»   » 'ತಮಿಳು ಬಿಗ್ ಬಾಸ್' ಬ್ಯಾನ್ ಮಾಡ್ಬೇಕಂತೆ!

'ತಮಿಳು ಬಿಗ್ ಬಾಸ್' ಬ್ಯಾನ್ ಮಾಡ್ಬೇಕಂತೆ!

Posted By:
Subscribe to Filmibeat Kannada

ಹಿಂದಿ ಮತ್ತು ಕನ್ನಡ ಬಿಗ್ ಬಾಸ್ ಕಾರ್ಯಕ್ರಮಗಳ ಯಶಸ್ಸಿನ ನಂತರ ತಮಿಳು ಹಾಗೂ ತೆಲುಗಿನಲ್ಲಿ ಬಿಗ್ ಬಾಸ್ ಅರಂಭವಾಗಿರುವುದು ಗೊತ್ತಿದೆ. 'ತೆಲುಗು ಬಿಗ್ ಬಾಸ್' ಇನ್ನು ಶುರುವಾಗಬೇಕಿದೆ. 'ತಮಿಳು ಬಿಗ್ ಬಾಸ್' ಈಗಾಗಲೇ ಜೂನ್ 25 ರಿಂದ ಆರಂಭವಾಗಿದೆ. ಆದ್ರೀಗ, ತಮಿಳು ಬಿಗ್ ಬಾಸ್ ಕಾರ್ಯಕ್ರಮವನ್ನ ಬ್ಯಾನ್ ಮಾಡುವಂತೆ ತಮಿಳುನಾಡಿನ ಕೆಲವು ಹಿಂದೂ ಪರ ಸಂಘಟನೆಗಳು ಆಗ್ರಹ ಮಾಡುತ್ತಿವೆ.

ಕಮಲ್ ಹಾಸನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್ ತಮಿಳು' ರಿಯಾಲಿಟಿ ಶೋ ತಮಿಳುನಾಡು ಜನರ ಸಂಸ್ಕೃತಿ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಹಿಂದು ಮಕ್ಕಳ್ ಕಚ್ಚಿ ಪಕ್ಷ ಸೇರಿದಂತೆ ಕೆಲವು ಸಂಘಟನೆಗಳು, ತಕ್ಷಣವೇ ನಿರೂಪಕ ಕಮಲ್ ಹಾಗೂ ಎಲ್ಲಾ 15 ಸ್ಪರ್ಧಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿವೆ.

'ಬಿಗ್ ಬಾಸ್ ರಿಯಾಲಿಟಿ ಶೋ'ಗೆ ಕಮಲ್ ಹಾಸನ್ ನಿರೂಪಕ!

Hindu Group Wants Biggboss Tamil Banned

ಗಂಜ ಕರಪ್ಪು, ಹರತಿ, ನಮಿತಾ, ಓವಿಯಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಶೋನಲ್ಲಿ ಸ್ಪರ್ಧಿಗಳಾಗಿದ್ದು, ಶೇ. 75 ರಷ್ಟು ಭಾಗ ಬೆತ್ತಲಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಸ್ಪರ್ಧಿಗಳು ಅಶ್ಲೀಲವಾಗಿ ಮಾತನಾಡುತ್ತಾರೆ ಎಂದು ದೂರಲಾಗಿದೆ. ಈ ಮೂಲಕ ತಮಿಳು ಸಂಸ್ಕೃತಿಗೆ ಧಕ್ಕೆ ಸ್ಪರ್ಧಿಗಳು ತರುತ್ತಿದ್ದಾರೆ ಎಂದು ರಾಷ್ಟ್ರೀಯ ಹಿಂದೂ ಪಾರ್ಟಿ ಪೊಲೀಸರಿಗೆ ದೂರು ನೀಡಿದೆ.

ಅಷ್ಟೇ ಅಲ್ಲದೇ, ಕೆಲವು ಸ್ಪರ್ಧಿಗಳು ಜಲ್ಲಿಕಟ್ಟು ವಿವಾದದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಕೆಲ ರಾಜಕೀಯ ನಾಯಕರ ವಿರುದ್ಧ ಟೀಕೆ ಮಾಡಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಹಾಗೂ ನಿರೂಪಕ ಕಮಲ್ ಹಾಸನ್ ''ಬಿಗ್ ಬಾಸ್ ತಂಡದಿಂದ ತಪ್ಪಾಗಿದ್ದರೆ ಅದನ್ನು ಕಾನೂನು ನೋಡಿಕೊಳ್ಳುತ್ತದೆ'' ಎಂದಿದ್ದಾರೆ.

ಕನ್ನಡ 'ಬಿಗ್ ಬಾಸ್'ನಲ್ಲಿ ಸುದೀಪ್, ತಮಿಳಿನಲ್ಲಿ ಕಮಲ್, ತೆಲುಗಿನಲ್ಲಿ ಯಾರು?

English summary
Actor-filmmaker Kamal Haasan is facing the ire of a right-wing group that wants the police to arrest him and ban the reality television show "Bigg Boss Tamil" for hurting sentiments of people in Tamil Nadu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada