ಅಪ್ಪು ಕಾಮಿಡಿ ಪಾತ್ರ ಮಾಡ್ಬೇಕು, ಯಶ್ ಪೌರಾಣಿಕ ಪಾತ್ರ ಮಾಡ್ಬೇಕು.!
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಸಿನಿಮಾ ಮಾಡ್ಬೇಕು ಎಂಬ ಆಸೆ ಅಭಿಮಾನಿಗಳಲ್ಲಿದೆ. ಆಸೆಗೆ ಜೀವ ನೀಡುವಂತೆ ಇಬ್ಬರು ಮಾತನಾಡಿದ್ದು, ಸಮಯ ಬಂದ್ರೆ ಒಟ್ಟಿಗೆ ಆಕ್ಟ್ ಮಾಡ್ತೀವಿ ಎಂದಿದ್ದಾರೆ.
ಇತ್ತೀಚಿಗಷ್ಟೆ ಚಿರಂಜೀವಿ ಸರ್ಜಾ ಅವರ ಹೊಸ ಚಿತ್ರಕ್ಕೆ ಚಾಲನೆ ನೀಡಿದ ಯಶ್ ಮತ್ತು ಪುನೀತ್, ಇಬ್ಬರು ಒಟ್ಟಿಗೆ ಸಿನಿಮಾ ಮಾಡೋ ಇಂಗಿತ ವ್ಯಕ್ತಪಡಿಸಿದ್ದರು.
ಈ ವೇಳೆ ಯಶ್ ಯಾವ ರೀತಿ ಪಾತ್ರ ಮಾಡ್ಬೇಕು ಎಂದು ಅಪ್ಪುಗೆ, ಪುನೀತ್ ಯಾವ ರೀತಿ ಪಾತ್ರ ಮಾಡ್ಬೇಕು ಎಂದು ಯಶ್ ಗೆ ಕೇಳಿದ ಪ್ರಶ್ನೆಗೆ ಇಬ್ಬರು ಸರ್ಪ್ರೈಸ್ ಉತ್ತರ ನೀಡಿದ್ದಾರೆ.

ಪುನೀತ್ ಬಗ್ಗೆ ಮಾತನಾಡಿದ ಯಶ್ ''ಅಪ್ಪು ಅವರು ಔಟ್ ಅಂಡ್ ಔಟ್ ಕಾಮಿಡಿ ಪಾತ್ರವೊಂದು ಮಾಡ್ಬೇಕು. ಈ ಹೀರೋಯಿಸಂ, ಸ್ಟಾರ್ ಎಂಬುದನ್ನ ಮರೆತು ಪಕ್ಕಾ ಕಾಮಿಡಿ ಪಾತ್ರ ಮಾಡ್ಬೇಕು ಎಂಬ ಆಸೆ ಇದೆ'' ಎಂದರು.
ಇನ್ನು ಯಶ್ ಯಾವ ರೀತಿ ಪಾತ್ರ ಮಾಡ್ಬೇಕು ಎಂಬುದರ ಬಗ್ಗೆ ಮಾತನಾಡಿದ ಯಶ್ '' ಸದ್ಯ ಅವರ ಗಡ್ಡ, ಹೇರ್ ಸ್ಟೈಲ್, ಫಿಸಿಕ್ ಎಲ್ಲ ನೋಡಿದ್ರೆ ಒಂದು ಐತಿಹಾಸಿಕ ಅಥವಾ ಪೌರಾಣಿಕ ಪಾತ್ರ ಮಾಡ್ಬೇಕು. ಗಜಕೇಸರಿ ಚಿತ್ರದಲ್ಲಿ ಕೆಲವು ದೃಶ್ಯ ಬರುತ್ತೆ, ಬಟ್ ಪೂರ್ಣ ಪ್ರಮಾಣದಲ್ಲಿ ಆ ರೀತಿ ಪಾತ್ರದಲ್ಲಿ ನೋಡ್ಬೇಕು'' ಎಂದಿದ್ದಾರೆ.

ಕೆಜಿಎಫ್ ಚಾಪ್ಟರ್ 1 ಮುಗಿಸಿ ಚಾಪ್ಟರ್ 2 ಚಿತ್ರಕ್ಕೆ ಯಶ್ ಸಜ್ಜಾಗಿದ್ದಾರೆ. ಈ ಕಡೆ ನಟಸಾರ್ವಭೌಮ ಸಿನಿಮಾ ಮುಗಿಸಿ ಯುವರತ್ನ ಚಿತ್ರವನ್ನ ಪುನೀತ್ ಆರಂಭಿಸಲಿದ್ದಾರೆ.


Click it and Unblock the Notifications











