ಸಿದ್ಧರಾಮಯ್ಯನವರೇ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ ಬಂಧನ ಯಾವಾಗ ..?
ತಂದೆ ಜಮೀರ್ ಅಹ್ಮದ್ ಪ್ರಭಾವಳಿಯನ್ನು ಬಳಸಿಕೊಳ್ಳದೆ, ಚಿತ್ರರಂಗದಲ್ಲಿ ದಾರಿಯನ್ನು ಹುಡುಕಿಕೊಂಡು ಹೊರಟವರು ಝೈದ್ ಖಾನ್. ಬನಾರಸ್ ಚಿತ್ರದ ಮೂಲಕ ಭರವಸೆಯ ಬೆಳಕಿನಂತೆ ಕಂಡ ಝೈದ್ ಖಾನ್ ಅವರ ಮುಂದಿನ ಹೆಜ್ಜೆ ಮೇಲೆ ಎಲ್ಲರ ಕಣ್ಣಿತ್ತು. ಈ ಬಾರಿ ಯಾವ ಕಥೆಯನ್ನ ಆಯ್ಕೆ ಮಾಡಿಕೊಳ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೆ ಉತ್ತರ ಕೂಡ ಸಿಕ್ಕಿತ್ತು. ದಿಲ್‌ವಾಲಾ, ಶಕ್ತಿ, ರ್ಯಾಂಬೋ 2, ಕಾಣೆಯಾದವರ ಬಗ್ಗೆ ಪ್ರಕಟಣೆ, ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಜೊತೆ ಚಿತ್ರ ಕೂಡ ಶುರುವಾಗಿತ್ತು. ಆ ಚಿತ್ರದ ಹೆಸರು ''ಕಲ್ಟ್'' ಎಂದು ಕೂಡ ಜಗಜ್ಜಾಹೀರಾಗಿತ್ತು.
ಆದರೆ ಈಗ ಈ ಝೈದ್ ಖಾನ್ ಅವರ ಇದೇ ಚಿತ್ರ ವಿವಾದಕ್ಕೀಡಾಗಿದೆ. ನಿರ್ದೇಶಕ ಅನಿಲ್ ಕುಮಾರ್ ಮತ್ತು ಝೈದ್ ಖಾನ್ ವಿರುದ್ಧ ಡ್ರೋನ್ ಆಪರೇಟರ್ ಸಂತೋಷ್ ಆರೋಪ ಮಾಡಿದ್ದಾರೆ. ನಷ್ಟ ಪರಿಹಾರ ಮಾಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದಾರೆ. ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನವನ್ನು ಮಾಡಿದ್ದಾರೆ. ಸದ್ಯ ಮಾಗಡಿ ರೋಡ್ ಠಾಣೆಗೆ ಸಂತೋಷ್ ಸಹೋದರಿ ದೂರು ನೀಡಿದ್ದಾರೆ.ಆಸ್ಪತ್ರೆಯಲ್ಲಿ ಡ್ರೋನ್ ಆಪರೇಟರ್ ಸಂತೋಷ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಅನೇಕರು ಈ ವಿಚಾರದ ಕುರಿತು ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.

ಇದರ ನಡುವೆ ಈಗ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಆಸ್ಪತ್ರೆಯಲ್ಲಿ ಸಂತೋಷ್ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ಅಲ್ಲದೆ ಸಂತೋಷ್ ಅವರಿಗೆ ಹೋರಾಟದ ಮೂಲಕ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪುನೀತ್ ಕೆರೆಹಳ್ಳಿ ಸಿದ್ಧರಾಮಯ್ಯನವರೆ ಅಮಾಯಕ ಹಿಂದೂ ಯುವಕನನ್ನು ಬೆದರಿಸಿ ಖಾಲಿ ಹಾಳೆಯ ಮೇಲೆ ಬಲವಂತವಾಗಿ ಸಹಿ ಮಾಡಿಸಿಕೊಂಡ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರ ಮಗ ಝೈದ್ ಖಾನ್ ಮೇಲೆ FIR ಯಾವಾಗ ? ಎಂಬ ಪ್ರಶ್ನೆ ಕೇಳಿದ್ದಾರೆ. ಅವರ ಬಂಧನ ಯಾವಾಗ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ.
ಮುಂದುವರೆದು ಸ್ನೇಹಿತರೆ ಸಂತೋಷ್ ಗೆ ನ್ಯಾಯ ಸಿಗಬೇಕು ಎಂದರೆ ಪ್ರತಿಯೊಬ್ಬರೂ ಈ ವಿಡಿಯೋ ಶೇರ್ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿ! ತಂದೆ ಇಲ್ಲದೆ ಸಂಪೂರ್ಣ ಮನೆ ಜವಾಬ್ದಾರಿ ಹೊತ್ತಿರುವ ಹಿಂದೂ ಯುವಕನ ಪರ ಧ್ವನಿಯಾಗಿ ಜಮೀರ್ ನಿನಗೆ ಮಾನವೀಯತೆ ಇದ್ದರೆ ಕೂಡಲೇ ಈ ಹುಡುಗನಿಗೆ ನಿನ್ನ ಮಗನಿಂದ ಆದ ಅನ್ಯಾಯಕ್ಕೆ ಕ್ಷಮೆ ಕೇಳಿ ಪರಿಹಾರ ನೀಡು ಎಂದು ಕೂಡ ಪುನೀತ್ ಕೆರೆಹಳ್ಳಿ ಆಗ್ರಹಿಸಿದ್ದಾರೆ.
ಅಂದ್ಹಾಗೇ ಝೈದ್ ಖಾನ್ ಅಭಿನಯದ ಎರಡನೇ ಚಿತ್ರ 'ಕಲ್ಟ್'ಗೆ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ನ.25ರಂದು ಚಿತ್ರದುರ್ಗದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಒಂದು ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಅವರು ಶೂಟ್ ಮಾಡುತ್ತಿದ್ದರು. ಶೂಟಿಂಗ್ ವೇಳೆ ವಿಂಡ್ ಫ್ಯಾನ್ಗೆ ಟಚ್ ಆಗಿ ಡ್ರೋನ್ ತುಂಡಾಗಿತ್ತು. ಇದಾದ ಬಳಿಕ ಸಂತೋಷ್ಗೆ ಚಿತ್ರತಂಡ ಕೊಂಚವೂ ನಷ್ಟ ತುಂಬಿ ಕೊಟ್ಟಿರಲಿಲ್ಲ.ಈ ಬಗ್ಗೆ ಅವರು ಚಿತ್ರ ತಂಡದ ಬಳಿ ಕೇಳಿಕೊಂಡಿದ್ದರು. ಈ ವೇಳೆ ನಷ್ಟ ಪರಿಹಾರ ಮಾಡದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಮೆಮೊರಿ ಕಾರ್ಡ್ ಕಿತ್ತುಕೊಂಡಿರುವ ಆರೋಪವನ್ನು ಸಂತೋಷ್ ಮಾಡಿದ್ದಾರೆ.


Click it and Unblock the Notifications











