ತಿಂಗಳ ಹಿಂದೆಯೇ ನಿಶ್ಚಿತಾರ್ಥ ಆಗಿತ್ತು

  'ದಿ ವಿಲನ್' ಹಾಡು

  'ದಿ ವಿಲನ್' ಹಾಡು

  'ದಿ ವಿಲನ್' ಸಿನಿಮಾ ಒಂದೊಂದೆ ವಿಡಿಯೋ ಹಾಡುಗಳು ಹೊರ ಬರುತ್ತಿದೆ. ಸುದೀಪ್ ಅವರ 'ಲವ್ ಆಗೈತೆ ನಿನ್ ಮೈಲೆ..' ಹಾಡಿನ ವಿಡಿಯೋ ಇಂದು ಸಂಜೆ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ, ಪ್ರೇಮ್ ಸಾಹಿತ್ಯ ಹಾಗೂ ಧ್ವನಿ ಹಾಡಿನಲ್ಲಿದೆ.

  English summary
  Highlights todays kannada movie news (November 21st).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X