ಲೋಕಲ್ ಲೋಕಿ ಮತ್ತು ಪ್ರಥಮ್ ಕಿತ್ತಾಟಕ್ಕೆ ಅಸಲಿ ಕಾರಣ ಇದೇ!

By Bharath Kumar

ಪ್ರಥಮ್ ಮತ್ತು ಲೋಕೇಶ್ ಅವರ ಮಧ್ಯೆ ಈ ಜಗಳ ಯಾಕೆ ಎಂಬ ಪ್ರಶ್ನೆ ಹಲವರದ್ದು. ಕೆಲವರು ಹೇಳ್ತಾರೆ ಇದು ಪಬ್ಲಿಸಿಟಿ ಬಿಡಿ ಅಂತ....! ಮತ್ತೆ ಕೆಲವರು ಹೇಳ್ತಿದ್ದಾರೆ ಇವರು 'ಬಿಗ್ ಬಾಸ್' ಹಣಕ್ಕಾಗಿ ಕಿತ್ತಾಡುತ್ತಿದ್ದಾರೆ ಅಂತ....! ನಿಜಕ್ಕೂ ಇವರಿಬ್ಬರ ಮಧ್ಯೆ ಆಗಿದ್ದಾದರೂ ಏನು?

ಒಂದ್ಕಾಲದಲ್ಲಿ ಒಬ್ಬರಿಗೊಬ್ಬರು ಅಂತಿದ್ದ ಪ್ರಥಮ್ ಮತ್ತು ಲೋಕಿ, ಈಗ ದಿಢೀರ್ ಅಂತ ಸಾಯುವ ಮಟ್ಟಕ್ಕೆ ಬಂದು ನಿಂತಿದ್ದಾರೆ ಅಂದ್ರೆ, ಇಲ್ಲೇನೋ ಆಗಿರಬೇಕು ಎಂಬ ಅನುಮಾನ ಅಂತೂ ಕಾಡದೆ ಇರಲ್ಲ.[ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!]

ಅಷ್ಟಕ್ಕೂ, ಇವರಿಬ್ಬರ ಜಗಳ ನಿನ್ನೆ ಮೊನ್ನೆಯದ್ದಲ್ಲ. ಕಳೆದ ಕೆಲವು ತಿಂಗಳುಗಳಿಂದ ನಡೆದುಕೊಂಡು ಬಂದಿದೆ. ಹಾಗಾದ್ರೆ, ಇವರಿಬ್ಬರ ಕಿರಿಕ್ ಶುರುವಾಗಿದ್ದು ಎಲ್ಲಿಂದ? ಮುಂದೆ ಓದಿ.....

'ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಭಿನ್ನಾಭಿಪ್ರಾಯ!

'ಬಿಗ್ ಬಾಸ್'ನಿಂದ ಹೊರಬಂದ ಮೇಲೆ ಭಿನ್ನಾಭಿಪ್ರಾಯ!

'ಬಿಗ್ ಬಾಸ್' ಗೆದ್ದು ಬಂದ ಕೆಲವು ದಿನಗಳ ನಂತರ ಪ್ರಥಮ್ ಗೆ ಲೋಕೇಶ್ ಅವರ ಮೇಲೆ ಒಂದು ರೀತಿಯ ಮುನಿಸು ಉಂಟಾಗಿತ್ತು. ಇದಕ್ಕೆ ಕಾರಣ ಮೂರನೇ ವ್ಯಕ್ತಿ ಹೇಳಿದ ಆ ಮಾತು.

'ಆ' ವ್ಯಕ್ತಿ ಹೇಳಿದ್ದೇನು?

'ಆ' ವ್ಯಕ್ತಿ ಹೇಳಿದ್ದೇನು?

ಪ್ರಥಮ್ 'ಬಿಗ್ ಬಾಸ್' ಮನೆಯಲ್ಲಿರಬೇಕಾದ್ರೆ, ಲೋಕೇಶ್ ಪ್ರಥಮ್ ಹೆಸರು ಹೇಳಿಕೊಂಡು ಪ್ರಚಾರ ಪಡೆದುಕೊಂಡಿದ್ದಾನೆ ಎಂದು ಆ ಮೂರನೇ ವ್ಯಕ್ತಿ ಪ್ರಥಮ್ ಅವರಿಗೆ ಹೇಳಿದ್ದರಂತೆ. ಅದು ಲೋಕೇಶ್ ಅವರ ಮೇಲೆ ಕೋಪಕ್ಕೆ ಕಾರಣವಾಯಿತು.['ಪ್ರಥಮ್'ಗೆ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗುತ್ತಿರುವ ಲೋಕೇಶ್ ಯಾರು?]

'ಬಿಗ್ ಬಾಸ್' ಹಣದ ವಿಚಾರದಲ್ಲಿ ಮನಸ್ತಾಪ!

'ಬಿಗ್ ಬಾಸ್' ಹಣದ ವಿಚಾರದಲ್ಲಿ ಮನಸ್ತಾಪ!

'ಬಿಗ್ ಬಾಸ್' ನಲ್ಲಿ ಗೆದ್ದ ಹಣಕ್ಕೆ ಸಂಬಂಧಿಸಿದಂತೆ ಲೋಕೇಶ್ ಮತ್ತು ಪ್ರಥಮ್ ಅವರ ಮಧ್ಯೆ ವೈಮನಸ್ಸು ಮೂಡಿತ್ತಂತೆ. ಈ ವೇಳೆ ಜನರು ಕೂಡ 'ಬಿಗ್ ಬಾಸ್' ಹಣದ ಕುರಿತು ಪ್ರಶ್ನೆ ಮಾಡಲು ಶುರು ಮಾಡಿದರು. 'ಬಿಗ್ ಬಾಸ್' ಹಣ ಬಂತಾ? ಬಂದಿದ್ದರೂ ಯಾಕೆ ಇನ್ನೂ ಯೋಧರಿಗೆ, ರೈತರಿಗೆ ಕೊಟ್ಟಿಲ್ಲ ಎಂಬ ಚರ್ಚೆಗಳು ಶುರುವಾದವು.[ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಥಮ್ ನಾಲ್ಕು ಗಂಟೆ ಬಳಿಕ ಆಸ್ಪತ್ರೆಗೆ ದಾಖಲು]

'ಬಿಗ್ ಬಾಸ್' ಹಣದ ವಿಚಾರದಲ್ಲಿ ವಿಡಿಯೋ ವಾರ್!

'ಬಿಗ್ ಬಾಸ್' ಹಣದ ವಿಚಾರದಲ್ಲಿ ವಿಡಿಯೋ ವಾರ್!

'ಬಿಗ್ ಬಾಸ್' ಹಣದ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಲಾರಿಟಿ ಕೊಡಲು, ಪ್ರಥಮ್ ಅವರು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದರು. ಈ ವೇಳೆ ಪ್ರಥಮ್ ಅವರ ವಿರುದ್ಧ ಕಾಮೆಂಟ್ ಮಾಡಿದವರಿಗೆ ಪ್ರಥಮ್ ನಿಂದಿಸಿದ್ದರು. ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡೋರು ನಾಯಿಗಳು, ''ನಾನು ನಾಯಿಗಳಿಗೆ ಬಿಸ್ಕತ್ ಹಾಕಲ್ಲ'' ಎಂದು ಹೇಳಿಕೆ ನೀಡಿದರು.[ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ]

ಪ್ರಥಮ್ ವಿರುದ್ಧವಾಗಿ ಲೋಕೇಶ್ ವಿಡಿಯೋ!

ಪ್ರಥಮ್ ವಿರುದ್ಧವಾಗಿ ಲೋಕೇಶ್ ವಿಡಿಯೋ!

ಈ ಹೇಳಿಕೆಯನ್ನ ಖಂಡಿಸಿ ಲೋಕೇಶ್ ಅವರು ಒಂದು ವಿಡಿಯೋ ವನ್ನ ಅಪ್ ಲೋಡ್ ಮಾಡಿದರು. ಈ ವಿಡಿಯೋದಲ್ಲಿ ಪ್ರಥಮ್ ವಿರುದ್ಧ ವಾಗ್ದಾಳಿ ನಡೆಸಿದರು. ಫೇಸ್ ಬುಕ್ ನಲ್ಲಿ ಹಾಕಿರುವ ಆ ವಿಡಿಯೋವನ್ನ ಡಿಲೀಟ್ ಮಾಡುವಂತೆ ಎಚ್ಚರಿಕೆ ಕೊಟ್ಟಿದ್ದರು.[ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ]

ಖಾಸಗಿ ವಾಹಿನಿಯಲ್ಲಿ ಪ್ರಥಮ್ ಕಾರ್ಯಕ್ರಮ

ಖಾಸಗಿ ವಾಹಿನಿಯಲ್ಲಿ ಪ್ರಥಮ್ ಕಾರ್ಯಕ್ರಮ

ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಪ್ರಥಮ್ ಅವರ ಬಗ್ಗೆ ಖಾಸಗಿ ವಾಹಿನಿಯಲ್ಲಿ ಪ್ರಥಮ್ ಕುರಿತು ವಿಶೇಷ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಥಮ್ ಅವರ ವ್ಯಕ್ತಿತ್ವದ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿತ್ತು ಎನ್ನಲಾಗಿದೆ. ಈ ಕಾರ್ಯಕ್ರಮವನ್ನ ಮಾಡಲು ಲೋಕೇಶ್ ಕಾರಣ ಎಂಬ ಆರೋಪ ಕೂಡ ಪ್ರಥಮ್ ಮಾಡಿದ್ದರು.[ಪ್ರಥಮ್ ಆತ್ಮಹತ್ಯೆ ಯತ್ನ ಬಳಿಕ ಲೋಕೇಶ್ ಬಿಚ್ಚಿಟ್ಟ ಸ್ಪೋಟಕ ಸುದ್ದಿ!]

ಅವಾಚ್ಯ ಶಬ್ದಗಳ ಆಡಿಯೋ ಕ್ಲಿಪ್

ಅವಾಚ್ಯ ಶಬ್ದಗಳ ಆಡಿಯೋ ಕ್ಲಿಪ್

ಪ್ರಥಮ್ ಗೆ ದೂರವಾಣಿ ಕರೆ ಮಾಡಿದ್ದ ಲೋಕೇಶ್, ''ನಾನು ಫೇಸ್ ಬುಕ್ ನಲ್ಲಿ ಹಾಕಿದ್ದ ವಿಡಿಯೋಗಳನ್ನ ತೆಗೆದು ಹಾಕಿದ್ದೀನಿ'' ಎಂದು ಹೇಳಿದಾಗ, ಪ್ರಥಮ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಆಡಿಯೋ ಕ್ಲಿಪ್ ನ ಲೋಕೇಶ್ ಅವರು ಮಾಧ್ಯಮಗಳಿಗೆ ನೀಡಿದ್ದರು. ಇದು ಪ್ರಥಮ್ ಅವರ ಕೋಪವನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.[ನಿದ್ರೆ ಮಾತ್ರೆ ಸೇವಿಸಿದ್ಯಾಕೆ.? 'ಕೊನೆಯ' ಲೈವ್ ನಲ್ಲಿ ಪ್ರಥಮ್ ಬಾಯ್ಬಿಟ್ಟ ಸತ್ಯವೇನು.?]

ಲೋಕೇಶ್ ಮೇಲೆ ರಾತ್ರಿ ಹಲ್ಲೆ!

ಲೋಕೇಶ್ ಮೇಲೆ ರಾತ್ರಿ ಹಲ್ಲೆ!

ಈ ವಿಷ್ಯಕ್ಕೆ ಸಂಬಂಧಿಸಿದಂತೆ ನಿನ್ನೆ (ಮಾರ್ಚ್ 4) ರಾತ್ರಿ ಲೋಕಿ ಅವರನ್ನ ಭೇಟಿ ಮಾಡುವಂತೆ ಹೇಳಿದ್ದ ಪ್ರಥಮ್, ಲೋಕಿ ಬಂದ ಮೇಲೆ ಅವರ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರಂತೆ. ಹೀಗೆಂದು ಲೋಕೇಶ್ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂಜಾನೆ ಆತ್ಮಹತ್ಯೆಗೆ ಯತ್ನ!

ಮುಂಜಾನೆ ಆತ್ಮಹತ್ಯೆಗೆ ಯತ್ನ!

ಈ ಘಟನೆ ಬಳಿಕ ನಾಗರಭಾವಿಯ ತಮ್ಮ ಅಪಾರ್ಟ್ ಮೆಂಟ್ ಗೆ ಬಂದ ಪ್ರಥಮ್, ಮುಂಜಾನೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೂ ಮುಂಚೆ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದ ಪ್ರಥಮ್ ''ನನ್ನ ಈ ನೋವಿಗೆ ಲೋಕೇಶ್ ಕಾರಣವೆಂದು'' ಹೇಳಿಕೆ ನೀಡಿದ್ದರು.[ಮಗನ ಪರಿಸ್ಥಿತಿ ಕಂಡು ದುಃಖತಪ್ತರಾದ ಪ್ರಥಮ್ ತಂದೆ ಮಲ್ಲಣ್ಣ]

More from Filmibeat

English summary
Rift Between Olle Huduga Pratham and His Friend Local Lokesh. Here is the complete report on the History about Pratham and His Freind Lokesh's rift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X