»   » ಹಾಟ್ ನಟಿಯರ ನೆಚ್ಚಿನ 'ಬಿಕಿನಿ' ಹುಟ್ಟಿದ ಕಥೆ ಇಲ್ಲಿದೆ

ಹಾಟ್ ನಟಿಯರ ನೆಚ್ಚಿನ 'ಬಿಕಿನಿ' ಹುಟ್ಟಿದ ಕಥೆ ಇಲ್ಲಿದೆ

Posted By:
Subscribe to Filmibeat Kannada

ಗ್ಲಾಮರ್ ಜಗ್ಗತ್ತಿನಲ್ಲಿ ಇವತ್ತಿಗೂ 'ಬಿಕಿನಿ' ಟ್ರೆಂಡ್ ಆಗಿದೆ. ಆದರೆ, ಈ ಬಿಕಿನಿಗೆ ಸುಮಾರು 71 ವರ್ಷಗಳ ಇತಿಹಾಸ ಇದೆ. ಲೂಯಿಸ್ ರಿಯಾರ್ಡ್ ಎಂಬ ಫ್ರೆಂಚ್ ಫ್ಯಾಶನ್ ಡಿಸೈನರ್ ಮತ್ತು ಆಟೋಮೊಬೈಲ್ ಎಂಜಿನಿಯರ್ ಬಿಕಿನಿಯನ್ನು ಮೊದಲು ಪರಿಚಯಿಸಿದ ವ್ಯಕ್ತಿ. 5 ಜುಲೈ 1946ರಲ್ಲಿ ಮೊದಲ ಬಾರಿಗೆ ಬಿಕಿನಿ ಎಂಟ್ರಿ ಕೊಟ್ಟಿತ್ತು. ಅದೇ ಕಾರಣದಿಂದ ಆ ದಿನವನ್ನು 'ವಿಶ್ವ ಬಿಕಿನಿ ದಿನ' ಅಂತ ಕರೆಯುತ್ತಾರೆ.

ಲೂಯಿಸ್ ರಿಯಾರ್ಡ್ ತಾನು ಮೊದಲ ಬಾರಿಗೆ ವಿನ್ಯಾಸ ಗೊಳಿಸಿದ ಟೂಪೀಸ್ ಉಡುಗೆಯನ್ನು ಫ್ಯಾಶನ್ ಶೋದಲ್ಲಿ ಪ್ರದರ್ಶಿಸುವ ಆಸೆ ಹೊಂದಿದ್ದರು. ಆದರೆ ಅಂದಿನ ಕಾಲದಲ್ಲಿ ಇಂತಹ ಉಡುಪನ್ನು ಧರಿಸುವುದಕ್ಕೆ ಯಾವ ಮಾಡೆಲ್ ಗಳು ಮುಂದೆ ಬರಲಿಲ್ಲ. ನಂತರ ಅದನ್ನು ಡ್ಯಾನ್ಸರ್ ಒಬ್ಬರಿಗೆ ತೊಡಿಸಿ ಲೂಯಿಸ್ ಪ್ರದರ್ಶಿಸಿದರು.

History Of Bikini

ಮಾರ್ಷಲ್ ಐಲ್ಯಾಂಡ್ ನಲ್ಲಿ 'ಬಿಕಿನಿ ಅಟೊಲ್' ಎಂಬ ತಾಣವಿದೆ. ಇದು ಮೊದಲು ಪರಮಾಣು ಪರೀಕ್ಷೆಗೆ ಹೆಸರಾದ ತಾಣ. ಲೂಯಿಸ್ ತಮ್ಮ ಈ ನೂತನ ವಿನ್ಯಾಸ ಮುಂದೆ ಜನರಿಗೆ ನ್ಯೂಕ್ಲಿಯರ್ ಬಾಂಬ್ ನಂತೆ ಶಾಕ್ ನೀಡಲಿದೆ ಎಂದು ಆ ವಿನ್ಯಾಸಕ್ಕೆ ಬಿಕಿನಿ ಎಂದು ಹೆಸರಿಟ್ಟರು. ಆ ಹೆಸರು ಇಂದಿಗೂ ಮುಂದುವರೆದುಕೊಂಡು ಬಂದಿದೆ.

History Of Bikini

ಬಿಕಿನಿ ಬಂದಾಗ ಸ್ವಲ್ಪ ವಾದ - ವಿವಾದ ನಡೆಯಿತು. ಆ ನಂತರ ಅದು ಬೀಚ್ ವೇರ್ ಆಗಿ ಫೇಮಸ್ ಆಯ್ತು. ಈಗೀಗಾ ಬಿಕಿನಿ ಕೂಡ ಒಂದು ಕಮಾನ್ ಡ್ರೆಸ್ ಆಗಿದೆ.

Read more about: bikini, ಬಿಕಿನಿ
English summary
'Bikini' was first introduced in July 5, 1946. 'Louis Reard' is a inventor of bikini.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada