ಗಾಂಧಿನಗರದಲ್ಲಿ ಒಂದ್ ರೌಂಡ್ : ಈ ದಿನದ ಐದು ಸುದ್ದಿಗಳು

ಕನ್ನಡ ಚಿತ್ರರಂಗದಲ್ಲಿ ಪ್ರತಿದಿನ ಸಿನಿಮಾಗಳ ಕೆಲಸಗಳು ನಡೆಯುತ್ತಲೇ ಇರುತ್ತದೆ. ಯಾವುದೋ ಸಿನಿಮಾದ ಮುಹೂರ್ತ, ಇನ್ಯಾವುದೋ ಸಿನಿಮಾದ ಬಿಡುಗಡೆ, ಮತ್ತೊಂದು ಕಡೆ ವಿವಾದ, ಇನ್ನೊಂದು ಕಡೆ ವಿವಾಹ ಹೀಗೆ ಒಂದೇ ದಿನ ಸಾಕಷ್ಟು ಬೆಳವಣಿಗೆಗಳು ಆಗುತ್ತದೆ.

ಸದ್ಯಕ್ಕೆ, ಪುನೀತ್ ರಾಜ್ ಕುಮಾರ್ 'ನಟ ಸಾರ್ವಭೌಮ' ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. 'ಶಿವರಾಜ್ ಕುಮಾರ್ ಅವರ 'ಕವಚ' ಸಿನಿಮಾದ ಹಾಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಟ ಜಗ್ಗೇಶ್ ಮಗನಿಗಾಗಿ ಒಂದು ಉಡುಗೊರೆ ನೀಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಪ್ರಿಯಾಂಕ ಉಪೇಂದ್ರರಿಗೆ ಧನ್ಯವಾದ ಹೇಳಿದ್ದಾರೆ. 'ಕೆ ಜಿ ಎಫ್' ನಾಯಕಿ ಶ್ರೀನಿಧಿ ಶೆಟ್ಟಿ ಸಂತಸಗೊಂಡಿದ್ದಾರೆ.

ಅಂದಹಾಗೆ, ಕನ್ನಡ ಚಿತ್ರರಂಗದ ಈ ದಿನದ ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...

ಡಬ್ಬಿಂಗ್ ಮುಗಿತು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ 'ನಟ ಸಾರ್ವಭೌಮ' ಸಿನಿಮಾದ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಅಪ್ಪು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಟೀಂ ಜೊತೆಗೆ ಪುನೀತ್ ಸೆಲ್ಫಿ ತೆಗೆದುಕೊಂಡಿದ್ದಾರೆ. ಪವನ್ ಒಡೆಯರ್‌ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

'ಕವಚ' ಹಾಡು

ಶಿವರಾಜ್ ಕುಮಾರ್ ಅವರ 'ಕವಚ' ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕೆ ಕಲ್ಯಾಣ್ ಈ ಹಾಡನ್ನು ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಯೂ ಟ್ಯೂಬ್ ನಲ್ಲಿ ಹಾಡಿಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಡಿಸೆಂಬರ್ 7ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.

ಮಗನಿಗಾಗಿ ಜಗ್ಗೇಶ್ ಹಾಡು

'8 MM' ಸಿನಿಮಾದಲ್ಲಿ ಒಂದು ಹಾಡು ಬರೆದಿದ್ದ ಜಗ್ಗೇಶ್ ಈಗ ತಮ್ಮ ಮಗನ ಸಿನಿಮಾಗಾಗಿ ಎರಡನೇ ಹಾಡು ಬರೆದಿದ್ದಾರೆ. ಜಗ್ಗೇಶ್ ಪುತ್ರ ಗುರು ಅಭಿನಯದ 'ಕಾಗೆ ಮೊಟ್ಟೆ' ಸಿನಿಮಾದ ಹಾಡಿಗೆ ಜಗ್ಗೇಶ್ ಸಾಹಿತ್ಯವಿದೆ. ಚಂದ್ರಹಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಪ್ರಿಯಾಂಕಗೆ ದರ್ಶನ್ ಪತ್ನಿ ಧನ್ಯವಾದ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಹುಟ್ಟಹಬ್ಬಕ್ಕೆ ಪ್ರಿಯಾಂಕ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭ ಹಾರೈಸಿದ್ದರು. ಇದಕ್ಕೆ ವಿಜಯಲಕ್ಷ್ಮಿ ಅವರು ಧನ್ಯವಾದ ತಿಳಿಸಿದ್ದಾರೆ. ವಿಶೇಷ ಅಂದರೆ, ಈ ಇಬ್ಬರು ಸ್ಟಾರ್ ಪತ್ನಿಯರ ಹುಟ್ಟುಹಬ್ಬ ಒಂದೇ ತಿಂಗಳು ಇದೆ.

ಶ್ರೀ ನಿಧಿ ಶೆಟ್ಟಿ ಸಂತಸ

'ಕೆ ಜಿ ಎಫ್' ಸಿನಿಮಾದ ಎಲ್ಲಾ ಭಾಷೆಯ ಟ್ರೇಲರ್ ಗಳು ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿದೆ. ಎಲ್ಲಾ ಭಾಷೆಯಿಂದ ಸೇರಿ ಸದ್ಯ ಟ್ರೇಲರ್ 25 ಮಿಲಿಯನ್ ಹಿಟ್ಸ್ ಪಡೆದಿದೆ. ಈ ಸಂತಸವನ್ನು ನಟಿ ಶ್ರೀ ನಿಧಿ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಇದು ಅವರ ಮೊದಲ ಸಿನಿಮಾವಾಗಿದೆ.

More from Filmibeat

English summary
Highlights todays kannada movie news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X