»   » ಸಲ್ಮಾನ್ ರೀಮೇಕ್ ಮಾಡುತ್ತಿರುವ ಕನ್ನಡದ ಚಿತ್ರ ಯಾವುದು?

ಸಲ್ಮಾನ್ ರೀಮೇಕ್ ಮಾಡುತ್ತಿರುವ ಕನ್ನಡದ ಚಿತ್ರ ಯಾವುದು?

Posted By:
Subscribe to Filmibeat Kannada

ಚಂದನವನದ 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್ ಮತ್ತು ನಟಿ ಸಂಚಿತಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಹೊಸ ಸಿನಿಮಾ 'ಬದ್ಮಾಶ್' ಶೂಟಿಂಗ್ ಹಂತದಲ್ಲಿರುವಾಗಲೇ ದೊಡ್ಡ ಸುದ್ದಿ ಮಾಡಿದೆ.

ಅಂದಹಾಗೆ ನಟ ಧನಂಜಯ್ ಮತ್ತು ನಟಿ ಸಂಚಿತಾ ಕಾಂಬಿನೇಷನ್ ನ 'ಬದ್ಮಾಶ್;' ಸಿನಿಮಾ ಸದ್ಯಕ್ಕೆ ಶೂಟಿಂಗ್ ಹಂತದಲ್ಲಿರುವಾಗಲೇ ಹಿಂದಿಗೆ ರೀಮೇಕ್ ಆಗುವ ಮೂಲಕ ಕನ್ನಡ ಸಿನಿಪ್ರಿಯರಿಗೆ ಹೆಮ್ಮೆ ಆಗುವ ರೀತಿಯಲ್ಲಿ ಸದ್ದು ಮಾಡಿದೆ.[ಬಾಲಿವುಡ್ ನ ಟಾಪ್ 10 ಶ್ರೀಮಂತರು ಇವರೇ ಸ್ವಾಮಿ]


Hindi Actor Salman Khan to remake in kannada movie 'Badmaash'

ಅಷ್ಟಕ್ಕೂ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲು ಒಪ್ಪಿಕೊಂಡಿರುವವರು ಯಾರು ಗೊತ್ತಾ?, ಬಿಟೌನ್ ನಲ್ಲಿ ಬಾಕ್ಸಾಫೀಸ್ ಸುಲ್ತಾನ ಅಂತಾನೇ ಖ್ಯಾತಿ ಗಳಿಸಿರುವ ನಟ ಸಲ್ಮಾನ್ ಖಾನ್.


Hindi Actor Salman Khan to remake in kannada movie 'Badmaash'

ಹೌದು 'ಭಜರಂಗಿ ಭಾಯ್ ಜಾನ್', 'ಪ್ರೇಮ್ ರತನ್ ಧನ್ ಪಾಯೋ', ಮುಂತಾದ ಸಿನಿಮಾಗಳ ಯಶಸ್ಸಿನ ಗುಂಗಿನಲ್ಲಿರುವ ನಟ ಸಲ್ಲು ಅವರು 'ಬದ್ಮಾಶ್' ಚಿತ್ರವನ್ನು ಹಿಂದಿ ಭಾಷೆಯಲ್ಲಿ ಮಾಡಲು ಆಸಕ್ತಿ ತೋರಿದ್ದಾರೆ. ಚಿತ್ರದ ಮೇಕಿಂಗ್ ಮತ್ತು ಸ್ಕ್ರಿಪ್ಟ್ ಇಷ್ಟಪಟ್ಟ ಸಲ್ಮಾನ್ ಖಾನ್ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರನ್ನು ನೇರವಾಗಿ ಮುಂಬೈಗೆ ಕರೆಸಿಕೊಂಡಿದ್ದಾರೆ.[ರಣಬೀರ್ ಮೇಲೆ ಸೇಡಿನ ಜ್ವಾಲೆ, ಸಲ್ಲು ಜೊತೆ ಸೇರಿಕೊಂಡ ಕ್ಯಾಟ್]


Hindi Actor Salman Khan to remake in kannada movie 'Badmaash'

ಇನ್ನು ಈ ಸಿಹಿ ಸುದ್ದಿಯನ್ನು ಫಿಲ್ಮಿಬೀಟ್ ಕನ್ನಡಕ್ಕೆ ಖಚಿತಪಡಿಸಿರುವ ಚಿತ್ರತಂಡ ನಟ ಸಲ್ಮಾನ್ ಖಾನ್ ಅವರಿಗೆ 'ಬದ್ಮಾಶ್' ಚಿತ್ರವನ್ನು ಹಿಂದಿ ಭಾಷೆಗೆ ರೀಮೇಕ್ ಮಾಡುವ ಬಗ್ಗೆ ಇರುವ ಉತ್ಸುಕತೆಯನ್ನು ನಮ್ಮೊಂದಿಗೆ ಸಂತಸದಿಂದ ಹಂಚಿಕೊಂಡಿದ್ದಾರೆ.


Hindi Actor Salman Khan to remake in kannada movie 'Badmaash'

ಇದೀಗ ಹಿಂದಿ ಭಾಷೆಗೆ ಕನ್ನಡ ಚಿತ್ರ 'ಬದ್ಮಾಶ್' ರೀಮೇಕ್ ಆಗೋದು ಬಹುತೇಕ ಖಚಿತಗೊಂಡಿದ್ದು, ನಿರ್ದೇಶಕ ಆಕಾಶ್ ಶ್ರೀವತ್ಸ ಆಕ್ಷನ್-ಕಟ್ ಹೇಳಿರುವ 'ಬದ್ಮಾಶ್' ಚಿತ್ರಕ್ಕೆ ನಿರ್ಮಾಪಕ ರವಿ ಕಶ್ಯಪ್ ಅವರು ಬಂಡವಾಳ ಹೂಡಿದ್ದಾರೆ.[ಕೋರ್ಟ್ ತೀರ್ಪಿಗೆ ಕುಸಿದು ಬಿದ್ದ ಸಲ್ಲು ಪ್ರೇಯಸಿ ಲುಲಿಯಾ.! ]


ಚಿತ್ರದ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ ಸದ್ಯಕ್ಕೆ ಆಡಿಯೋ ಬಿಡುಗಡೆ ಮಾಡುವ ತಯಾರಿಯಲ್ಲಿದೆ.


Hindi Actor Salman Khan to remake in kannada movie 'Badmaash'

ಒಟ್ನಲ್ಲಿ ಶೂಟಿಂಗ್ ಹಂತದಲ್ಲಿರುವಾಗಲೇ ಕನ್ನಡ ಚಿತ್ರವೊಂದು ಪರಭಾಷೆಗೆ ರೀಮೇಕ್ ಆಗುತ್ತಿರುವ ಸುದ್ದಿಯಾಗಿರುವುದು ಇದೇ ಮೊದಲು. ಅಂತೂ ನಮ್ಮ 'ಬದ್ಮಾಶ್' ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಬಾಲಿವುಡ್ ಅಂಗಳದಲ್ಲೂ ಸೌಂಡ್ ಮಾಡೋದು ಪಕ್ಕಾ ಅಂತಾಯ್ತು.

English summary
Kannada Actor Dhananjay and Actress Sanchita Shetty Starrer Kannada movie 'Badmaash' will be soon Remade into Hindi language. Action-romance 'Badmaash' directed by Akash Srivatsa. Boxoffice Sultana Salman Khan will be star in the official remake of 'Badmaash' in Hindi language.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada